ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕೊಹ್ಲಿ, ರೋಹಿತ್‌, ಅಶ್ವಿನ್‌ ಟೆಸ್ಟ್‌ ನಿವೃತ್ತಿಗೆ ಈ ವ್ಯಕ್ತಿಯೇ ಕಾರಣ: ಮನೋಜ್‌ ತಿವಾರಿ ಗಂಭೀರ ಆರೋಪ!

ವಿರಾಟ್‌ ಕೊಹ್ಲ, ರೋಹಿತ್‌ ಶರ್ಮಾ ಹಾಗೂ ಆರ್‌ ಅಶ್ವಿನ್‌ ಅವರು ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಲು ಟೀಮ್‌ ಇಂಡಿಯಾ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ ಕಾರಣ ಎಂದು ಮಾಜಿ ಬ್ಯಾಟ್ಸ್‌ಮನ್‌ ಮನೋಜ್‌ ತಿವಾರಿ ಗಂಭೀರ ಆರೋಪ ಮಾಡಿದ್ದಾರೆ. ಇತ್ತೀಚೆಗೆ ಭಾರತ ಏಕದಿನ ತಂಡದ ನಾಯಕನಾಗಿ ರೋಹಿತ್‌ ಶರ್ಮಾ ಅವರ ಸ್ಥಾನವನ್ನು ಶುಭಮನ್‌ ಗಿಲ್‌ ತುಂಬಿದ್ದರು.

ಗೌತಮ್‌ ಗಂಭೀರ್‌ ವಿರುದ್ಧ ಗಂಭೀರ ಆರೋಪ ಮಾಡಿದ ಮನೋಜ್‌ ತಿವಾರಿ.

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ (Gautam Gambhir) ವಿರುದ್ದ ಮಾಜಿ ಕ್ರಿಕೆಟಿಗ ಮನೋಜ್‌ ತಿವಾರಿ (Manoj Tiwary) ಗಂಭೀರ ಆರೋಪ ಮಾಡಿದ್ದಾರೆ. ಗಂಭೀರ್‌ ಭಾರತ ತಂಡಕ್ಕೆ ಆಗಮಿಸಿದ ಬಳಿಕ ತಂಡದಲ್ಲಿ ಸಾಕಷ್ಟು ವಿವಾದಾತ್ಮಕ ಸಂಗತಿಗಳನ್ನು ಮಾಡಿದ್ದಾರೆ. ಅದರಂತೆ ವಿರಾಟ್‌ ಕೊಹ್ಲಿ (Virat Kohli), ರೋಹಿತ್‌ ಶರ್ಮಾ ಹಾಗೂ ಆರ್‌ ಅಶ್ವಿನ್‌ ಅವರು ಟೆಸ್ಟ್‌ ಕ್ರಿಕೆಟ್‌ಗೆ ಹಠಾತ್‌ ವಿದಾಯ ಹೇಳಲು ಗೌತಮ್‌ ಗಂಭೀರ್‌ ಕಾರಣ ಎಂದು ಪಶ್ಚಿಮ ಬಂಗಾಳದ ಶಾಸಕರೂ ಆಗಿರುವ ಮನೋಜ್‌ ತಿವಾರಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡವನ್ನು ಪ್ರಕಟಿಸಿದ ಬಳಿಕ, ಒಡಿಐ ತಂಡದ ನಾಯಕತ್ವದಿಂದ ರೋಹಿತ್‌ ಶರ್ಮಾ ಅವರನ್ನು ಕೈ ಬಿಟ್ಟು, ಶುಭಮನ್‌ ಗಿಲ್‌ಗೆ ನಾಯಕತ್ವವನ್ನು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ರೋಹಿತ್‌ ಶರ್ಮ ಅವರ ಏಕದಿನ ವಿಶ್ವಕಪ್‌ ಆಡುವ ಬಗ್ಗೆ ಸಂಶಯಗಳು ಶುರುವಾಗಿವೆ.

ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಇಬ್ಬರೂ ಟಿ20ಐ ಹಾಗೂ ಟೆಸ್ಟ್‌ ಕ್ರಿಕೆಟ್‌ಗೆ ಈಗಾಗಲೇ ವಿದಾಯ ಹೇಳಿದ್ದಾರೆ. ಆ ಮೂಲಕ 2027ರ ಐಸಿಸಿ ಏಕದಿನ ವಿಶ್ವಕಪ್‌ ನಿಮಿತ್ತ ಈ ಇಬ್ಬರೂ 50 ಓವರ್‌ಳ ಸ್ವರೂಪದಲ್ಲಿ ಮುಂದುವರಿಯಲು ಬಯಸಿದ್ದಾರೆ. ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಬಳಿಕ ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು, ಇದೀಗ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳುತ್ತಿದ್ದಾರೆ. ಈ ಇಬ್ಬರೂ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಸಂದರ್ಭದಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಇದಕ್ಕೂ ಮುನ್ನ ಆಸ್ಟ್ರೇಲಿಯಾ ಟೆಸ್ಟ್‌ ಸರಣಿಯ ವೇಳೆ ಆರ್‌ ಅಶ್ವಿನ್‌ ಟೆಸ್ಟ್‌ಗೆ ವಿದಾಯ ಹೇಳಿದ್ದರು.

IND vs AUS: ಕುಮಾರ ಸಂಗಕ್ಕಾರ ದಾಖಲೆ ಮುರಿಯುವ ಸನಿಹದಲ್ಲಿ ವಿರಾಟ್‌ ಕೊಹ್ಲಿ!

ಇನ್‌ಸೈಡ್‌ ಸ್ಪೋರ್ಟ್ಸ್‌ ಜೊತೆ ಮಾತನಾಡಿದ ಮನೋಜ್‌ ತಿವಾರಿ, ಈ ಮೂವರು ಆಟಗಾರರು ಈಗಾಗಲೇ ನಿವೃತ್ತರಾಗಿದ್ದಾರೆ. ಆದಾಗ್ಯೂ, ಇಂಗ್ಲೆಂಡ್ ವಿರುದ್ಧದ ನಿರ್ಣಾಯಕ ಸರಣಿಗೂ ಮುನ್ನ ಅವರು ಈ ರೀತಿ ನಿವೃತ್ತಿ ಘೋಷಿಸುತ್ತಾರೆಂದು ಯಾರೂ ನಿರೀಕ್ಷಿಸಿರಲಿಲ್ಲ. ಗಂಭೀರ್ ಈ ಆಟಗಾರರನ್ನು ನಿವೃತ್ತಿ ಹೊಂದುವಂತೆ ಒತ್ತಾಯಿಸುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿವೆ. ಪ್ರಸ್ತುತ ಮುಖ್ಯ ತರಬೇತುದಾರ ತನ್ನ ನಿರ್ಧಾರಗಳನ್ನು ಪ್ರಶ್ನಿಸುವುದನ್ನು ಇಷ್ಟಪಡುವುದಿಲ್ಲ ಎಂದು ತಿವಾರಿ ಹೇಳಿದ್ದಾರೆ.

"ಹಿರಿಯ ಆಟಗಾರರು ಇದ್ದರೆ, ಅಶ್ವಿನ್ ಇದ್ದರೆ, ರೋಹಿತ್ ಇದ್ದರೆ, ಈ ಆಟಗಾರರು ಸಾಕಷ್ಟು ಕ್ರಿಕೆಟ್ ಆಡಿದ್ದಾರೆ. ಈ ಆಟಗಾರರು ಮುಖ್ಯ ಕೋಚ್ ಗಂಭೀರ್‌ ಅಥವಾ ಉಳಿದ ಸಿಬ್ಬಂದಿಗಿಂತ ದೊಡ್ಡ ಹೆಸರು ಮಾಡಿದ್ದಾರೆ. ಅವರು ಏನನ್ನಾದರೂ ಒಪ್ಪದಿದ್ದರೆ, ಅವರು ಖಂಡಿತವಾಗಿಯೂ ಪ್ರಶ್ನೆಗಳನ್ನು ಕೇಳುತ್ತಾರೆ. ಹಾಗಾಗಿ ಇವರ ಅನುಪಸ್ಥಿತಿಯನ್ನು ಗಂಭೀರ್‌ ಬಯಸುತ್ತಿರಬಹುದು," ಎಂದು ಮನೋಜ್‌ ತಿವಾರಿ ತಿಳಿಸಿದ್ದಾರೆ.

"ಅವರು ಕೋಚ್ ಆದ ನಂತರ, ಅನೇಕ ವಿವಾದಗಳಿವೆ ಎಂದು ನಾನು ನೋಡಿದ್ದೇನೆ. ನಡೆಯುತ್ತಿರುವ ಅನೇಕ ವಿಷಯಗಳು ಭಾರತೀಯ ಕ್ರಿಕೆಟ್‌ಗೆ ಒಳ್ಳೆಯದಲ್ಲ. ಅವರು ಮುಖ್ಯ ಕೋಚ್ ಆದ ನಂತರ, ಅಶ್ವಿನ್ ನಿವೃತ್ತರಾಗಿದ್ದಾರೆ ಎಂದು ನಾನು ನಂಬುತ್ತೇನೆ. ರೋಹಿತ್ ಮತ್ತು ವಿರಾಟ್ ಅದೇ ರೀತಿ ಮಾಡಿದ್ದಾರೆ. ಇದಲ್ಲದೆ, ಆಟಗಾರರನ್ನು ತಂಡಕ್ಕೆ ಇದ್ದಕ್ಕಿದ್ದಂತೆ ಸೇರಿಸಿಕೊಂಡು ತಕ್ಷಣ ಆಡುವ ಹನ್ನೊಂದರಲ್ಲಿ ಸೇರಿಸಿಕೊಂಡಂತೆ ಅನೇಕ ವಿಷಯಗಳು ಸಂಭವಿಸಿವೆ. ಗಂಭೀರ್ ಸ್ಥಿರವಾಗಿಲ್ಲ ಎಂಬುದನ್ನು ನಾವು ನೋಡಿದ್ದೇವೆ," ಮಾಜಿ ಬ್ಯಾಟ್ಸ್‌ಮನ್‌ ಟೀಕಿಸಿದ್ದಾರೆ.

IND vs AUS: ಯಶಸ್ವಿ ಜೈಸ್ವಾಲ್‌ ಔಟ್‌, ಆಸ್ಟ್ರೇಲಿಯಾ ಏಕದಿನ ಸರಣಿಗೆ ಭಾರತದ ಬಲಿಷ್ಠ ಪ್ಲೇಯಿಂಗ್‌ XI

ಕೊಹ್ಲಿ, ರೋಹಿತ್‌ರನ್ನು ಕೈ ಬಿಡಲು ಸಾಧ್ಯವಿಲ್ಲ: ತಿವಾರಿ

ಗೌತಮ್‌ ಗಂಭೀರ್ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯನ್ನು ಏಕದಿನ ತಂಡದಿಂದ ಕೈಬಿಡುವ ಸಾಧ್ಯತೆ ಕಡಿಮೆ ಎಂದು ಹೇಳಿದ್ದಾರೆ. ಈ ಸ್ವರೂಪದಲ್ಲಿ ಇಬ್ಬರೂ ಆಟಗಾರರು ಹೊಂದಿರುವ ಅತ್ಯುತ್ತಮ ದಾಖಲೆಯೇ ಇದಕ್ಕೆ ಕಾರಣ ಎಂದಿದ್ದಾರೆ.

"ಸೃಷ್ಟಿಸಲಾದ ಸನ್ನಿವೇಶಗಳು, ಸೃಷ್ಟಿಯಾದ ವಾತಾವರಣ, ಈ ಆಟಗಾರರ ಮೇಲಿನ ಒತ್ತಡವನ್ನು ನಾನು ನಂಬುತ್ತೇನೆ, ರೋಹಿತ್ ಮತ್ತು ವಿರಾಟ್ ಭಾರತೀಯ ಕ್ರಿಕೆಟ್‌ನ ಅತ್ಯುತ್ತಮ ಸೇವಕರು ಎಂದು ನಾನು ನಂಬುತ್ತೇನೆ. ಭಾರತೀಯ ಕ್ರಿಕೆಟ್‌ ಅನ್ನು ಅವರು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ. ಈ ಇಬ್ಬರೂ ಆಟಗಾರರು ಭಾರತೀಯ ಕ್ರಿಕೆಟ್‌ಗೆ ತಮ್ಮ ಹೃದಯ ಮತ್ತು ಆತ್ಮವನ್ನು ಸಮರ್ಪಿಸಿದ್ದಾರೆಂಬುದನ್ನು ನಾವು ನೋಡಿದ್ದೇವೆ," ಎಂದಿ ತಿವಾರಿ ತಿಳಿಸಿದ್ದಾರೆ.

"ತಮ್ಮ ಹೆಸರಿನ ಮೇಲೆ ಪರಿಣಾಮ ಬೀರುತ್ತಿದೆ ಮತ್ತು ಡ್ರೆಸ್ಸಿಂಗ್ ಕೋಣೆಯಲ್ಲಿ ಇನ್ನು ಮುಂದೆ ನಮ್ಮ ಅಗತ್ಯವಿಲ್ಲ ಎಂಬ ಭಾವನೆ ಉಂಟಾದರೆ, ಅವರು ನಿವೃತ್ತಿ ಹೊಂದುವ ಬಗ್ಗೆ ಯೋಚಿಸಬಹುದು. ಅವರು ಆಡಲು ಬಯಸುತ್ತಾರೆ ಎಂದು ನಾನು ನಂಬುತ್ತೇನೆ. ಈ ಇಬ್ಬರು ವ್ಯಕ್ತಿಗಳು ಇಲ್ಲದೆ ಯಾವುದೇ ನಿರ್ಧಾರವನ್ನು ಗಂಭೀರ್ ತೆಗೆದುಕೊಳ್ಳುವುದಿಲ್ಲ ಎಂದು ನಾನು ಭಾವಿಸುತ್ತೇನೆ ಏಕೆಂದರೆ, ವೈಟ್-ಬಾಲ್ ಸ್ವರೂಪದಲ್ಲಿ ಈ ಇಬ್ಬರೂ ಅತ್ಯುತ್ತಮ ದಾಖಲೆಯನ್ನು ಹೊಂದಿದ್ದಾರೆಂದು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಗಂಭೀರ್ ಈ ಇಬ್ಬರನ್ನು ವಿಶ್ವಕಪ್‌ ಟೂರ್ನಿಯ ಯೋಜನೆಯಲ್ಲಿ ಸೇರಿಸಿಕೊಳ್ಳದಿದ್ದರೆ ಅದು ನಿಜವಾಗಿಯೂ ಕೆಟ್ಟ ನಿರ್ಧಾರವಾಗಿರುತ್ತದೆ, " ಎಂದು ಮನೋಜ್‌ ತಿವಾರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.