ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ತಮ್ಮ ನೆಚ್ಚಿನ ಮೂವರು ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರನ್ನು ಆರಿಸಿದ ಹಾಶಿಮ್‌ ಆಮ್ಲಾ!

ದಕ್ಷಿಣ ಆಫ್ರಿಕಾ ಮಾಜಿ ನಾಯಕ ಹಾಗೂ ಮಾಜಿ ಬ್ಯಾಟ್ಸ್‌ಮನ್‌ ಹಾಶಿಮ್‌ ಆಮ್ಲಾ ಅವರು ತಮ್ಮ ನೆಚ್ಚಿನ ಸಾರ್ವಕಾಲಿಕ ಶ್ರೇಷ್ಠ ಮೂವರು ಬ್ಯಾಟ್ಸ್‌ಮನ್‌ಗಳನ್ನು ಆಯ್ಕೆ ಮಾಡಿದ್ದಾರೆ. ಆದರೆ, ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಅವರನ್ನು ಕೈ ಬಿಡುವ ಮೂಲಕ ಮೂವರು ಆಟಗಾರರನ್ನು ಆರಿಸಿದ್ದಾರೆ.

ಮೂವರು ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರನ್ನು ಆರಿಸಿದ ಹಾಶಿಮ್‌ ಆಮ್ಲಾ.

ನವದೆಹಲಿ: ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡದ ಮಾಜಿ ನಾಯಕ ಹಾಗೂ ಮಾಜಿ ಬ್ಯಾಟ್ಸ್‌ಮನ್‌ ಹಾಶಿಮ್‌ ಆಮ್ಲಾ(Hashim Amla) ಅವರು ತಮ್ಮ ನೆಚ್ಚಿನ ಸಾರ್ವಕಾಲಿಕ ಶ್ರೇಷ್ಠ ಮೂವರು ಆಟಗಾರರನ್ನು ಆಯ್ಕೆ ಮಾಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿರುವ ಭಾರತೀಯ ಕ್ರಿಕೆಟ್‌ ದಂತಕತೆ ಸಚಿನ್‌ ತೆಂಡೂಲ್ಕರ್‌ (Sachin Tendulkar) ಅವರ ಹೆಸರನ್ನು ಕೈ ಬಿಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಪ್ರಸ್ತುತ ಹಾಶಿಮ್‌ ಆಮ್ಲಾ ಅವರು ವಿಶ್ವ ಚಾಂಪಿಯನ್‌ಷಿಪ್‌ ಲೆಜೆಂಡ್ಸ್‌ ಟೂರ್ನಿಯಲ್ಲಿ ಎಬಿ ಡಿ ವಿಲಿಯರ್ಸ್‌ AB De Villiers) ನಾಯಕತ್ವದ ದಕ್ಷಿಣ ಆಫ್ರಿಕಾ ಚಾಂಪಿಯನ್ಸ್‌ ತಂಡದಲ್ಲಿ ಆಡುತ್ತಿದ್ದಾರೆ. ಶನಿವಾರ ವೆಸ್ಟ್‌ ಇಂಡೀಸ್‌ ಲೆಜೆಂಡ್ಸ್‌ ವಿರುದ್ಧದ ಪಂದ್ಯದಲ್ಲಿ ಹಾಶಿಮ್‌, 18 ಎಸೆತಗಳಲ್ಲಿ 15 ರನ್‌ ಗಳಿಸಿದ್ದರು. ಜುಲೈ 22 ರಂದು ನಾರ್ಥ್‌ಹ್ಯಾಮ್ಟನ್‌ನ ಕೌಂಟಿ ಕ್ರಿಕೆಟ್‌ ಗ್ರೌಂಡ್‌ನಲ್ಲಿ ಭಾರತ ಲೆಜೆಂಡ್ಸ್‌ ವಿರುದ್ಧ ಆಶಿಮ್‌ ಆಮ್ಲಾ ತನ್ನ ಮುಂದಿನ ಪಂದ್ಯವನ್ನು ಆಡಲಿದ್ದಾರೆ.

ಯುವರಾಜ್‌ ಸಿಂಗ್‌ ನಾಯಕತ್ವದ ಭಾರತ ಲೆಜೆಂಡ್ಸ್‌ ವಿರುದ್ಧದ ಪಂದ್ಯದ ನಿಮಿತ್ತ ಸ್ಟಾರ್‌ ಸ್ಪೋರ್ಟ್ಸ್‌ ಸಂದರ್ಶನದಲ್ಲಿ ಭಾಗವಹಿಸಿದ್ದ ಹಾಶಿಮ್‌ ಆಮ್ಲಾಗೆ ಹಲವು ಪ್ರಶ್ನೆಗಳನ್ನು ಕೇಳಲಾಗಿತ್ತು. ಈ ವೇಳೆ ನಿಮ್ಮ ನೆಚ್ಚಿನ ಸಾರ್ವಕಾಲಿಕ ಶ್ರೇಷ್ಠ ಮೂವರು ಕ್ರಿಕೆಟಿಗರನ್ನು ಆರಿಸುವಂತೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ದಕ್ಷಿಣ ಆಫ್ರಿಕಾ ದಿಗ್ಗಜ, ವಿಶ್ವ ಕಂಡ ಶ್ರೇಷ್ಠ ಬ್ಯಾಟ್ಸ್‌ಮನ್‌ ಸಚಿನ್‌ ತೆಂಡೂಲ್ಕರ್‌ ಅವರನ್ನು ಕೈ ಬಿಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ವೆಸ್ಟ್‌ ಇಂಡೀಸ್‌, ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾದ ದಿಗ್ಗಜರನ್ನು ಇವರು ಆರಿಸಿದ್ದಾರೆ.

IND vs ENG: ವೀರೇಂದ್ರ ಸೆಹ್ವಾಗ್‌ರ ದೊಡ್ಡ ದಾಖಲೆ ಮುರಿಯುವ ಸನಿಹದಲ್ಲಿ ರಿಷಭ್‌ ಪಂತ್‌!

ಸಚಿನ್‌ ತೆಂಡೂಲ್ಕರ್‌ ಅವರು 1989 ರಿಂದ 2013ರವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡಿದ್ದಾರೆ ಹಾಗೂ ಅವರು ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ ಆಗಿ ಹೊರಹೊಮ್ಮಿದ್ದಾರೆ. ಟೆಸ್ಟ್‌ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ದಾಖಲೆ ಕೂಡ ಸಚಿನ್‌ ತೆಂಡೂಲ್ಕರ್‌ ಹೆಸರಿನಲ್ಲಿದೆ. ಆದರೂ ದಕ್ಷಿಣ ಆಫ್ರಿಕಾ ಮಾಜಿ ನಾಯಕ, ಸಚಿನ್‌ ಹೆಸರನ್ನು ಕೈ ಬಿಟ್ಟಿರುವುದು ಅಚ್ಚರಿ ಉಂಟು ಮಾಡಿದೆ. ಅವರು ವಿಂಡೀಸ್‌ ದಿಗ್ಗಜ ಬ್ರಿಯಾನ್‌ ಲಾರಾ, ಆಸ್ಟ್ರೇಲಿಯಾ ಮಾಜಿ ನಾಯಕ ಸ್ಟೀವಾ ಹಾಗೂ ದಕ್ಷಿಣ ಆಫ್ರಿಕಾ ಮಾಜಿ ಆಲ್‌ರೌಂಡರ್‌ ಜಾಕ್‌ ಕಾಲಿಸ್‌ ಅವರನ್ನು ತೆಗೆದುಕೊಂಡಿದ್ದಾರೆ.



ಇದರ ಜೊತೆಗೆ ಹಾಶಿಮ್‌ ಆಮ್ಲಾ ಆಧುನಿಕ ಕ್ರಿಕೆಟ್‌ನ ತಮ್ಮ ನೆಚ್ಚಿನ ಮೂವರು ಆಟಗಾರರನ್ನು ಕೂಡ ಆರಿಸಿದ್ದಾರೆ. ಭಾರತದ ಮಾಜಿ ನಾಯಕ ವಿರಾಟ್‌ ಕೊಹ್ಲಿ, ದಕ್ಷಿಣ ಆಫ್ರಿಕಾ ಮಾಜಿ ನಾಯಕ ಎಬಿ ಡಿವಿಲಿಯರ್ಸ್‌ ಅವರನ್ನು ಆರಿಸಿದ ಆಮ್ಲಾ, ವೆಸ್ಟ್‌ ಇಂಡೀಸ್‌ ದಿಗ್ಗಜ ಸರ್‌ ವಿವಿಯನ್‌ ರಿಚರ್ಡ್ಸ್‌ ಅವರನ್ನು ಕೂಡ ಸೇರಿಸಿದ್ದಾರೆ. ಅಂದ ಹಾಗೆ ಹಾಶಿಮ್‌ ಆಮ್ಲಾ ಅವರು 349 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 18672 ರನ್‌ಗಳನ್ನು ಕಲೆ ಹಾಕಿದ್ದಾರೆ. ಆ ಮೂಲಕ ದಕ್ಷಿಣ ಆಫ್ರಿಕಾದ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದಾರೆ.

ENG vs IND: ಟೀಂ ಇಂಡಿಯಾಗೆ ಗಾಯಾಳುಗಳ ಚಿಂತೆ; ಆಲ್‌ರೌಂಡರ್‌ ಸರಣಿಯಿಂದ ಔಟ್‌!

"ವರ್ಷಗಳಲ್ಲಿ ಅಂತಹವರು ತುಂಬಾ ಜನ ಇದ್ದಾರೆ. ಬೆಳೆಯುವಾಗ ನನ್ನ ಮೂವರು ನೆಚ್ಚಿನ ಆಟಗಾರರು ಬ್ರಿಯಾನ್ ಲಾರಾ, ಸ್ಟೀವ್ ವಾ ಮತ್ತು ಜಾಕ್‌ ಕಾಲಿಸ್. ಜಾಕ್‌ ಕಾಲಿಸ್‌ ದಕ್ಷಿಣ ಆಫ್ರಿಕಾ ಆಟಗಾರರು. ಆದರೆ ಬಹುಶಃ ಇನ್ನೂ ಮೂರು ಹೆಸರುಗಳು ಸಹ ಇರಬಹುದು: ಇತ್ತೀಚಿನ ದಿನಗಳಲ್ಲಿ ವಿರಾಟ್ ಕೊಹ್ಲಿ ಇದ್ದಾರೆ, ಎಬಿ ಡಿವಿಲಿಯರ್ಸ್ ಮತ್ತು ನಾನು ಇನ್ನೂ ಒಬ್ಬ ಹಳೆಯ ಆಟಗಾರನನ್ನು ಹೇಳುತ್ತೇನೆ - ಸರ್ ವಿವಿಯನ್ ರಿಚರ್ಡ್ಸ್," ಎಂದು ಹಾಶಿಮ್‌ ಆಮ್ಲಾ ತಿಳಿಸಿದ್ದಾರೆ.