ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ದಕ್ಷಿಣ ಆಫ್ರಿಕಾ, ಐರ್ಲೆಂಡ್‌ ಪ್ರವಾಸಕ್ಕೆ ಇಂಗ್ಲೆಂಡ್‌ ತಂಡ ಪ್ರಕಟ, ಜಾಕೋಬ್‌ ಬೆಥೆಲ್‌ ನಾಯಕ!

ಬಹುನಿರೀಕ್ಷಿತ ದಕ್ಷಿಣ ಆಫ್ರಿಕಾ ವಿರುದ್ದದ ವೈಟ್‌ಬಾಲ್‌ ಸರಣಿಗಳು ಮತ್ತು ಐರ್ಲೆಂಡ್‌ ವಿರುದ್ದದ ಟಿ20ಐ ಸರಣಿಗೆ ಇಂಗ್ಲೆಂಡ್‌ ತಂಡ ಪ್ರಕಟವಾಗಿದೆ. ಇದರ ಜೊತೆಗೆ ತಂಡದ ನಾಯಕತ್ವವನ್ನು ಆಲ್‌ರೌಂಡರ್‌ ಜಾಕೋಬ್‌ ಬೆಥೆಲ್‌ ನೀಡಲಾಗಿದೆ ಎಂದು ಇಸಿಬಿ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಇಂಗ್ಲೆಂಡ್‌ ತಂಡಕ್ಕೆ ಜಾಕೋಬ್‌ ಬೆಥೆಲ್‌ ನಾಯಕ.

ಲಂಡನ್‌: ಬಹುನಿರೀಕ್ಷಿತ ದಕ್ಷಿಣ ಆಫ್ರಿಕಾ ವಿರುದ್ದದ ವೈಟ್‌ಬಾಲ್‌ ಸರಣಿ (ENG vs SA) ಮತ್ತು ಐರ್ಲೆಂಡ್‌ನಲ್ಲಿ ನಡೆಯಲಿರುವ ಟಿ20ಐ ಸರಣಿಗೆ ಇಂಗ್ಲೆಂಡ್‌ ತಂಡವನ್ನು (England Squad) ಪ್ರಕಟಿಸಲಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಏಕದಿನ ಮತ್ತು ಮೂರು ಪಂದ್ಯಗಳ ಟಿ20ಐ ಸರಣಿಯನ್ನು ಆಡಲಿದೆ. ಏಕದಿನ ಸರಣಿ ಸೆಪ್ಟೆಂಬರ್‌ 2ರಂದು ಲೀಡ್ಸ್‌ನ ಹೆಡಿಂಗ್ಲಿ ಅಂಗಳದಲ್ಲಿನ ಮೊದಲನೇ ಪಂದ್ಯದ ಮೂಲಕ ಆರಂಭವಾಗಲಿದೆ. ಇನ್ನು ಟಿ20ಐ ಸರಣಿಯು ಸೆಪ್ಟೆಂಬರ್‌ 17ರಂದು ಆರಂಭವಾಗಲಿದೆ. ಇನ್ನು ಬಹಳಷ್ಟು ಕುತೂಹಲ ಕೆರಳಿಸಿರುವ ಈ ಎರಡೂ ಸರಣಿಗಳಿಗೆ ಇಂಗ್ಲೆಂಡ್‌ ಕ್ರಿಕೆಟ್‌ ಆಯ್ಕೆ ಮಂಡಳಿಯು ತನ್ನ ತಂಡದ ನಾಯಕತ್ವವನ್ನು ಯುವ ಆಲ್‌ರೌಂಡರ್‌ ಬ್ಯಾಟ್ಸ್‌ಮನ್‌ ಜಾಕೋಬ್‌ ಬೆಥೆಲ್‌ಗೆ (Jacob Bethel) ವಹಿಸಿದೆ.

ಜಾಕೋಬ್‌ ಬೆಥೆಲ್‌ಗೆ ಇದೇ ಮೊದಲ ಬಾರಿ ಇಂಗ್ಲೆಂಡ್‌ ತಂಡವನ್ನು ಮುನ್ನಡೆಸಲಿದ್ದಾರೆ. 21ರ ವಯಸ್ಸಿನ ಬೆಥೆಲ್‌ ಅಂತಾರಾಷ್ಟ್ರೀಯ ಪಂದ್ಯವೊಂದರ ನಾಯಕನಾಗಿ ಕಣಕ್ಕಿಳಿಯುತ್ತಿದ್ದು, ಅತೀ ಚಿಕ್ಕ ವಯಸ್ಸಿನ ಇಂಗ್ಲೆಂಡ್‌ ಕ್ರಿಕೆಟ್‌ ತಂಡದ ನಾಯಕ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇನ್ನೂ ಕಳೆದ ಬಾರಿ ಇಂಗ್ಲೆಂಡ್‌ ಲಯನ್ಸ್‌ ಪರ ಚಳಿಗಾಲದಲ್ಲಿ ಮತ್ತು ಇಂಗ್ಲೀಷ್‌ ದೇಶಿ ಪಂದ್ಯಗಳ ಟಿ20 ಮಾದರಿಯಲ್ಲಿ ವೇಗಿ ಸೋನಿ ಬೇಕರ್‌ ಉತ್ತಮ ಪ್ರದರ್ಶನ ತೋರಿ ಎಲ್ಲರ ಗಮನ ಸೆಳೆದಿದ್ದರು. ಈ ಹಿನ್ನಲೆ ಅವರಿಗೆ ನಿರೀಕ್ಷೆಯಂತೆ ತಂಡದಲ್ಲಿ ಸ್ಥಾನ ದೊರಕಿದೆ. ಇನ್ನೂ ಬೆಥೆಲ್‌ ಅವರನ್ನು ಹೊರತುಪಡಿಸಿ ಇಂಗ್ಲೆಂಡ್‌ ತಂಡದ ಹಿರಿಯ ಆಟಗಾರರಿಗೆ ಐರ್ಲೆಂಡ್‌ನಲ್ಲಿ ನಡೆಯಲಿರುವ ಟಿ20ಐ ಸರಣಿಗೆ ವಿಶ್ರಾಂತಿ ನೀಡಲಾಗಿದೆ. ಈ ಪ್ರವಾಸಿ ಟಿ20 ತಂಡಕ್ಕೆ ಮಾರ್ಕಸ್‌ ಟ್ರೆಸ್ಕೊಥಿಕ್‌ ಹೆಡ್‌ ಕೋಚ್‌ ಆಗಿ ನೇಮಕವಾಗಿದ್ದಾರೆ.

2025ರ ಏಷ್ಯಾ ಕಪ್‌ ಟೂರ್ನಿಗೆ ಭಾರತ ತಂಡವನ್ನು ಆರಿಸಿದ ಹರ್ಭಜನ್‌ ಸಿಂಗ್!

ಈ ಬಗ್ಗೆ ಅಧಿಕೃತ ಮಾಹಿತಿ ಹೊರಡಿಸಿರುವ ಇಸಿಬಿ, "ಇಂಗ್ಲೆಂಡ್ ತಂಡದಲ್ಲಿ ಜಾಕೋಬ್ ಬೆಥೆಲ್ ತಮ್ಮ ನಾಯಕತ್ವದ ಗುಣಗಳಿಂದ ಪ್ರಭಾವಿತರಾಗಿದ್ದಾರೆ ಮತ್ತು ಐರ್ಲೆಂಡ್ ವಿರುದ್ಧದ ಸರಣಿಯು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಆ ಕೌಶಲಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಅವರಿಗೆ ಅವಕಾಶವನ್ನು ನೀಡಲಾಗಿದೆ," ಎಂದು ತಿಳಿಸಿದೆ.

"ಸನ್ನಿ ನಾವು ಸ್ವಲ್ಪ ಸಮಯದಿಂದ ಗುರುತಿಸುತ್ತಿರುವ ಆಟಗಾರ ಮತ್ತು ಕಳೆದ ಚಳಿಗಾಲದಲ್ಲಿ ಇಂಗ್ಲೆಂಡ್ ಲಯನ್ಸ್ ಪ್ರವಾಸಗಳಲ್ಲಿ ಅವರು ಪ್ರಭಾವಶಾಲಿಯಾಗಿದ್ದರು. ಅವರು ಈ ಋತುವಿನಲ್ಲಿ ಹ್ಯಾಂಪ್‌ಶೈರ್ ಮತ್ತು ಮ್ಯಾಂಚೆಸ್ಟರ್ ಒರಿಜಿನಲ್ಸ್‌ನೊಂದಿಗೆ ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಫಾರ್ಮ್ ಅನ್ನು ಉಳಿಸಿಕೊಂಡಿದ್ದಾರೆ ಮತ್ತು ಅರ್ಹವಾಗಿ ಅವರಿಗೆ ಅವಕಾಶ ಸಿಕ್ಕಿದೆ," ಎಂದು ಇಸಿಬಿ ಹೇಳಿದೆ.



ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಇಂಗ್ಲೆಂಡ್ ಏಕದಿನ ತಂಡ: ಹ್ಯಾರಿ ಬ್ರೂಕ್ (ನಾಯಕ), ರೆಹಾನ್ ಅಹ್ಮದ್, ಜೋಫ್ರಾ ಆರ್ಚರ್, ಸೋನಿ ಬೇಕರ್, ಟಾಮ್ ಬ್ಯಾಂಟನ್, ಜಾಕೋಬ್ ಬೆಥೆಲ್, ಜೋಸ್ ಬಟ್ಲರ್, ಬ್ರೈಡನ್ ಕಾರ್ಸೆ, ಬೆನ್ ಡಕೆಟ್, ವಿಲ್ ಜ್ಯಾಕ್ಸ್, ಸಾಕಿಬ್ ಮಹಮೂದ್, ಜೇಮೀ ಓವರ್ಟನ್, ಆದಿಲ್ ರಶೀದ್, ಜೋ ರೂಟ್ , ಜೇಮೀ ಸ್ಮಿತ್

ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಇಂಗ್ಲೆಂಡ್ ಟಿ20ಐ ತಂಡ: ಹ್ಯಾರಿ ಬ್ರೂಕ್ (ನಾಯಕ), ರೆಹಾನ್ ಅಹ್ಮದ್, ಜೋಫ್ರಾ ಆರ್ಚರ್, ಟಾಮ್ ಬ್ಯಾಂಟನ್, ಜಾಕೋಬ್ ಬೆಥೆಲ್, ಜೋಸ್ ಬಟ್ಲರ್, ಬ್ರೈಡನ್ ಕಾರ್ಸೆ, ಲಿಯಾಮ್ ಡಾಸನ್, ಬೆನ್ ಡಕೆಟ್, ವಿಲ್ ಜ್ಯಾಕ್ಸ್, ಸಾಕಿಬ್ ಮಹಮೂದ್, ಜೇಮೀ ಓವರ್ಟನ್, ಆದಿಲ್ ರಶೀದ್, ಫಿಲ್ ಸಾಲ್ಟ್, ಜೇಮೀ ಸ್ಮಿತ್, ಲ್ಯೂಕ್ ವುಡ್

ಐರ್ಲೆಂಡ್ ಪ್ರವಾಸಕ್ಕೆ ಇಂಗ್ಲೆಂಡ್ ಟಿ20ಐ ತಂಡ: ಜಾಕೋಬ್ ಬೆಥೆಲ್ (ನಾಯಕ), ರೆಹಾನ್ ಅಹ್ಮದ್, ಸೋನಿ ಬೇಕರ್, ಟಾಮ್ ಬ್ಯಾಂಟನ್, ಜೋಸ್ ಬಟ್ಲರ್ , ಲಿಯಾಮ್ ಡಾಸನ್, ಟಾಮ್ ಹಾರ್ಟ್ಲಿ, ವಿಲ್ ಜ್ಯಾಕ್ಸ್, ಸಾಕಿಬ್ ಮಹಮೂದ್, ಜೇಮೀ ಓವರ್ಟನ್, ಮ್ಯಾಥ್ಯೂ ಪಾಟ್ಸ್, ಆದಿಲ್ ರಶೀದ್, ಫಿಲ್ ಸಾಲ್ಟ್, ಲ್ಯೂಕ್ ವುಡ್