ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಡೆಲ್ಲಿ ಡೇರ್‌ಡೆವಿಲ್ಸ್‌ನಲ್ಲಿ ಅನುಭವಿಸಿದ್ದ ಕರಾಳ ದಿನಗಳನ್ನು ನೆನೆದ ಎಬಿ ಡಿ ವಿಲಿಯರ್ಸ್‌!

ದಕ್ಷಿಣ ಆಫ್ರಿಕಾ ಮಾಜಿ ನಾಯಕ ಎಬಿ ಡಿವಿಲಿಯರ್ಸ್‌ ಅವರು ತಮ್ಮ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ತಮ್ಮ ವೃತ್ತಿ ಜೀವನದ ಬಹುತೇಕ ಅವಧಿಯನ್ನು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರ ಸವೆಸಿದ್ದಾರೆ. ಆದರೆ, ಡೆಲ್ಲಿ ಡೇರ್‌ಡೆವಿಲ್ಸ್‌ ಪರ ಐಪಿಎಲ್‌ ವೃತ್ತಿ ಜೀವನವನ್ನು ಆರಂಭಿಸಿದ್ದ ಎಬಿ ಡಿ ವಿಲಿಯರ್ಸ್‌, ನಂತರ ಆರ್‌ಸಿಬಿಗೆ ಬಂದಿದ್ದರು.

ಡೆಲ್ಲಿ ಡೇರ್‌ಡೆವಿಲ್ಸ್‌ ಬಗ್ಗೆ ಎಬಿಡಿ ಅಚ್ಚರಿ ಹೇಳಿಕೆ.

ನವದೆಹಲಿ: ದಕ್ಷಿಣ ಆಫ್ರಿಕಾ (SA) ಮಾಜಿ ನಾಯಕ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು(RCB) ತಂಡದ ಮಾಜಿ ಬ್ಯಾಟ್ಸ್‌ಮನ್‌ ಎಬಿ ಡಿ ವಿಲಿಯರ್ಸ್‌ (AB De Villiers), ಡೆಲ್ಲಿ ಡೇರ್‌ಡೆವಿಲ್ಸ್‌ (ಈಗಿನ ಡೆಲ್ಲಿ ಕ್ಯಾಪಿಟಲ್ಸ್‌) ತಂಡದಲ್ಲಿ ಆಡುವಾಗ ತಾವು ಅನುಭವಿಸಿದ್ದ ಕರಾಳ ದಿನಗಳನ್ನು ಹಂಚಿಕೊಂಡಿದ್ದಾರೆ. ಎಬಿಡಿ ಡೆಲ್ಲಿ ಡೇರ್‌ಡೆವಿಲ್ಸ್‌ ಪರ ಐಪಿಎಲ್‌ ವೃತ್ತಿ ಜೀವನವನ್ನು ಆರಂಭಿಸಿದ್ದರೂ ನಂತರ ಅವರು ಆರ್‌ಸಿಬಿ ಪರ ತಮ್ಮ ಬಹುತೇಕ ಐಪಿಎಲ್‌ ವೃತ್ತಿ ಜೀವನವನ್ನು ಸವೆಸಿದ್ದರು. ಅವರು 2021ರ ಡಿಸೆಂಬರ್‌ ತಿಂಗಳಲ್ಲಿ ಐಪಿಎಲ್‌ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದರು.

ಎಬಿ ಡಿ ವಿಲಿಯರ್ಸ್‌ 2008ರಿಂದ 2010ರ ವರೆಗೂ ಡೆಲ್ಲಿ ಡೇರ್‌ಡೆವಿಲ್‌ಸ್‌ ಪರ ಆಡಿದ್ದರು. ಆದರೆ, ಈ ತಂಡದಲ್ಲಿ ಸಕ್ಸಸ್‌ ಆಗಲು ಸಾಧ್ಯವಾಗಲಿಲ್ಲ. ಅವರು 2011ರಂದು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಬಂದಿದ್ದರು. ಅಂದಿನಿಂದ ಐಪಿಎಲ್‌ ವೃತ್ತಿ ಜೀವನಕ್ಕೆ ವಿದಾಯ ಹೇಳುವುದಕ್ಕೂ ಮುನ್ನ ಆರ್‌ಸಿಬಿ ಪರ ಆಡಿದ್ದರು. ಆ ಮೂಲಕ ಐಪಿಎಲ್‌ನ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರೆನಿಸಿಕೊಂಡಿದ್ದರು. ಐಪಿಎಲ್‌ ಟೂರ್ನಿಯಲ್ಲಿ ಅತಿ ಹೆಚ್ಚು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಆಟಗಾರ ಎನಿಸಿಕೊಂಡಿದ್ದಾರೆ.

IPL 2025: ಆರ್‌ಸಿಬಿಗೆ ಕಪ್‌ ಗೆದ್ದುಕೊಡಬಲ್ಲ ನಾಲ್ವರು ಸ್ಟಾರ್‌ಗಳನ್ನು ಆರಿಸಿದ ವಿಜಯ್ ಮಲ್ಯ!

"ನಿಮಗೆ ಬೆಂಕಿ ಹಚ್ಚುವ ವ್ಯಕ್ತಿಗಳ ಹೆಸರುಗಳನ್ನು ಹೇಳಲು ನಾನು ಇಷ್ಟಪಡುವುದಿಲ್ಲ. ಆದರೆ ಡೆಲ್ಲಿ ಡೇರ್‌ಡೆವಿಲ್ಸ್ ತಂಡವು ಸಂಕಷ್ಟದಲ್ಲಿತ್ತು. ಆ ತಂಡದಲ್ಲಿ ಬಹಳಷ್ಟು ವಿಷಕಾರಿ ಪಾತ್ರಗಳಿದ್ದವು," ಎಂದು ಎಬಿ ಡಿವಿಲಿಯರ್ಸ್‌ ಹೇಳಿದ್ದಾರೆ.

ಅಂದು ಡೆಲ್ಲಿ ಡೇರ್‌ಡೆವಿಲ್ಸ್‌ ತಂಡದಲ್ಲಿ ವೀರೇಂದ್ರ ಸೆಹ್ವಾಗ್‌, ಗೌತಮ್‌ ಗಂಭೀರ್‌, ಶಿಖರ್‌ ಧವನ್‌, ಗ್ಲೆನ್‌ ಮೆಗ್ರಾಥ್‌ ಹಾಗೂ ಡೇನಿಯಲ್‌ ವೆಟ್ಟೋರಿ ಆಡಿದ್ದರು. ಇವರ ಜೊತೆ ಎಬಿ ಡಿವಿಲಿಯರ್ಸ್‌ ಕೂಡ ಆಡಿದ್ದರು. ಈ ಹಿನ್ನೆಲೆಯಲ್ಲಿ ಎಬಿಡಿ ಈ ತಂಡದಲ್ಲಿ ಹೆಚ್ಚಿನ ಅವಕಾಶಗಳು ಸಿಕ್ಕಿರಲಿಲ್ಲ. ಎರಡು ಬಾರಿ ಡೆಲ್ಲಿ ಪ್ಲೇಆಫ್ಸ್‌ಗೆ ಅರ್ಹತೆ ಪಡೆದಿದ್ದರೂ ಒಮ್ಮೆಯೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿರಲಿಲ್ಲ.

18 ವರ್ಷಗಳ ಬಳಿಕ ಆರ್‌ಸಿಬಿ ಕಪ್‌ ಗೆದ್ದ ಬಗ್ಗೆ ಭಾವನಾತ್ಮಕ ಸಂದೇಶ ಹಂಚಿಕೊಂಡ ಎಬಿಡಿ!

"ಆಗ ನಮ್ಮ ತಂಡದಲ್ಲಿ ಸಾಕಷ್ಟು ದಂತಕೆತಗಳು ಇದ್ದರು, ಹಾಗಾಗಿ ನನಗೆ ಸಿಹಿ-ಕಹಿ ಅನುಭವ ಸಿಕ್ಕಿತ್ತು. ಅಂದಿನ ಸಮಯವನ್ನು ನಾನು ಈಗಲೂ ಪ್ರೀತಿಯಿಂದ ನೆನಪು ಮಾಡಿಕೊಳ್ಳುತ್ತೇನೆ. ಗ್ಲೆನ್‌ ಮೆಗ್ರಾಥ್‌ ಹಾಗೂ ಡೇನಿಯಲ್‌ ವೆಟ್ಟೋರಿ ಅವರ ಜೊತೆ ಕಳೆದ ಸಮಯ ನನ್ನ ವೃತ್ತಿ ಜೀವನದಲ್ಲಿ ಪ್ರಮುಖ ಸಂಗತಿಗಳನ್ನು ಒಂದಾಗಿದೆ. ಈ ಹೀರೋಗಳನ್ನು ನೋಡಿಕೊಂಡು ನಾನು ಬೆಳೆದಿದ್ದೇನೆ ಹಾಗೂ ಪ್ರಾಮಾಣಿಕವಾಗಿ ನಾನು ಇವರಿಗೆ ಹೆದರುತ್ತಿದ್ದೆ," ಎಂದು ಡೆವಿಲಿಯರ್ಸ್‌ ಹೇಳಿದ್ದಾರೆ.

"2009ವರ್ಷ ಚೆನ್ನಾಗಿತ್ತು. ದಕ್ಷಿಣ ಆಫ್ರಿಕಾದಲ್ಲಿ ನಾನು ಸಂಪೂರ್ಣ ಸೀಸನ್‌ ಅನ್ನು ಆಡಿದ್ದೆ. ಈ ವೇಳೆ ನಾನು ತಂಡಕ್ಕೆ ಪ್ರಮುಖ ಆಟಗಾರ ಎಂದು ಭಾವಿಸಿದ್ದೆ ಆದರೆ, ತಕ್ಷಣ ನನ್ನನ್ನು ತಂಡದಿಂದ ಕೈ ಬಿಡುತ್ತಿದ್ದರು. ಆಗ ನನಗೆ ಮಿಶ್ರ ಭಾವನೆಗಳು ಉಂಟಾಗಿದ್ದವು. ನನ್ನನ್ನು ಉಳಿಸಿಕೊಳ್ಳಲಾಗುವುದು ಅವರು ನನಗೆ ಹೇಳಿದ್ದರು. ಆದರೆ, ಹರಾಜಿನಲ್ಲಿ ನನ್ನ ಹೆಸರಿತ್ತು. ತಕ್ಷಣ ಇಲ್ಲಿ ಏನಾಯಿತು ಎಂದು ನನಗೆ ಗೊತ್ತಾಗಲಿಲ್ಲ. ಆಗ ತುಂಬಾ ಬೇಸರವಾಯಿತು," ಎಂದು ಎಬಿಡಿ ತಿಳಿಸಿದ್ದಾರೆ.

PBKS vs MI: ಎಬಿಡಿ ದಾಖಲೆ ಮುರಿದ ಸೂರ್ಯಕುಮಾರ್‌ ಯಾದವ್‌

"ನಾನು ಆರ್‌ಸಿಬಿಗೆ ಸೇರ್ಪಡೆಯಾದ ಬಳಿಕ ಈ ತಂಡದ ಪರ ನಾನು ಎಲ್ಲಾ ಪಂದ್ಯಗಳನ್ನು ಆಡುತ್ತೇನೆಂಬ ಭಾವನೆ ನನ್ನಲ್ಲಿ ಉಂಟಾಯಿತು. ಈ ವೇಳೆ ನನಗೆ ಅಚ್ಚರಿಯಾಗಿತ್ತು. ನೀವು ನಮ್ಮ ಪ್ರಮುಖ ಆಟಗಾರ ಹಾಗೂ ನೀವು ನಮ್ಮ ತಂಡದಲ್ಲಿ ಬೆಳೆಯುತ್ತೀರಿ. ನೀವು ಈ ತಂಡದಲ್ಲಿ ದೊಡ್ಡ ಆಟಗಾರನಾಗಿ ಬೆಳೆಯುತ್ತೀರಿ ಹಾಗೂ ನೀವು ನಮ್ಮ ಕುಟುಂಬದ ಒಂದು ಭಾಗ ಎಂದು ನನಗೆ ಹೇಳಲಾಗಿತ್ತು,"ಎಂದು ದಕ್ಷಿಣ ಆಫ್ರಿಕಾ ದಿಗ್ಗಜ ಹೇಳಿಕೊಂಡಿದ್ದಾರೆ.