ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

AUS vs WI: ಬರೋಬ್ಬರಿ 11 ಸಿಕ್ಸರ್‌! ಆಸ್ಟ್ರೇಲಿಯಾ ಪರ ವೇಗದ ಟಿ20ಐ ಶತಕ ಬಾರಿಸಿದ ಟಿಮ್‌ ಡೇವಿಡ್‌!

ಸೇಂಟ್ ಕಿಟ್ಸ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ20ಐ ಪಂದ್ಯದಲ್ಲಿ ಟಿಮ್ ಡೇವಿಡ್ ಸ್ಫೋಟಕ ಬ್ಯಾಟಿಂಗ್ ನಡೆಸಿ ಕೇವಲ 37 ಎಸೆತಗಳಲ್ಲಿ ಶತಕ ಸಿಡಿಸಿದರು. ಇದು ಅವರ ಟಿ20ಐ ಕ್ರಿಕೆಟ್‌ನ ಮೊದಲ ಶತಕವಾಗಿದೆ. ಇದರಲ್ಲಿ ಅವರು 6 ಬೌಂಡರಿಗಳು ಮತ್ತು 11 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

ಆಸ್ಟ್ರೇಲಿಯಾ ಪರ ವೇಗದ ಟಿ20ಐ ಶತಕ ಬಾರಿಸಿದ ಟಿಮ್‌ ಡೇವಿಡ್‌.

ಸೇಂಟ್ ಕಿಟ್ಸ್: ಆಸ್ಟ್ರೇಲಿಯಾ(Tim David) ತಂಡದ ಟಿಮ್ ಡೇವಿಡ್ (Tim David) ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ20ಐ ಪಂದ್ಯದಲ್ಲಿ (AUS vs WI) ತಮ್ಮ ಬಿರುಗಾಳಿಯ ಬ್ಯಾಟಿಂಗ್ ಮೂಲಕ ಅದ್ಭುತ ಪ್ರದರ್ಶನ ತೋರಿದ್ದಾರೆ. ಟಿಮ್ ಡೇವಿಡ್ ಕೇವಲ 37 ಎಸೆತಗಳಲ್ಲಿ ಆಸ್ಟ್ರೇಲಿಯಾ ಪರ ಅತ್ಯಂತ ವೇಗದ ಶತಕವನ್ನು ಬಾರಿಸಿದ್ದಾರೆ. ಟಿಮ್ ಡೇವಿಡ್ ಅವರ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಇದು ಮೊದಲ ಶತಕವಾಗಿದೆ. ಅವರ ಸ್ಪೋಟಕ ಇನಿಂಗ್ಸ್‌ನಲ್ಲಿ 6 ಬೌಂಡರಿಗಳು ಮತ್ತು 11 ಸಿಕ್ಸರ್‌ಗಳನ್ನು ಸಹ ಬಾರಿಸಿದ್ದಾರೆ. ಇದರೊಂದಿಗೆ ಟಿಮ್ ಡೇವಿಡ್ ಆಸ್ಟ್ರೇಲಿಯಾ ಪರ ಟಿ20ಐ ಪಂದ್ಯದಲ್ಲಿ ಅತ್ಯಂತ ವೇಗದ ಶತಕ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆ ಮೂಲಕ ಅವರು, ಜಾಶ್‌ ಇಂಗ್ಲಿಸ್ ಅವರನ್ನು ಹಿಂದಿಕ್ಕಿದ್ದಾರೆ. 2024ರಲ್ಲಿ ಸ್ಕಾಟ್ಲೆಂಡ್ ವಿರುದ್ಧ ಜಾಶ್ ಇಂಗ್ಲಿಸ್ 43 ಎಸೆತಗಳಲ್ಲಿ ಶತಕ ಬಾರಿಸಿದ್ದರು.

ಟಿಮ್ ಡೇವಿಡ್ ಅವರ ಈ ಶತಕದ ಇನಿಂಗ್ಸ್‌ನಿಂದಾಗಿ ಆಸ್ಟ್ರೇಲಿಯಾ ತಂಡ ಎರಡನೇ ಟಿ20ಐ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು 23 ಎಸೆತಗಳು ಬಾಕಿ ಇರುವಾಗ 6 ವಿಕೆಟ್‌ಗಳಿಂದ ಸೋಲಿಸಿತು. 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಲು ಬಂದ ಟಿಮ್ ಡೇವಿಡ್ ಪಂದ್ಯದ ಕೊನೆಯವರೆಗೂ ಅಜೇಯರಾಗಿ ಉಳಿದರು. ಡೇವಿಡ್ ಹೊರತುಪಡಿಸಿ, ಮಿಚೆಲ್ ಓವನ್ 16 ಎಸೆತಗಳಲ್ಲಿ 36 ರನ್‌ಗಳ ಅಜೇಯ ಇನಿಂಗ್ಸ್ ಆಡಿದರು. ಈ ರೀತಿಯಾಗಿ, ಆಸ್ಟ್ರೇಲಿಯಾ 215 ರನ್‌ಗಳ ಗುರಿಯನ್ನು ಸುಲಭವಾಗಿ ತಲುಪಿತು.

IND vs ENG 4th Test: ಜೋ ರೂಟ್‌ ಶತಕ, ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ ಇಂಗ್ಲೆಂಡ್‌!

ಮಾರ್ಕಸ್‌ ಸ್ಟೋಯ್ನಿಸ್‌ ದಾಖಲೆಯನ್ನು ಮುರಿದ ಡೇವಿಡ್

ಶತಕ ಗಳಿಸುವುದಕ್ಕೂ ಮುನ್ನ ಟಿಮ್ ಡೇವಿಡ್ ಕೇವಲ 16 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು. ಇದರೊಂದಿಗೆ, ಅವರು ಟಿ20ಐ ಸ್ವರೂಪದಲ್ಲಿ ಮಾರ್ಕಸ್ ಸ್ಟೋಯ್ನಿಸ್‌ ಅವರ ದಾಖಲೆಯನ್ನೂ ಮುರಿದಿದ್ದಾರೆ. ಟಿಮ್ ಡೇವಿಡ್ ಇದೀಗ ಆಸ್ಟ್ರೇಲಿಯಾ ಪರ ಟಿ20ಐನಲ್ಲಿ ಅರ್ಧಶತಕ ಗಳಿಸಿದ ಅತ್ಯಂತ ವೇಗದ ಬ್ಯಾಟ್ಸ್‌ಮನ್ ಆಗಿದ್ದಾರೆ. ಅದೇ ಸಮಯದಲ್ಲಿ ಮಾರ್ಕಸ್ ಸ್ಟೊಯಿನಿಸ್ 2022ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಕೇವಲ 17 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು.

ಶೇಯ್‌ ಹೋಪ್‌ ಶತಕ ವ್ಯರ್ಥ

ಆಸ್ಟ್ರೇಲಿಯಾ ವಿರುದ್ಧದ ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಪರ ಶೇಯ್‌ ಹೋಪ್ 102 ರನ್‌ಗಳ ಸ್ಪೋಟಕ ಇನಿಂಗ್ಸ್ ಆಡಿದರು. ಅವರ ಸ್ಪೋಟಕ ಬ್ಯಾಟಿಂಗ್‌ ಬಲದಿಂದ ವೆಸ್ಟ್ ಇಂಡೀಸ್ ನಿಗದಿತ 20 ಓವರ್‌ಗಳಲ್ಲಿ 214 ರನ್ ಗಳಿಸಿತು. ಆದರೆ ತಂಡದ ಬೌಲರ್‌ಗಳು ಈ ಮೊತ್ತಕ್ಕೆ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕುವಲ್ಲಿ ವಿಫಲರಾದರು. ಆ ಮೂಲಕ ಸತತ ಮೂರು ಸೋಲುಗಳೊಂದಿಗೆ ಆತಿಥೇಯ ವೆಸ್ಟ್ ಇಂಡೀಸ್ ಕೂಡ ಸರಣಿಯಲ್ಲಿ 0-3 ಅಂತರದಲ್ಲಿ ವೈಟ್‌ ವಾಷ್‌ ಆಘಾತ ಅನುಭವಿಸಿತು.



ಎರಡನೇ ವೇಗದ ಶತಕ ಬಾರಿಸಿದ ಟಿಮ್‌ ಡೇವಿಡ್‌

37ಎಸೆತಗಳಲ್ಲಿ ಶತಕ ಬಾರಿಸುವ ಮೂಲಕ ಟಿಮ್‌ ಡೇವಿಡ್‌ ಒಟ್ಟಾರೆಯಾಗಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಎರಡನೇ ವೇಗದ ಶತಕವನ್ನು ಬಾರಿಸಿದ್ದಾರೆ. ದಕ್ಷಿಣ ಆಫ್ರಿಕಾ ಬ್ಯಾಟ್ಸ್‌ಮನ್‌ ಡೇವಿಡ್‌ 35 ಎಸೆತಗಳಲ್ಲಿ ಶತಕ ಸಿಡಿಸಿ ಈ ಪಟ್ಟಿಯಲ್ಲಿ ಭಾರತದ ರೋಹಿತ್‌ ಶರ್ಮಾ ಅವರೊಂದಿಗೆ ಜಂಟಿಯಾಗಿ ಅಗ್ರ ಸ್ಥಾನವನ್ನು ಅಲಂಕರಿಸಿದ್ದಾರೆ.



ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ವೇಗದ ಶತಕ ಗಳಿಸಿದ ಬ್ಯಾಟರ್ಸ್‌

ಡೇವಿಡ್ ಮಿಲ್ಲರ್ (ದಕ್ಷಿಣ ಆಫ್ರಿಕಾ) 35 ದಕ್ಷಿಣ ಆಫ್ರಿಕಾ ವಿರುದ್ಧ ಬಾಂಗ್ಲಾದೇಶ ಪೊಚೆಫ್‌ಸ್ಟ್ರೂಮ್

ರೋಹಿತ್ ಶರ್ಮಾ (ಭಾರತ) 35 ಭಾರತ ವಿರುದ್ಧ ಶ್ರೀಲಂಕಾ ಇಂದೋರ್

ಟಿಮ್ ಡೇವಿಡ್ (ಆಸ್ಟ್ರೇಲಿಯಾ) 37 ವೆಸ್ಟ್ ಇಂಡೀಸ್ ವಿರುದ್ಧ ಆಸ್ಟ್ರೇಲಿಯಾ ಸೇಂಟ್ ಕಿಟ್ಸ್

ಅಭಿಷೇಕ್ ಶರ್ಮಾ (ಭಾರತ) 37 ಭಾರತ ವಿರುದ್ಧ ಇಂಗ್ಲೆಂಡ್ ವಾಂಖೇಡೆ

ಜಾನ್ಸನ್ ಚಾರ್ಲ್ಸ್ (ವೆಸ್ಟ್‌ ಇಂಡೀಸ್‌) 39 ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾ ಸೆಂಚುರಿಯನ್

ಸಂಜು ಸ್ಯಾಮ್ಸನ್ (ಭಾರತ) 40 ಭಾರತ ವಿರುದ್ಧ ಬಾಂಗ್ಲಾದೇಶ ಹೈದರಾಬಾದ್