ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ರಾಜಸ್ಥಾನ್‌ ವಿರುದ್ದ 48 ರನ್‌ ಗಳಿಸಿ ವಿಶೇಷ ದಾಖಲೆ ಬರೆದ ಸೂರ್ಯಕುಮಾರ್‌ ಯಾದವ್‌!

ಗುರುವಾರ ಜೈಪುರದ ಸಾವಾಯಿ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ನಡೆದಿದ್ದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ 23 ಎಸೆತಗಳಲ್ಲಿ 48 ರನ್‌ ಗಳಿಸಿದ ಸೂರ್ಯಕುಮಾರ್‌ ಯಾದವ್‌, ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಆ ರಾಬಿನ್‌ ಉತ್ತಪ್ಪ ಅವರ 11 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ.

1/6

ಮುಂಬೈ ಇಂಡಿಯನ್ಸ್‌ಗೆ 100 ರನ್‌ ಜಯ

ಗುರುವಾರ ನಡೆದಿದ್ದ 2025ರ ಐಪಿಎಲ್‌ 50ನೇ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ವಿರುದ್ದ ಮುಂಬೈ ಇಂಡಿಯನ್ಸ್‌ ತಂಡ 100 ರನ್‌ಗಳ ಭರ್ಜರಿ ಗೆಲುವು ಪಡೆದಿತ್ತು. ಆ ಮೂಲಕ ಟೂರ್ನಿಯ ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.

2/6

ಸೂರ್ಯಕುಮಾರ್‌ ಯಾದವ್‌ 48 ರನ್‌

ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ್ದ ಮುಂಬೈ ಇಂಡಿಯನ್ಸ್‌ ಪರ ಸೂರ್ಯಕುಮಾರ್‌ ಯಾದವ್‌, ಕೇವಲ 23 ಎಸೆತಗಳಲ್ಲಿ ಅಜೇಯ 48 ರನ್‌ಗಳನ್ನು ಸಿಡಿಸಿದ್ದರು. ಆ ಮೂಲಕ ಮುಂಬೈ 217 ರನ್‌ಗಳನ್ನು ತಲುಪಲು ನೆರವು ನೀಡಿದ್ದರು.

3/6

ಇತಿಹಾಸ ಬರೆದ ಸೂರ್ಯಕುಮಾರ್‌

ಐಪಿಎಲ್‌ ಟೂರ್ನಿಯಲ್ಲಿ ಸತತವಾಗಿ 11 ಬಾರಿ 25ಕ್ಕೂ ಅಧಿಕ ರನ್‌ ಗಳಿಸುವ ಮೂಲಕ ಸೂರ್ಯಕುಮಾರ್‌ ಯಾದವ್‌ ಅವರು 11 ವರ್ಷಗಳ ರಾಬಿನ್‌ ಉತ್ತಪ್ಪ ಅವರ ದಾಖಲೆಯನ್ನು ಮುರಿದಿದ್ದಾರೆ. ಈ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್‌ ಪರ ಸೂರ್ಯ ಆಡಿದ ಎಲ್ಲಾ ಪಂದ್ಯಗಳಲ್ಲಿಯೂ 25ಕ್ಕೂ ಅಧಿಕ ರನ್‌ ಗಳಿಸಿದ್ದಾರೆ.

4/6

ಸತತವಾಗಿ 25ಕ್ಕೂ ಹೆಚ್ಚು ರನ್‌ ಗಳಿಸಿದವರು

ಸೂರ್ಯಕುಮಾರ್ ಯಾದವ್: 11 (2025)

ರಾಬಿನ್ ಉತ್ತಪ್ಪ: 10 (2024)

ಸ್ಟೀವ್ ಸ್ಮಿತ್: 9 (2016-18)

ವಿರಾಟ್ ಕೊಹ್ಲಿ: 9 (2024-25)

ಸಾಯಿ ಸುದರ್ಶನ್‌: 9 (2024-25)

5/6

ಸೂರ್ಯಕುಮಾರ್‌ ಯಾದವ್‌ 475 ರನ್‌

ಪ್ರಸಕ್ತ ಐಪಿಎಲ್‌ ಟೂರ್ನಿಯಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ಸೂರ್ಯಕುಮಾರ್‌ ಯಾದವ್‌, ಆಡಿದ 11 ಪಂದ್ಯಗಳಿಂದ 67.86ರ ಸರಾಸರಿಯಲ್ಲಿ 475 ರನ್‌ಗಳನ್ನು ಗಳಿಸಿದ್ದಾರೆ. ಆ ಮೂಲಕ ಈ ಟೂರ್ನಿಯಲ್ಲಿ ಅಧಿಕ ರನ್‌ ಗಳಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ.

6/6

ರೋಹಿತ್‌-ರಿಕೆಲ್ಟನ್‌ ಅರ್ಧಶತಕ

ಮುಂಬೈ ಇಂಡಿಯನ್ಸ್‌ ತಂಡದ ಪರ ಗುರುವಾರದ ಪಂದ್ಯದಲ್ಲಿ ಸೂರ್ಯಕುಮಾರ್‌ ಯಾದವ್‌ಗೂ ಮುನ್ನ ಬ್ಯಾಟಿಂಗ್‌ನಲ್ಲಿ ಮಿಂಚಿದ್ದ ರೋಹಿತ್‌ ಶರ್ಮಾ ಹಾಗೂ ರಯಾನ್‌ ರಿಕೆಲ್ಟನ್‌ ಸ್ಪೋಟಕ ಅರ್ಧಶತಕಗಳನ್ನು ಬಾರಿಸಿದ್ದರು. ಇದರಲ್ಲಿ 61 ರನ್‌ ಗಳಿಸಿ ರಿಕೆಲ್ಟನ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.