ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kuldeep Yadav: ಏಷ್ಯಾ ಕಪ್‌ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆಯಬಲ್ಲ ಬೌಲರ್‌ ಅನ್ನು ಆರಿಸಿದ ವೀರೇಂದ್ರ ಸೆಹ್ವಾಗ್‌!

Virender Sehwag Praised Kuldeep Yadav: ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 2025ರ ಏಷ್ಯಾ ಕಪ್‌ ಟೂರ್ನಿಯಲ್ಲಿ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನವನ್ನು ತೋರಿದ ಚೈನಾಮನ್‌ ಸ್ಪಿನ್ನರ್‌ ಕುಲ್ದೀಪ್‌ ಯಾದವ್‌ ಅವರನ್ನು ಭಾರತದ ಮಾಜಿ ಆರಂಭಿಕ ವೀರೇಂದ್ರ ಸೆಹ್ವಾಗ್‌ ಶ್ಲಾಘಿಸಿದ್ದಾರೆ.

ಏಷ್ಯಾ ಕಪ್‌ ಟೂರ್ನಿಯಲ್ಲಿ ಕುಲ್ದೀಪ್‌ ಯಾದವ್‌ ಅತಿ ಹೆಚ್ಚು ವಿಕೆಟ್‌ ಪಡೆಯಬಲ್ಲರು.

ನವದೆಹಲಿ: ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 2025ರ ಏಷ್ಯಾ ಕಪ್‌ (Asia Cup 2025) ಟೂರ್ನಿಯ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನವನ್ನು ತೋರಿದ ಭಾರತದ ಸ್ಪಿನ್ನರ್‌ ಕುಲ್ದೀಪ್‌ ಯಾದವ್‌ (Kuldeep Yadav) ಅವರನ್ನು ಮಾಜಿ ಸ್ಪೋಟಕ ಬ್ಯಾಟ್ಸ್‌ಮನ್‌ ವೀರೇಂದ್ರ ಸೆಹ್ವಾಗ್‌ (Virender Sehwag) ಶ್ಲಾಘಿಸಿದ್ದಾರೆ. ಪ್ರಸ್ತುತ ನಡೆಯುತ್ತಿರುವ 20 ಓವರ್‌ಗಳ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಕುಲ್ದೀಪ್‌ ಯಾದವ್‌ ಕಬಳಿಸಲಿದ್ದಾರೆಂದು ಮಾಜಿ ಆರಂಭಿಕ ಭವಿಷ್ಯ ನುಡಿದಿದ್ದಾರೆ. ಈ ಪಂದ್ಯದಲ್ಲಿ ನಾಲ್ಕು ಓವರ್‌ಗಳನ್ನು ಬೌಲ್‌ ಮಾಡಿದ್ದ ಕುಲ್ದೀಪ್‌ ಯಾದವ್‌ 3 ವಿಕೆಟ್‌ಗಳನ್ನು ಕಬಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ಈ ಪಂದ್ಯವನ್ನು ಟೀಮ್‌ ಇಂಡಿಯಾ 7 ವಿಕೆಟ್‌ಗಳಿಂದ ಗೆದ್ದು ಬೀಗಿತ್ತು.

ಸೋನಿ ಸ್ಪೋರ್ಟ್ಸ್‌ ಚರ್ಚೆಯಲ್ಲಿ ಮಾತನಾಡಿದ ವೀರೇಂದ್ರ ಸೆಹ್ವಾಗ್‌, "ಕುಲ್ದೀಪ್‌ ಯಾದವ್‌ ಏಷ್ಯಾ ಕಪ್‌ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌ ಎನಿಸಿಕೊಳ್ಳಬಹುದು. ತಮ್ಮ ಬೌಲಿಂಗ್‌ ಕೈಚಳಕದಿಂದ ಅವರು ಬ್ಯಾಟ್ಸ್‌ಮನ್‌ಗಳನ್ನು ಮೋಸ ಮಾಡುತ್ತಾರೆ. ಬ್ಯಾಟ್ಸ್‌ಮನ್‌ಗಳು ಅವರ ಎಸೆದ ಚೆಂಡು ಒಳಗಡೆ ಬರಬಹುದೆಂದು ಭಾವಿಸುತ್ತಾರೆ, ಆದರೆ ಚೆಂಡು ಹೊರಗಡೆ ಹೋಗುತ್ತದೆ. ಇನ್ನು ಚೆಂಡು ಹೊರಗಡೆ ಹೋಗಬಹುದೆಂದು ಯೋಚಿಸಿದರೆ, ಚೆಂಡು ಒಳಗಡೆ ಬರುತ್ತದೆ," ಎಂದು ಹೇಳಿದ್ದಾರೆ.

IND vs PAK: ಪಾಕ್‌ ವಿರುದ್ಧ ಭಾರತಕ್ಕೆ ಗೆಲುವಿನ 'ಸಿಂಧೂರ'; 7 ವಿಕೆಟ್‌ ಭರ್ಜರಿ ಜಯ

ಮೊಹಮ್ಮದ್‌ ನವಾಝ್‌ ಹಾಗೂ ಸಹಿಬ್ದಾಜ್‌ ಫರ್ಹಾನ್‌ ಅವರನ್ನು ಕುಲ್ದೀಪ್‌ ಯಾದವ್‌ ಔಟ್‌ ಮಾಡಿದ ಹಾದಿಯನ್ನು ಭಾರತ ತಂಡದ ಮಾಜಿ ಬ್ಯಾಟ್ಸ್‌ಮನ್‌ ಶ್ಲಾಘಿಸಿದ್ದಾರೆ.

"ಅವರು ಎಡಗೈ ಬ್ಯಾಟ್ಸ್‌ಮನ್‌ ಅನ್ನು ಎಲ್‌ಬಿಡಬ್ಲ್ಯು ಔಟ್‌ ಮಾಡಿದ್ದಾರೆ ಹಾಗೂ ಬಲಗೈ ಬ್ಯಾಟ್ಸ್‌ಮನ್‌ ಫರ್ಹಾನ್‌ ನೇರವಾಗಿ ಆಡಲು ಪ್ರಯತ್ನಿಸಿದ್ದರು ಆದರೆ, ಚೆಂಡು ಹೊರಗಡೆ ಹೋಯಿತು. ಈ ವೇಳೆ ಚೆಂಡು ಬ್ಯಾಟ್‌ನ ಟಾಪ್‌ ಎಡ್ಜ್‌ ಆಗಿ ಗಾಳಿಯಲ್ಲಿ ಹಾರಿತು. ಆ ಮೂಲಕ ವಿಕೆಟ್‌ ಒಪ್ಪಿಸಿದ್ದರು. ಕುಲ್ದೀಪ್‌ ಯಾದವ್‌ ಅವರು ಇನ್ನಷ್ಟು ಪಂದ್ಯಗಳನ್ನು ಆಡಿದರೆ, ಅವರು ಅತ್ಯುತ್ತಮ ಬೌಲರ್‌ ಆಗಬಲ್ಲರು," ಎಂದು ವೀರೇಂದ್ರ ಸೆಹ್ವಾಗ್‌ ತಿಳಿಸಿದ್ದಾರೆ.

IND vs PAK: ಮೊದಲ ಎಸೆತದಲ್ಲೇ ವಿಕೆಟ್‌ ಕಿತ್ತು ದಾಖಲೆ ಬರೆದ ಹಾರ್ದಿಕ್‌ ಪಾಂಡ್ಯ

ಕುಲ್ದೀಪ್‌ ಯಾದವ್‌ಗೆ ಅಜಯ್‌ ಜಡೇಜಾ ಮೆಚ್ಚುಗೆ

ಇದೇ ಚರ್ಚೆಯಲ್ಲಿ ಭಾಗವಹಿಸಿದ್ದ ಮಾಜಿ ಕ್ರಿಕೆಟಿಗ ಅಜಯ್‌ ಜಡೇಜಾ, ಕುಲ್ದೀಪ್‌ ಯಾದವ್‌ ಅವರನ್ನು ಶ್ಲಾಘಿಸಿದ್ದಾರೆ.

"ಸ್ಪಿನ್ನರ್‌ಗಳು ವೈನ್‌ನಂತೆ ಎಂದು ಹೇಳಲಾಗುತ್ತದೆ. ಅವರು ವಯಸ್ಸಾದಂತೆ, ಅವರು ಉತ್ತಮರಾಗುತ್ತಾರೆ. ಅವರು ಹೆಚ್ಚು ಅನುಭವಿಗಳಾಗುತ್ತಾರೆ ಮತ್ತು ಉತ್ಸಾಹ ಕಡಿಮೆಯಾಗುತ್ತದೆ. ವೇಗದ ಬೌಲರ್‌ಗಳಿಗೆ ಯಾವಾಗಲೂ ಉತ್ಸಾಹ ಬೇಕಾಗುತ್ತದೆ, ಆದರೆ ಸ್ಪಿನ್ನರ್‌ಗಳ ಕೆಲಸ ಇದಕ್ಕಿಂತ ವಿಭಿನ್ನವಾಗಿದೆ," ಎಂದು ಅವರು ಹೇಳಿದರು.