ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs AUS: ಏಕದಿನ ಸರಣಿಯ ನಿಮಿತ್ತ ಲಾರ್ಡ್ಸ್‌ನಲ್ಲಿ ಅಭ್ಯಾಸ ನಡೆಸಿದ ವಿರಾಟ್‌ ಕೊಹ್ಲಿ!

ಲಂಡನ್‌ನ ಲಾರ್ಡ್ಸ್‌ ಅಂಗಣದಲ್ಲಿ ಅಭ್ಯಾಸ ನಡೆಸಿದ ಬಳಿಕ ಭಾರತ ತಂಡದ ಸ್ಟಾರ್‌ ಬ್ಯಾಟ್ಸ್‌ಮನ್‌ ವಿರಾಟ್‌ ಕೊಹ್ಲಿ ಅಭಿಮಾನಿಗಳೊಂದಿಗೆ ಫೋಟೋಗೆ ಪೋಸ್‌ ನೀಡಿದ್ದರು. ಅಕ್ಟೋಬರ್‌ನಲ್ಲಿ ನಡೆಯುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ್ದಾರೆ.

ಅಭಿಮಾನಿಗಳ ಜೊತೆ ಫೋಟೋಗೆ ಪೋಸ್‌ ಕೊಟ್ಟ ವಿರಾಟ್‌ ಕೊಹ್ಲಿ.

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ (AUS vs IND) ನಿಮಿತ್ತ ಭಾರತ ತಂಡದ ಮಾಜಿ ನಾಯಕ ಹಾಗೂ ಆಧುನಿಕ ಕ್ರಿಕೆಟ್‌ ದಿಗ್ಗಜ ವಿರಾಟ್‌ ಕೊಹ್ಲಿ (Virat Kohli) ಲಂಡನ್‌ನ ಲಾರ್ಡ್ಸ್‌ ಅಂಗಣದಲ್ಲಿ ಕಠಿಣ ಅಭ್ಯಾಸವನ್ನು ನಡೆಸುತ್ತಿದ್ದಾರೆ. 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ಬಳಿಕ ವಿರಾಟ್‌ ಕೊಹ್ಲಿ ವಿರಾಮ ಪಡೆಯುತ್ತಿದ್ದಾರೆ. ಅವರು ತಮ್ಮ ಕುಟುಂಬದ ಜೊತೆಗೆ ಲಂಡನ್‌ನಲ್ಲಿ ನೆಲೆಸಿದ್ದಾರೆ. ಅವರು ಈಗಾಗಲೇ ಟಿ20ಐ ಹಾಗೂ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇದೀಗ ಅವರು ಕೇವಲ 50 ಓವರ್‌ಗಳ ಸ್ವರೂಪದಲ್ಲಿ ಸಕ್ರಿಯರಾಗಿದ್ದಾರೆ. ಆ ಮೂಲಕ 2027ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಆಡಲು ಅವರು ಎದುರು ನೋಡುತ್ತಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಉಳಿದಿದ್ದರೂ ವಿರಾಟ್‌ ಕೊಹ್ಲಿ ನಿಯಮಿತವಾಗಿ ಫಿಟ್‌ನೆಸ್‌ ಹಾಗೂ ಅಭ್ಯಾಸವನ್ನು ನಡೆಸುತ್ತಿದ್ದಾರೆ. ಆ ಮೂಲಕ ಅವರು ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನವನ್ನು ತೋರುವ ಉದ್ದೇಶವನ್ನು ಹೊಂದಿದ್ದಾರೆ. ಅಂದ ಹಾಗೆ ಅವರು ಶನಿವಾರ ಲಾರ್ಡ್ಸ್‌ ಅಂಗಣದಲ್ಲಿಅಭ್ಯಾಸವನ್ನು ಮುಗಿಸಿಕೊಂಡು ಬರುವ ವೇಳೆ ಅಭಿಮಾನಿಗಳ ಫೋಟೋಗೆ ಪೋಸ್‌ ನೀಡಿದ್ದಾರೆ.

ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ 2027ರ ವಿಶ್ವಕಪ್‌ನಲ್ಲಿ ಆಡುತ್ತಾರಾ? ರಾಸ್‌ ಟೇಲರ್‌ ಭವಿಷ್ಯ!

ಪರ್ತ್‌ನಲ್ಲಿ ಅಕ್ಟೋಬರ್‌ 19 ರಂದು ಮೊದಲನೇ ಪಂದ್ಯದ ಮೂಲಕ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಣ ಏಕದಿನ ಸರಣಿ ಆರಂಭವಾಗಲಿದೆ. ಇದರ ಹೊರತಾಗಿಯೂ ಈ ಸರಣಿಯಲ್ಲಿ ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಇಬ್ಬರೂ ಏಕದಿನ ಕ್ರಿಕೆಟ್‌ಗೂ ವಿದಾಯ ಹೇಳಬಹುದೆಂಬ ಸುದ್ದಿಗಳು ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ. ಆದರೆ, ಬಿಸಿಸಿಐ ಮೂಲಗಳು ಈ ಸುದ್ದಿಯನ್ನು ನಿರಾಕರಿಸಿದ್ದಾರೆ. ಈ ಇಬ್ಬರೂ ಆತುರದಿಂದ ಈ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ ಹಾಗೂ ಅವರು ಭಾರತ ತಂಡಕ್ಕೆ ಪ್ರಮುಖ ಆಧಾರ ಸ್ಥಂಭಗಳು ಎಂದಿದ್ದಾರೆ.



ಇತ್ತೀಚೆಗೆ ಉತ್ತರ ಪ್ರದೇಶ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಬ್ಯಾಟ್ಸ್‌ಮನ್‌ ಸ್ವಸ್ತಿಕ್‌ ಚಿಕಾರ ಅವರು ವಿರಾಟ್‌ ಕೊಹ್ಲಿಯ ಐಪಿಎಲ್‌ ಟೂರ್ನಿಯ ಭವಿಷ್ಯದ ಯೋಜನೆಯನ್ನು ರಿವೀಲ್‌ ಮಾಡಿದ್ದರು. ಐಪಿಎಲ್‌ ವೇಳೆ ವಿರಾಟ್‌ ಕೊಹ್ಲಿ ಜೊತೆಗಿನ ಸಂಭಾಷಣೆಯನ್ನು ಬಹಿರಂಗಪಡಿಸಿದ್ದರು.

Dewald Brevis: ವಿರಾಟ್‌ ಕೊಹ್ಲಿಯ ದೊಡ್ಡ ದಾಖಲೆಯನ್ನು ಮುರಿದ ಬೇಬಿ ಎಬಿಡಿ!

"ವಿರಾಟ್‌ ಕೊಹ್ಲಿ ಭೈಯಾ ಹೇಳಿದ್ದರು, ʻಸಂಪೂರ್ಣವಾಗಿ ಫಿಟ್‌ ಇರುವವರೆಗೂ ಸಾಧ್ಯವಾದಷ್ಟು ಕ್ರಿಕೆಟ್‌ ಆಡುತ್ತೇನೆ. ಇಂಪ್ಯಾಕ್ಟ್‌ ಪ್ಲೇಯರ್‌ ಆಗಿ ಆಡಲು ನನಗೆ ಇಷ್ಟವಿಲ್ಲ. ಸಿಂಹದ ರೀತಿ ಕ್ರಿಕೆಟ್‌ ಆಡಲು ಬಯಸುತ್ತೇನೆ. 20 ಓವರ್‌ಗಳಲ್ಲಿ ಫೀಲ್ಡಿಂಗ್‌ ಮಾಡುತ್ತೇನೆ ಹಾಗೂ ಬ್ಯಾಟಿಂಗ್‌ ನಡೆಸುತ್ತೇನೆ. ಇಂಪ್ಯಾಕ್ಟ್‌ ಪ್ಲೇಯರ್‌ ಆಗಿ ಆಡುವ ಪರಿಸ್ಥಿತಿ ಬಂದರೆ, ಅಂದೇ ನಿವೃತ್ತಿ ಘೋಷಿಸುತ್ತೇನೆಂದಿದ್ದರುʼ," ಎಂದು ಸ್ವಸ್ತಿಕ್‌ ಚಿಕಾರ ರೆವ್‌ಸ್ಟೋರ್ಟ್ಸ್‌ಗೆ ತಿಳಿಸಿದ್ದರು.

2027ರ ಏಕದಿನ ವಿಶ್ವಕಪ್‌ ಟೂರ್ನಿಯ ಎರಡು ವರ್ಷಗಳ ಅವಧಿಯಲ್ಲಿ ಹಲವು ಯುವ ಆಟಗಾರರು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಛಾಪು ಮೂಡಿಸಬಹುದು. ಆ ಮೂಲಕ ರಾಷ್ಟ್ರೀಯ ತಂಡದ ಪರ ಏಕದಿನ ವಿಶ್ವಕಪ್‌ ಆಡಲು ಸ್ಥಾನ ಪಡೆಯಬಹುದು. ಆದರೆ, ವಿರಾಟ್‌ ಕೊಹ್ಲಿ ಮುಂದಿನ ಎರಡು ವರ್ಷಗಳ ಕಾಲ ಫಾರ್ಮ್‌ ಅನ್ನು ಉಳಿಸಿಕೊಂಡರೆ, ಖಂಡಿತಾ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಆಡಬಹುದು.