ಕ್ಯಾನ್‌ಬೆರಾ: ಬಹುನಿರೀಕ್ಷಿತ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ (IND vs AUS) ಅಕ್ಟೋಬರ್ 19 ರಂದು ಆರಂಭವಾಗಲಿದೆ. ಕಾಂಗರೂ ನಾಡಿನಲ್ಲಿ ನಡೆಯಲಿರುವ ಈ ಸರಣಿಗೆ ಉಭಯ ತಂಡಗಳು ಸಜ್ಜಾಗುತ್ತಿವೆ. ಇದರ ನಡುವೆ ಆಸ್ಟ್ರೇಲಿಯಾ ಟಿ20ಐ ತಂಡದ ನಾಯಕ ಮಿಚೆಲ್ ಮಾರ್ಷ್ (Mitchell Marsh), ಭಾರತ-ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ (IND-AUS-ENG Playing XI) ಸಂಯೋಜಿತ ಸಾರ್ವಕಾಲಿಕ ಶ್ರೇಷ್ಠ ಏಕದಿನ ಪ್ಲೇಯಿಂಗ್ XI ಅನ್ನು ಪ್ರಕಟಿಸಿದ್ದಾರೆ. ಫಾಕ್ಸ್ ಕ್ರಿಕೆಟ್ ಪೋಸ್ಟ್ ಮಾಡಿರುವ ವಿಡಿಯೊವೊಂದರಲ್ಲಿ ತಮ್ಮ ಆಯ್ಕೆಗಳನ್ನು ತಿಳಿಸಿರುವ ಮಾರ್ಷ್, ಮೊದಲಿಗೆ ಸಚಿನ್ ತೆಂಡೂಲ್ಕರ್ ಮತ್ತು ಡೇವಿಡ್ ವಾರ್ನರ್ ಅವರನ್ನು ಆಯ್ಕೆ ಮಾಡಿದ್ದಾರೆ. ರೋಹಿತ್ ಶರ್ಮಾ, ಮಾರ್ಕ್ ವಾ, ಜಾನಿ ಬೈರ್‌ಸ್ಟೋವ್ ಅವರನ್ನು ಹೊರಗಿಟ್ಟರು. ಮಧ್ಯಮ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ , ಜೋ ರೂಟ್, ರಿಕಿ ಪಾಂಟಿಂಗ್, ಮೈಕಲ್ ಬೆವನ್, ಇಯಾನ್ ಮಾರ್ಗನ್ ಮತ್ತು ಮೈಕೆಲ್ ಕ್ಲಾರ್ಕ್ ಹೆಸರನ್ನು ತೆಗೆದುಕೊಂಡರು.
ಗಮನಾರ್ಹವಾಗಿ ಮೂರು ವಿಶ್ವಕಪ್ ವಿಜೇತ ನಾಯಕರಾದ ಪಾಂಟಿಂಗ್, ಮಾರ್ಗನ್ ಮತ್ತು ಕ್ಲಾರ್ಕ್ ಅವರನ್ನು ಕೈಬಿಟ್ಟರು. ಇನ್ನು ವಿಕೆಟ್ ಕೀಪಿಂಗ್ ಬ್ಯಾಟರ್ ಆಗಿ ಮಾರ್ಷ್, ಎಂಎಸ್ ಧೋನಿ ಮತ್ತು ಜೋಸ್ ಬಟ್ಲರ್ ಬದಲಿಗೆ ಆಡಮ್ ಗಿಲ್‌ಕ್ರಿಸ್ಟ್ ಅವರನ್ನು ಆಯ್ಕೆ ಮಾಡಿದರು. ಅವರು ವಾರ್ನರ್ ಜೊತೆಗೆ ಗಿಲ್‌ಕ್ರಿಸ್ಟ್ ಅವರನ್ನು ಅಗ್ರ ಕ್ರಮಾಂಕದಲ್ಲಿ ಇರಿಸಿದರು ಮತ್ತು ಸಚಿನ್ ಅವರನ್ನು ಮೂರನೇ ಕ್ರಮಾಂಕಕ್ಕೆ ಹೆಸರಿಸಿದರು. ಆಲ್‌ರೌಂಡರ್ ವಿಭಾಗದಲ್ಲಿ ಯುವರಾಜ್ ಸಿಂಗ್ , ಶೇನ್ ವ್ಯಾಟ್ಸನ್, ಕಪಿಲ್ ದೇವ್, ಆಂಡ್ರ್ಯೂ ಸೈಮಂಡ್ಸ್, ಸ್ಟೀವಾ, ಆಂಡ್ರ್ಯೂ ಫ್ಲಿಂಟಾಫ್ ಮತ್ತು ಬೆನ್ ಸ್ಟೋಕ್ಸ್ ಅವರನ್ನು ಮಾರ್ಷ್ ಹೆಸರಿಸಿದ್ದಾರೆ. ಅವರು ತಮ್ಮ ಅಗ್ರ ಏಳು ಕ್ರಮಾಂಕಗಳನ್ನು ಗಟ್ಟಿ ಮಾಡಿಕೊಳ್ಳಲು ಸೈಮಂಡ್ಸ್ ಅವರನ್ನು ಆಯ್ಕೆ ಮಾಡಿಕೊಂಡರು.
IND vs AUS: ಯಶಸ್ವಿ ಜೈಸ್ವಾಲ್ ಔಟ್, ಆಸ್ಟ್ರೇಲಿಯಾ ಏಕದಿನ ಸರಣಿಗೆ ಭಾರತದ ಬಲಿಷ್ಠ ಪ್ಲೇಯಿಂಗ್ XI
ಇಬ್ಬರು ಬೌಲರ್‌ಗಳಿಗೆ ಸ್ಥಾನ
ಕೊನೆಯ ನಾಲ್ಕು ಸ್ಥಾನಗಳಿಗೆ ಮಿಚೆಲ್ ಮಾರ್ಷ್ ಆಯ್ಕೆ ಮಾಡಲು ಬಲವಾದ ಬೌಲಿಂಗ್ ಆಯ್ಕೆಗಳಿದ್ದವು, ಅವರಲ್ಲಿ ಭಾರತದ ದಂತಕಥೆ ಅನಿಲ್ ಕುಂಬ್ಳೆ ಮತ್ತು ಜಸ್‌ಪ್ರೀತ್ ಬುಮ್ರಾ ಸೇರಿದ್ದಾರೆ. ಪಟ್ಟಿಯಲ್ಲಿ ಜಾವಗಲ್ ಶ್ರೀನಾಥ್, ಗ್ಲೆನ್ ಮೆಗ್ರಾತ್, ಬ್ರೆಟ್ ಲೀ, ಶೇನ್ ವಾರ್ನ್, ಆಡಮ್ ಝಾಂಪ, ಡ್ಯಾರೆನ್ ಗೌಫ್ ಮತ್ತು ಜೇಮ್ಸ್ ಆಂಡರ್ಸನ್ ಕೂಡ ಇದ್ದರು. ಮಾರ್ಷ್, ಕುಂಬ್ಳೆ ಅವರನ್ನು 8ನೇ ಕ್ರಮಾಂಕದಲ್ಲಿ ಆಯ್ಕೆ ಮಾಡಿದರು, ಭಾರತದ ಪರ ಅತಿ ಹೆಚ್ಚು ಏಕದಿನ ವಿಕೆಟ್ ಪಡೆದ ಬೌಲರ್ (334 ಔಟ್) ಎಂಬ ಹೆಗ್ಗಳಿಕೆಗೆ ಕುಂಬ್ಳೆ ಪಾತ್ರರಾಗಿದ್ದಾರೆ. ನಂತರ ಅವರು ಇಂಗ್ಲೆಂಡ್‌ನ ಮಾಜಿ ವೇಗಿ ಡ್ಯಾರೆನ್ ಗೌಫ್ ಅವರನ್ನು ಆಯ್ಕೆ ಮಾಡಿದರು. 10ನೇ ಕ್ರಮಾಂಕದಲ್ಲಿ ಮಾರ್ಷ್, ಬುಮ್ರಾ ಅವರ ಹೆಸರನ್ನು ಸೂಚಿಸಿದರು. 2024ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಇಂಗ್ಲೆಂಡ್ ದಂತಕಥೆ ಜೇಮ್ಸ್ ಆಂಡರ್ಸನ್ ಅವರನ್ನು ಆರಿಸಿ ತಮ್ಮ ತಂಡವನ್ನು ಪೂರ್ಣಗೊಳಿಸಿದರು.
IND vs AUS: ಕುಮಾರ ಸಂಗಕ್ಕಾರ ದಾಖಲೆ ಮುರಿಯುವ ಸನಿಹದಲ್ಲಿ ವಿರಾಟ್ ಕೊಹ್ಲಿ!
ಮಿಚೆಲ್ ಮಾರ್ಷ್ ಅವರ ಸಾರ್ವಕಾಲಿಕ ಆಸ್ಟ್ರೇಲಿಯಾ-ಭಾರತ-ಇಂಗ್ಲೆಂಡ್ ಸಂಯೋಜಿತ ಒಡಿಐ XI: ಡೇವಿಡ್ ವಾರ್ನರ್, ಆಡಮ್ ಗಿಲ್‌ಕ್ರಿಸ್ಟ್, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಜೋ ರೂಟ್, ಮೈಕೆಲ್ ಬೆವನ್, ಆಂಡ್ರ್ಯೂ ಸೈಮಂಡ್ಸ್, ಅನಿಲ್ ಕುಂಬ್ಳೆ, ಡ್ಯಾರೆನ್ ಗೌಫ್, ಜಸ್‌ಪ್ರೀತ್ ಬುಮ್ರಾ, ಜೇಮ್ಸ್ ಆಂಡರ್ಸನ್.