ನವದೆಹಲಿ: ಸ್ಟಾರ್ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ನಿಕೋಲಸ್ ಪೂರನ್(Nicholas Pooran) ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನಕ್ಕೆ ಬಹುಬೇಗ ವಿದಾಯ ಹೇಳಿದ್ದರಿಂದ ವಿಂಡೀಸ್ ದಿಗ್ಗಜ ಬ್ರಿಯಾನ್ ಲಾರಾ (Brian Lara) ಅವರು, ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯನ್ನು (West Indies Cricket Board) ಟೀಕಿಸಿದ್ದಾರೆ. ತಮ್ಮ ವೃತ್ತಿ ಜೀವನದ ಅತ್ಯುತ್ತಮ ಫಾರ್ಮ್‌ನಲ್ಲಿರುವಾಗಲೇ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಆ ಮೂಲಕ ವಿಶ್ವದಾದ್ಯಂತ ಟಿ20 ಫ್ರಾಂಚೈಸಿ ಲೀಗ್‌ನಲ್ಲಿ ಮುಂದುವರಿಯುವುದಾಗಿ ಅವರು ತಿಳಿಸಿದ್ದರು. ನಿಕೋಲಸ್ ಪೂರನ್ ಬೆನ್ನಲ್ಲೆ ಜುಲೈ 17 ರಂದು ಸ್ಟಾರ್ ಆಲ್‌ರೌಂಡರ್ ಆಂಡ್ರೆ ರಸೆಲ್ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.
ಸ್ಟಿಕ್ ಟು ಕ್ರಿಕೆಟ್ ಪಾಡ್‌ಕಾಸ್ಟ್ ಜೊತೆ ಮಾತನಾಡಿದ ಬ್ರಿಯಾನ್ ಲಾರಾ, "ತಮ್ಮ ವೃತ್ತಿಜೀವನವನ್ನು ಏನು ಮಾಡಬೇಕೆಂದು ನಿರ್ಧರಿಸುತ್ತಿರುವ ಬಹಳಷ್ಟು ವ್ಯಕ್ತಿಗಳು ನಿಮ್ಮಲ್ಲಿದ್ದಾರೆ. ಪೂರನ್ ಅವರಂತಹ ಆಕ್ರಮಣಕಾರಿ ಆಟಗಾರರು 29ನೇ ವಯಸ್ಸಿನಲ್ಲಿ ನಿವೃತ್ತರಾದರು. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಅವರು ಏಕೆ ಹಾಗೆ ಮಾಡಿದರು ಎಂಬುದು ಸ್ಪಷ್ಟವಾಗಿದೆ. ಪ್ರಪಂಚದಾದ್ಯಂತ ಐದು ಅಥವಾ ಆರು ಲೀಗ್‌ಗಳಿವೆ ಮತ್ತು ಅವರು ಅವುಗಳಲ್ಲಿ ಆಡುವ ಮೂಲಕ ದೊಡ್ಡ ಪ್ರಮಾಣದ ಹಣವನ್ನು ಗಳಿಸಲು ಸಮರ್ಥರಾಗಿದ್ದಾರೆ," ಎಂದು ದೂರಿದ್ದಾರೆ.
IND vs ENG: ಶುಭಮನ್ ಗಿಲ್‌ರನ್ನು ಹಿಂದಿಕ್ಕಬಲ್ಲ ಆಟಗಾರನನ್ನು ಹೆಸರಿಸಿದ ಓವೈಸ್ ಶಾ!
ವಿಂಡೀಸ್ ಮಂಡಳಿಯನ್ನು ಟೀಕಿಸಿದ ಲಾರಾ
ತಮ್ಮ ರಾಷ್ಟ್ರೀಯ ತಂಡದಲ್ಲಿ ಆಟಗಾರರನ್ನು ಉಳಿಸಿಕೊಳ್ಳಲು ವಿಫಲವಾಗುತ್ತಿರುವ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯನ್ನು ಇದೇ ವೇಳೆ 400 ರನ್‌ಗಳ ಸರದಾರ ಟೀಕಿಸಿದ್ದಾರೆ.
"ನನಗೆ ಅದರಲ್ಲಿ ಯಾವುದೇ ಸಮಸ್ಯೆ ಇಲ್ಲ. ಸತ್ಯವೆಂದರೆ, ಇಂಗ್ಲೆಂಡ್, ಆಸ್ಟ್ರೇಲಿಯಾ ಅಥವಾ ಭಾರತದಂತಹ ದೇಶಗಳ ಮಂಡಳಿಗಳು ಮಾಡಿದಂತೆ, ತಮ್ಮ ಆಟಗಾರರನ್ನು ನಿಷ್ಠರನ್ನಾಗಿ ಇರಿಸಿಕೊಳ್ಳಲು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಅಥವಾ ಆಡಳಿತ ಮಂಡಳಿಯು ಅರ್ಥಪೂರ್ಣವಾದ ಏನನ್ನೂ ಮಾಡಿಲ್ಲ ಎಂದು ನಾನು ಭಾವಿಸುತ್ತೇನೆ. ಆದ್ದರಿಂದ ಸ್ವಾಭಾವಿಕವಾಗಿ, ನಮ್ಮ ಆಟಗಾರರು ಬೇರೆ ಆಡಲು ಎದುರು ನೋಡುತ್ತಿದ್ದಾರೆ. ಕೇನ್ ವಿಲಿಯಮ್ಸನ್ ಅಥವಾ ದಕ್ಷಿಣ ಆಫ್ರಿಕಾದ ಆಟಗಾರರು ಇದೇ ರೀತಿಯ ಆಯ್ಕೆಗಳನ್ನು ಮಾಡುವುದನ್ನು ನೀವು ನೋಡಿದಾಗ, ಈ ವ್ಯಕ್ತಿಗಳು ತಮ್ಮ ಕುಟುಂಬಗಳಿಗೆ ಹೆಚ್ಚಿನ ಸಮಯವನ್ನು ನೀಡಲು ಪ್ರಯತ್ನಿಸುತ್ತಿದ್ದಾರೆ ಎಂದು ನೀವು ಅರ್ಥಮಾಡಿಕೊಳ್ಳುತ್ತೀರಿ," ಎಂದು ಬ್ರಿಯಾನ್ ಲಾರಾ ಹೇಳಿದ್ದಾರೆ.
IND vs ENG 4th Test: ಬುಮ್ರಾಗೆ ಮತ್ತೆ ವಿಶ್ರಾಂತಿ; ನಾಲ್ಕನೇ ಟೆಸ್ಟ್‌ಗೆ ಭಾರತ ತಂಡದಲ್ಲಿ ಹಲವು ಬದಲಾವಣೆ
ಕಿವೀಸ್ ದಿಗ್ಗಜ ಕೇನ್ ವಿಲಿಯಮ್ಸನ್ ಅವರು ಟಿ20 ಲೀಗ್‌ಗಳನ್ನು ಆಡುವ ಸಲುವಾಗಿ ತಮ್ಮ ರಾಷ್ಟ್ರೀಯ ತಂಡದ ಗುತ್ತಿಗೆಯನ್ನು ತ್ಯಜಿಸಿದ್ದಾರೆ, ದಕ್ಷಿಣ ಆಫ್ರಿಕಾದ ಸ್ಟಾರ್ ಹೆನ್ರಿಚ್ ಕ್ಲಾಸೆನ್ ಅವರು ಕೂಡ ಇದೇ ಕಾರಣಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಆದ್ದರಿಂದ, ಅಂತಾರಾಷ್ಟ್ರೀಯ ಕ್ರಿಕೆಟ್ ವಿಶ್ವಾದ್ಯಂತ ಪ್ರಮುಖ ಬದಲಾವಣೆಯನ್ನು ಕಾಣುತ್ತಿದೆ, ಆಟಗಾರರು ಅಂತಾರಾಷ್ಟ್ರೀಯ ಪಂದ್ಯಗಳಿಗಿಂತ ಫ್ರಾಂಚೈಸಿ ಟಿ20 ಕ್ರಿಕೆಟ್ ಆಡಲು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ರಾಷ್ಟ್ರೀಯ ತಂಡಕ್ಕೆ ಆಡುವುದನ್ನು ಪ್ರೋತ್ಸಾಹಿಸುವುದು ಆಯಾ ರಾಷ್ಟ್ರೀಯ ಮಂಡಳಿಗಳ ಜವಾಬ್ದಾರಿಯಾಗಿದೆ, ಇಲ್ಲದಿದ್ದರೆ ಇತರ ತಂಡಗಳು ವೆಸ್ಟ್ ಇಂಡೀಸ್‌ನಂತೆಯೇ ಹಿನ್ನಡೆಯನ್ನು ಎದುರಿಸಬಹುದು.