ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2026: ಆರ್‌ಸಿಬಿ ಪರ ಮತ್ತೊಮ್ಮೆ ಆಡ್ತಿರಾ? ಎಬಿ ಡಿ ವಿಲಿಯರ್ಸ್‌ ಕೊಟ್ಟ ಉತ್ತರ ಹೀಗಿದೆ!

ABD on IPL Comeback: ವಿಶ್ವ ಚಾಂಪಿಯನ್‌ಷಿಪ್‌ ಲೆಜೆಂಡ್ಸ್‌ ಟೂರ್ನಿಯಲ್ಲಿ ಮಿಂಚಿನ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ್ದ ದಕ್ಷಿಣ ಆಫ್ರಿಕಾ ಚಾಂಪಿಯನ್ಸ್‌ ನಾಯಕ ಎಬಿ ಡಿ ವಿಲಿಯರ್ಸ್‌ಗೆ ಇತ್ತೀಚೆಗೆ ಐಪಿಎಲ್‌ ಟೂರ್ನಿಯ ಕಮ್‌ಬ್ಯಾಕ್‌ ಸಂಬಂಧ ಪ್ರಶ್ನೆಯನ್ನು ಕೇಳಲಾಗಿತ್ತು. ಇದಕ್ಕೆ ಎಬಿಡಿ ಆಸಕ್ತದಾಯಕ ಉತ್ತರ ನೀಡಿದ್ದಾರೆ.

ಐಪಿಎಲ್‌ ಟೂರ್ನಿಗೆ ಕಮ್‌ಬ್ಯಾಕ್‌ ಮಾಡುವ ಪ್ರಶ್ನೆಗೆ ಎಬಿಡಿ ಪ್ರತಿಕ್ರಿಯೆ.

ನವದೆಹಲಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಇತಿಹಾಸದ ಸಾರ್ವಕಾಲಿಕ ಶ್ರೇಷ್ಠ ಆಟಗಾರರ ಪೈಕಿ ದಕ್ಷಿಣ ಆಫ್ರಿಕಾ ಮಾಜಿ ನಾಯಕ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡದ ದಿಗ್ಗಜ ಎಬಿ ಡಿ ವಿಲಿಯರ್ಸ್‌ (AB De Villiers) ಕೂಡ ಒಬ್ಬರು. ಅವರು 2018ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ನಂತರ 2021ರಲ್ಲಿ ಐಪಿಎಲ್‌ ವೃತ್ತಿ ಬದುಕಿಗೆ ನಿವೃತ್ತಿಯನ್ನು ಘೋಷಿಸಿದ್ದರು. ಆದರೆ, ಇತ್ತೀಚೆಗೆ ವಿಶ್ವ ಚಾಂಪಿಯನ್‌ಷಿಪ್‌ ಆಫ್‌ ಲೆಜೆಂಡ್ಸ್‌ ಟೂರ್ನಿಯಲ್ಲಿ ಇವರ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾ ಚಾಂಪಿಯನ್ಸ್‌ ತಂಡ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. ಇದೀಗ ಎಬಿ ಡಿ ವಿಲಿಯರ್ಸ್‌ ಮುಂದಿನ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಗೆ ಮರಳುವ ಸಂಬಂಧದ ಪ್ರಶ್ನೆಗೆ ಉತ್ತರವನ್ನು ನೀಡಿದ್ದಾರೆ.

ಶುಭಾಂಕರ್‌ ಮಿಶ್ರಾ ಅವರ ಯೂಟ್ಯೂಬ್‌ ಚಾನೆಲ್‌ನಲ್ಲಿ ವಿಶ್ವದ ಶ್ರೀಮಂತ ಫ್ರಾಂಚೈಸಿ ಲೀಗ್‌ಗೆ ಮರಳುತ್ತೀರಾ? ಎಂಬ ಪ್ರಶ್ನೆಯನ್ನು ಎಬಿ ಡಿ ವಿಲಿಯರ್ಸ್‌ಗೆ ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ ಎಬಿಡಿ, ಇಲ್ಲ ನಾನು ಭಾರತೀಯ ಟಿ20 ಲೀಗ್‌ಗೆ ಬರುವುದಿಲ್ಲ ಎಂದು ಖಚಿತಪಡಿಸಿದ್ದಾರೆ.

IND vs ENG: ಮೊಹಮ್ಮದ್‌ ಸಿರಾಜ್‌ಗೆ ಆಗುತ್ತಿರುವ ಅನ್ಯಾಯವನ್ನು ರಿವೀಲ್‌ ಮಾಡಿದ ಆರ್‌ ಅಶ್ವಿನ್‌!

"ನಾನು ತುಂಬಾ ನರ್ವಸ್‌ ಆಗಿದ್ದೆ. ಆಡುವ ಬದಲು ನಾನು ಬೆಂಬಲ ನೀಡಲು ಬರುತ್ತೇನೆ. ನಾನು ತುಂಬಾ ಒಳ್ಳೆಯ ಬೆಂಬಲ ನೀಡುವ ವ್ಯಕ್ತಿ. ಐಪಿಎಲ್‌ ತುಂಬಾ ದೀರ್ಘಾವಧಿ ನಡೆಯುವ ಟೂರ್ನಿಯಾಗಿದೆ ಹಾಗೂ ಮೂರು ತಿಂಗಳುಗಳ ಕಾಲ ಟೂರ್ನಿ ಜರುಗಲಿದೆ. 41ನೇ ವಯಸ್ಸಿನ ಯಾರಿಗಾದರೂ ಇದು ಅತ್ಯಂತ ದೊಡ್ಡ ಬದ್ದತೆಯಾಗಿದೆ. ಹಾಗಾಂತ ಎಂಎಸ್‌ ಧೋನಿಗೆ ನೀವು ನನ್ನನ್ನು ಹೋಲಿಕೆ ಮಾಡಬೇಡಿ. ನಾನು ತುಂಬಾ ಕಠಿಣ ಪರಿಶ್ರಮದ ವ್ಯಕ್ತಿ. ಕಳೆದ ವರ್ಷಗಳಲ್ಲಿ ನಾನು ಮಾಡಿದ್ದ ಕಠಿಣ ಪರಿಶ್ರಮ ಸಾಕಾಗಿದೆ. ನಾನು ಸುಮ್ಮನೆ ಹಾಸ್ಯ ಮಾಡುತ್ತಿದ್ದೇನೆ. ಅವರಿಗೆ ನಾನು ಹ್ಯಾಟ್ಸ್‌ ಆಫ್‌ ಹೇಳುತ್ತೇನೆ. ಆದರೆ, ನಾವೆಲ್ಲರೂ ವಿಭಿನ್ನರು. ನಾನು ನನ್ನ ಕಡೆಯಿಂದ ಸಾಧ್ಯವಾದಷ್ಟು ಉತ್ತಮ ಆಟವನ್ನು ಆಡಿದ್ದೇನೆ ಹಾಗೂ ಇದಕ್ಕಾಗಿ ನಾನು ಖುಷಿಯಾಗಿದ್ದೇನೆ," ಎಂದು ಎಬಿ ಡಿ ವಿಲಿಯರ್ಸ್‌ ತಿಳಿಸಿದ್ದಾರೆ.

IND vs ENG: ʻಒಂದು ವೇಳೆ ಬೆನ್‌ ಸ್ಟೋಕ್ಸ್‌ ಆಡಿದ್ರೆ ಇಂಗ್ಲೆಂಡ್‌ ಗೆಲ್ಲುತ್ತಿತ್ತುʼ-ಮೈಕಲ್‌ ವಾನ್‌!

2008ರಲ್ಲಿ ಎಬಿ ಡಿ ವಿಲಿಯರ್ಸ್‌ ಅವರು ಡೆಲ್ಲಿ ಡೇರ್‌ಡೆವಿಲ್ಸ್‌ ಪರ ಐಪಿಎಲ್‌ ಟೂರ್ನಿಗೆ ಪದಾರ್ಪಣೆ ಮಾಡಿದ್ದರು. ಈ ತಂಡದ ಪರ ಅವರು ಮೂರು ವರ್ಷಗಳ ಕಾಲ ಆಡಿದ್ದರು. ನಂತರ ಅವರು 2011ರಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಸೇರ್ಪಡೆಯಾಗಿದ್ದರು. ಅಂದಿನಿಂದ ಅವರು ಬರೋಬ್ಬರಿ 11 ವರ್ಷಗಳ ಕಾಲ ಆರ್‌ಸಿಬಿ ತಂಡದ ಪರ ಆಡಿದ್ದರು.

ವಿರಾಟ್‌ ಕೊಹ್ಲಿ ಬಳಿಕ ಆರ್‌ಸಿಬಿ ಪರ ಅತಿ ಹೆಚ್ಚು ರನ್‌ ಗಳಿಸಿದ ಎರಡನೇ ಬ್ಯಾಟ್ಸ್‌ಮನ್‌ ಎಬಿ ಡಿವಿಲಿಯರ್ಸ್.‌ ಅವರು ಆರ್‌ಸಿಬಿ ಪರ ಆಡಿದ 144 ಇನಿಂಗ್ಸ್‌ಗಳಿಂದ 4491 ರನ್‌ಗಳನ್ನು ಕಲೆ ಹಾಕಿದ್ದಾರೆ. ಇವರು ಇದರಲ್ಲಿ ಎರಡು ಶತಕಗಳು ಹಾಗೂ 37 ಅರ್ಧಶತಕಗಳನ್ನು ಬಾರಿಸಿದ್ದಾರೆ. ಆದರೆ, ಎಬಿಡಿ ಆಡುವಾಗ ಆರ್‌ಸಿಬಿ ತಂಡ ಒಮ್ಮೆಯೂ ಐಪಿಎಲ್‌ ಟ್ರೋಫಿಯನ್ನು ಗೆಲ್ಲಲು ಸಾಧ್ಯವಾಗಿರಲಿಲ್ಲ ಎಂಬುದು ಬೇಸರದ ಸಂಗತಿ.