ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG 4th Test: 669 ರನ್‌ ಕಲೆ ಹಾಕಿದ ಇಂಗ್ಲೆಂಡ್‌, ಇನಿಂಗ್ಸ್‌ ಸೋಲಿನ ಭೀತಿಯಲ್ಲಿ ಭಾರತ!

ಇಂಗ್ಲೆಂಡ್ ತಂಡ, ಭಾರತ ತಂಡವನ್ನು ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲಿ ಇನಿಂಗ್ಸ್‌ ಸೋಲಿನ ಅಪಾಯಕ್ಕೆ ಸಿಲುಕಿಸಿದೆ. ಇಂಗ್ಲೆಂಡ್ ತನ್ನ ಪ್ರಥಮ ಇನಿಂಗ್ಸ್‌ನಲ್ಲಿ 669 ರನ್‌ಗಳನ್ನು ಕಲೆ ಹಾಕಿದೆ. ಇದು ತವರು ನೆಲದಲ್ಲಿ ಅವರ ಮೂರನೇ ಅತ್ಯಧಿಕ ಸ್ಕೋರ್ ಆಗಿದೆ. ಆ ಮೂಲಕ ಇಂಗ್ಲೆಂಡ್‌ ಪ್ರಥಮ ಇನಿಂಗ್ಸ್‌ನಲ್ಲಿ 311 ರನ್‌ ಮುನ್ನಡೆ ಪಡೆದಿದೆ.

ಮ್ಯಾಂಚೆಸ್ಟರ್‌ ಟೆಸ್ಟ್‌ನಲ್ಲಿ ಶತಕ ಬಾರಿಸಿದ ಬೆನ್‌ ಸ್ಟೋಕ್ಸ್‌.

ಮ್ಯಾಂಚೆಸ್ಟರ್: ಇಂಗ್ಲೆಂಡ್ ವಿರುದ್ಧದ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದಲ್ಲಿ(IND vs ENG) ಭಾರತ ತಂಡ ಇನಿಂಗ್ಸ್ ಸೋಲಿನ ಭೀತಿಗೆ ಒಳಗಾಗಿದೆ. ಇಂಗ್ಲೆಂಡ್ ಪ್ರಥಮ ಇನಿಂಗ್ಸ್‌ನಲ್ಲಿ 669 ರನ್‌ಗಳಿಗೆ ಆಲ್‌ಔಟ್‌ ಆಯಿತು. ಇದು ಟೆಸ್ಟ್ ಇತಿಹಾಸದಲ್ಲಿ ಇಂಗ್ಲೆಂಡ್ (England) ತನ್ನ ತವರು ನೆಲದಲ್ಲಿ ದಾಖಲಿಸಿದ ಮೂರನೇ ಅತ್ಯಧಿಕ ಸ್ಕೋರ್ ಆಗಿದೆ. ಅಲ್ಲದೆ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ಯಾವುದೇ ತಂಡ ಗಳಿಸಿದ ಅತ್ಯಧಿಕ ಸ್ಕೋರ್ ಇದು. ಭಾರತ ವಿರುದ್ಧ ಇಂಗ್ಲೆಂಡ್ ಇದಕ್ಕೂ ಮೊದಲು ಒಮ್ಮೆ ಮಾತ್ರ ಇದಕ್ಕಿಂತ ಹೆಚ್ಚಿನ ಸ್ಕೋರ್ ಗಳಿಸಿತ್ತು. ಶುಭಮನ್ ಗಿಲ್ ನಾಯಕತ್ವದ ತಂಡ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಕೇವಲ 358 ರನ್ ಗಳಿಸಿತ್ತು. ಇಂಗ್ಲೆಂಡ್ ಪ್ರಥಮ ಇನಿಂಗ್ಸ್‌ನಲ್ಲಿ 311 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿದೆ. ನಾಲ್ಕನೇ ದಿನ ಅತ್ಯುತ್ತಮ ಬ್ಯಾಟ್‌ ಮಾಡಿದ ಬೆನ್‌ ಸ್ಟೋಕ್ಸ್‌ (Ben Stokes) ಶತಕವನ್ನು ಸಿಡಿಸಿ ಇಂಗ್ಲೆಂಡ್‌ ತಂಡ 600ರ ಗಡಿ ದಾಟಲು ನೆರವು ನೀಡಿದ್ದಾರೆ.

ಟೆಸ್ಟ್ ಇತಿಹಾಸದಲ್ಲಿ ಒಂದು ತಂಡ ಮೊದಲ ಇನಿಂಗ್ಸ್‌ನಲ್ಲಿ 350 ರನ್ ಗಳಿಸಿದ ನಂತರ 300 ಕ್ಕೂ ಹೆಚ್ಚು ರನ್‌ಗಳ ಮುನ್ನಡೆಯನ್ನು ಬಿಟ್ಟುಕೊಟ್ಟಿರುವುದು ಇದು 7ನೇ ಬಾರಿ. ಇದು ಭಾರತ ತಂಡದೊಂದಿಗೆ ಮೂರನೇ ಬಾರಿಯಾಗಿದೆ. 1997 ರಲ್ಲಿ ಭಾರತ, ಶ್ರೀಲಂಕಾ ವಿರುದ್ಧ 537 ರನ್ ಗಳಿಸಿದ ನಂತರ 952 ರನ್‌ಗಳನ್ನು ಬಿಟ್ಟುಕೊಟ್ಟಿತ್ತು. 2009 ರಲ್ಲಿ ಅಹಮದಾಬಾದ್ ಟೆಸ್ಟ್‌ನಲ್ಲಿ 426 ರನ್ ಗಳಿಸಿದ ನಂತರ ಭಾರತ ಶ್ರೀಲಂಕಕ್ಕೆ 334 ರನ್‌ಗಳ ಮುನ್ನಡೆಯನ್ನು ನೀಡಿತ್ತು.

IND vs ENG: ಜಸ್‌ಪ್ರೀತ್‌ ಬುಮ್ರಾ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಲಿದ್ದಾರೆಂದ ಮೊಹಮ್ಮದ್‌ ಕೈಫ್‌!

ಪಂದ್ಯದ ನಾಲ್ಕನೇ ದಿನದಂದು ಇಂಗ್ಲೆಂಡ್‌ನ ಪ್ರಥಮ ಇನಿಂಗ್ಸ್‌ನ ಮೊದಲ ಸೆಷನ್‌ನಲ್ಲಿ ಕುಸಿಯಿತು. ಜೋ ರೂಟ್ 150 ರನ್ ಗಳಿಸಿದರೆ, ನಾಯಕ ಬೆನ್ ಸ್ಟೋಕ್ಸ್ 141 ರನ್ ಗಳಿಸಿದರು. ಭಾರತ ಪರ ರವೀಂದ್ರ ಜಡೇಜಾ 4 ವಿಕೆಟ್ ಪಡೆದರು ಆದರೆ 143 ರನ್‌ಗಳನ್ನು ಬಿಟ್ಟುಕೊಟ್ಟರು. ಜಸ್‌ಪ್ರೀತ್‌ ಬುಮ್ರಾ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಮೊದಲ ಬಾರಿ ಇನಿಂಗ್ಸ್‌ನಲ್ಲಿ 100 ಕ್ಕೂ ಹೆಚ್ಚು ರನ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ. ಅವರು ಎರಡು ವಿಕೆಟ್‌ಗಳನ್ನು ಪಡೆದರು. ಮೊಹಮ್ಮದ್ ಸಿರಾಜ್ ಮತ್ತು ವಾಷಿಂಗ್ಟನ್ ಸುಂದರ್ ಕೂಡ 100 ಕ್ಕೂ ಹೆಚ್ಚು ರನ್‌ಗಳನ್ನು ಬಿಟ್ಟುಕೊಟ್ಟರು.



ಇಂಗ್ಲೆಂಡ್ ಪರ 10ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಬ್ರೈಡನ್ ಕಾರ್ಸ್‌ 54 ಎಸೆತಗಳಲ್ಲಿ 47 ರನ್ ಗಳಿಸಿದರು. ನಾಯಕ ಬೆನ್ ಸ್ಟೋಕ್ಸ್ ಜೊತೆ 9ನೇ ವಿಕೆಟ್‌ಗೆ 96 ಎಸೆತಗಳಲ್ಲಿ 95 ರನ್ ಸೇರಿಸಿದರು. ಇಂಗ್ಲೆಂಡ್ ಪರ ಆರಂಭಿಕ ಆಟಗಾರ ಬೆನ್ ಡಕೆಟ್ 94 ರನ್ ಗಳಿಸಿದರೆ, ಝ್ಯಾಕ್‌ ಕ್ರಾವ್ಲಿ 84 ರನ್ ಗಳಿಸಿದರು. ಓಲಿ ಪೋಪ್ ಕೂಡ ಅರ್ಧಶತಕ ಗಳಿಸಿದರು.

IND vs ENG 4th Test: ಜೋ ರೂಟ್‌ ಶತಕ, ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ ಇಂಗ್ಲೆಂಡ್‌!

ಇಂಗ್ಲೆಂಡ್‌ನ ಅತಿ ಹೆಚ್ಚು ತವರಿನ ಮೊತ್ತಗಳು

903/7 vs ಆಸ್ಟ್ರೇಲಿಯಾ (1938)

710/7 vs ಭಾರತ (2011)

669 vs ಭಾರತ (2025)

658/8 vs ಆಸ್ಟ್ರೇಲಿಯಾ (1938)