ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʻನಾವು ಸುಮ್ಮನಿದ್ದೇವೆಂದ ಮಾತ್ರಕ್ಕೆ ಹಿಂದೆ ಸರಿದಂತೆ ಅಲ್ಲʼ:ಭಾರತಕ್ಕೆ ಎಚ್ಚರಿಕೆ ನೀಡಿದ ಬೆನ್‌ ಸ್ಟೋಕ್ಸ್‌!

ಮೂರನೇ ಟೆಸ್ಟ್‌ ಪಂದ್ಯದಲ್ಲಿ ಉಭಯ ತಂಡಗಳ ಆಟಗಾರರ ಮಡುವೆ ಮಾತಿನ ಚಕಮಕಿ ನಡೆದಿತ್ತು. ಈ ಬಗ್ಗೆ ಪ್ರವಾಸಿ ಭಾರತ ತಂಡಕ್ಕೆ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಎಚ್ಚರಿಕೆ ನೀಡಿದ್ದಾರೆ. ಎದುರಾಳಿ ತಂಡದ ಆಟಗಾರರ ವರ್ತನೆ ಸಭ್ಯವಿಲ್ಲದಿದ್ದರೆ ಅದಕ್ಕೆ ತಿರುಗೇಟು ಕೊಡುವುದು ನಮಗೂ ಗೊತ್ತಿದೆ. ಆದರೆ ಅದು ಒಳ್ಳೆಯ ಆಟಗಾರರ ಲಕ್ಷಣವಲ್ಲ ಎಂದು ಕುಟುಕಿದ್ದಾರೆ.

ಭಾರತ ತಂಡಕ್ಕೆ ಎಚ್ಚರಿಕೆ ನೀಡಿದ ಬೆನ್‌ ಸ್ಟೋಕ್ಸ್‌.

ಮ್ಯಾಂಚೆಸ್ಟರ್: ಭಾರತ ಹಾಗೂ ಇಂಗ್ಲೆಂಡ್‌ ತಂಡಗಳ ನಡುವಣ ನಾಲ್ಕನೇ ಟೆಸ್ಟ್‌ ಪಂದ್ಯ (IND vs ENG) ಜುಲೈ 23 ರಂದು ಇಲ್ಲಿನ ಓಲ್ಡ್‌ ಟ್ರಾಫರ್ಡ್‌ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಈ ಪಂದ್ಯಕ್ಕೆ ಉಭಯ ತಂಡಗಳು ಸಜ್ಜಾಗುತ್ತಿವೆ. ಮೂರು ಪಂದ್ಯಗಳ ಅಂತ್ಯಕ್ಕೆ ಆಂಡರ್ಸನ್‌-ತೆಂಡೂಲ್ಕರ್‌ ಟ್ರೋಪಿಯ ಸರಣಿಯಲ್ಲಿ ಇಂಗ್ಲೆಂಡ್‌ ತಂಡ 2-1 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಈ ನಡುವೆ ಮೂರನೇ ಟೆಸ್ಟ್‌ನಲ್ಲಿ ನಡೆದ ಉಭಯ ತಂಡಗಳ ಆಟಗಾರರ ಮಾತಿನ ಚಕಮಕಿ ಬಗ್ಗೆ ಪ್ರವಾಸಿ ಭಾರತ ತಂಡಕ್ಕೆ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ (Ben Stokes) ಎಚ್ಚರಿಕೆ ನೀಡಿದ್ದಾರೆ. ಕಳೆದ ಪಂದ್ಯದಲ್ಲಿ ಶುಭ್‌ಮನ್‌ ಗಿಲ್‌ (Shubman Gill) ಹಾಗೂ ಕೆಲ ಬೌಲರ್‌ಗಳ ನಡುವೆ ಮಾತಿನ ಚಕಮಕಿ ನಡೆದಿತ್ತು. ಇದೀಗ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಇದರ ಬಗ್ಗೆ ನಾವು ಎಚ್ಚರಿಕೆಯಿಂದ ಇರುತ್ತೇವೆಂದು ಬೆನ್‌ ಸ್ಟೋಕ್ಸ್‌ ತಿಳಿಸಿದ್ದಾರೆ.

ನಾಲ್ಕನೇ ಟೆಸ್ಟ್‌ ಪಂದ್ಯದ ನಿಮಿತ್ತ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಬೆನ್‌ ಸ್ಟೋಕ್ಸ್‌, "ನಾವು ಹೊರಗೆ ಹೋಗಿ ಪ್ರಾರಂಭಿಸಬೇಕಾದ ವಿಷಯಗಳಲ್ಲಿ ಇದು ಒಂದು ಎಂದು ನಾನು ಭಾವಿಸುವುದಿಲ್ಲ. ಎರಡೂ ತಂಡಗಳು ಹಾಗೆ ಮಾಡಲು ಎದುರು ನೋಡುತ್ತಿಲ್ಲ ಎಂದು ನಾನು ಭಾವಿಸುತ್ತೇನೆ. ಟೆಸ್ಟ್ ಸರಣಿಯಲ್ಲಿ ಯಾವಾಗಲೂ ಏನಾದರೂ ಬಿಸಿಯಾಗುವ ಒಂದು ಕ್ಷಣ ಇರುತ್ತದೆ ಎಂದು ನಾನು ಭಾವಿಸುತ್ತೇನೆ. ಇದು ಒಂದು ದೊಡ್ಡ ಸರಣಿಯಾಗಿದ್ದು, ಎರಡೂ ತಂಡಗಳ ಮೇಲೆ ಸಾಕಷ್ಟು ಒತ್ತಡವಿರುತ್ತದೆ. ಸ್ವಲ್ಪ ಬಿಸಿ ಇದ್ದೇ ಇರುತ್ತದೆ," ಎಂದು ಹೇಳಿದ್ದಾರೆ.

IND vs ENG: ನಾಲ್ಕನೇ ಟೆಸ್ಟ್‌ನಿಂದ ಆಕಾಶ್‌ ದೀಪ್‌ ಔಟ್‌, ಮ್ಯಾಂಚೆಸ್ಟರ್‌ ಟೆಸ್ಟ್‌ಗೆ ಯುವ ವೇಗಿ!

" ಭಾರತ ತಂಡ, ಎದುರಾಳಿ ಆಟಗಾರರ ವಿರುದ್ಧ ಯಾವುದೇ ಆಕ್ರಮಣಕಾರಿ ವರ್ತನೆ ತೋರಿದರೆ ನಾವು ಹಿಂದೆ ಸರಿಯುವುದಿಲ್ಲ. ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಮೂರನೇ ದಿನದ ಕೊನೆಯ ಸೆಷನ್‌ನಲ್ಲಿ ಭಾರತ ತಂಡದ ನಾಯಕ ಶುಭಮನ್‌ ಗಿಲ್ ಸೇರಿದಂತೆ ಕೆಲ ಆಟಗಾರರು, ಇಂಗ್ಲೆಂಡ್ ಓಪನರ್‌ಗಳಾದ ಝ್ಯಾಕ್ ಕ್ರಾವ್ಲಿ ಮತ್ತು ಬೆನ್ ಡಕೆಟ್ ವಿರುದ್ಧ ಸಮಯ ನಷ್ಟ ಮಾಡುತ್ತಿದ್ದರೆಂದು ಆಕ್ರಮಣಕಾರಿಯಾಗಿ ವರ್ತಿಸಿದ್ದರು.

ನಾವು ಸಾಧ್ಯವಿರುವ ಎಲ್ಲವನ್ನೂ ಭಾರತದ ಮೇಲೆ ಹಾಕಿದ್ದೇವೆ. ನಾವು ಉದ್ದೇಶಪೂರ್ವಕವಾಗಿ ಹೊರಗೆ ಹೋಗಿ ಪ್ರಾರಂಭಿಸುವ ವಿಷಯ ಇದಲ್ಲ. ಏಕೆಂದರೆ ಅದು ಮಧ್ಯದಲ್ಲಿ ನಾವು ಮಾಡಬೇಕಾದ ಕೆಲಸದಿಂದ ನಮ್ಮ ಗಮನವನ್ನು ಬೇರೆಡೆಗೆ ಸೆಳೆಯುತ್ತದೆ. ಆದರೆ, ನಾವು ಯಾವುದೇ ರೀತಿಯಲ್ಲಿ ಹಿಂದಕ್ಕೆ ಹೆಜ್ಜೆ ಇಡುವುದಿಲ್ಲ," ಎಂದು 34 ವರ್ಷದ ಇಂಗ್ಲೆಂಡ್‌ ನಾಯಕ ಎಚ್ಚರಿಕೆ ನೀಡಿದ್ದಾರೆ.

IND vs ENG: 8 ವರ್ಷಗಳ ಬಳಿಕ ಇಂಗ್ಲೆಂಡ್‌ ತಂಡಕ್ಕೆ ಮರಳಿದ ಲಿಯಾಮ್‌ ಡಾಸನ್‌ ಯಾರು?

ಏನಿದು ಘಟನೆ?

ಭಾರತ ಹಾಗೂ ಇಂಗ್ಲೆಂಡ್‌ ತಂಡಗಳ ನಡುವಣ ಮೂರನೇ ಟೆಸ್ಟ್‌ ಪಂದ್ಯ ಲಂಡನ್‌ನ ಲಾರ್ಡ್ಸ್‌ ಅಂಗಣದಲ್ಲಿ ಜುಲೈ 10 ರಿಂದ 14ರವರೆಗೆ ನಡೆದಿತ್ತು. ಈ ಪಂದ್ಯದ ಮೂರನೇ ದಿನದ ಕೊನೆಯಲ್ಲಿ ಇಂಗ್ಲೆಂಡ್‌ ದ್ವಿತೀಯ ಇನಿಂಗ್ಸ್‌ ಆರಂಭಿಸಿತ್ತು. ಈ ವೇಳೆ ಇಂಗ್ಲೆಂಡ್‌ ಆರಂಭುಕರಾದ ಝ್ಯಾಕ್‌ ಕ್ರಾವ್ಲಿ ಹಾಗೂ ಬೆನ್‌ ಡಕೆಟ್‌ ಅನಗತ್ಯವಾಗಿ ಸಮಯವನ್ನು ವ್ಯರ್ಥ ಮಾಡುತ್ತಿದ್ದರು. ಇದರಿಂದ ಟೀಮ್‌ ಇಂಡಿಯಾ ನಾಯಕ ಶುಭಮನ್‌ ಗಿಲ್‌ ಹಾಗೂ ಪ್ರವಾಸಿ ಆಟಗಾರರು ಕೆರಳಿದ್ದರು. ಈ ವೇಳೆ ಮಾತಿನ ಚಕಮಕಿ ಕೂಡ ನಡೆದಿತ್ತು. ನಂತರ ಭಾರತ ತಂಡದ ಇನಿಂಗ್ಸ್‌ನಲ್ಲಿಯೂ ಶುಭಮನ್‌ ಗಿಲ್‌ ಅವರನ್ನು ಇಂಗ್ಲೆಂಡ್‌ ಆಟಗಾರರು ಸ್ಲೆಡ್ಜ್‌ ಮಾಡಿದ್ದರು.