ಹರಾರೆ: ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದಿದ್ದ ಟಿ20ಐ ತ್ರಿಕೋನ ಸರಣಿಯ ನಾಲ್ಕನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ, ಆತಿಥೇಯ ಜಿಂಬಾಬ್ವೆಯನ್ನು 7 ವಿಕೆಟ್‌ಗಳಿಂದ ಸೋಲಿಸಿತು. ಇದು ಜಿಂಬಾಬ್ವೆ ತಂಡಕ್ಕೆ ಸರಣಿಯಲ್ಲಿ ಸತತ ಮೂರನೇ ಸೋಲು. ಈ ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾ ಈಗ ಫೈನಲ್ ತಲುಪಿದೆ. ಜುಲೈ 26 ರಂದು ನಡೆಯಲಿರುವ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ, ಎದುರಾಳಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ನಾಲ್ಕನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಜಿಂಬಾಬ್ವೆ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 144 ರನ್ ಗಳಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ ದಕ್ಷಿಣ ಆಫ್ರಿಕಾ 17.2 ಓವರ್‌ಗಳಲ್ಲಿ ಇನ್ನೂ 16 ಎಸೆತಗಳು ಬಾಕಿ ಇರುವಾಗ ಗುರಿಯನ್ನು ತಲುಪಿತು.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಜಿಂಬಾಬ್ವೆ ಉತ್ತಮ ಆರಂಭವನ್ನು ಪಡೆದಿತ್ತು. ಆದರೆ ಮೊದಲ ವಿಕೆಟ್ ಪತನದ ನಂತರ ತಂಡ ತನ್ನನ್ನು ತಾನು ನಿಭಾಯಿಸಲು ಸಾಧ್ಯವಾಗಲಿಲ್ಲ. ವೆಸ್ಲಿ ಮಾಧೆವೆರೆ (13), ಲುಂಗಿ ಎನ್‌ಗಿಡಿ ಎಸೆತದಲ್ಲಿ ಸತತ ಬೌಂಡರಿಗಳನ್ನು ಬಾರಿಸಿದರು, ಆದರೆ ಶೀಘ್ರದಲ್ಲೇ ಕಾರ್ಬಿನ್ ಬಾಷ್ ಅವರನ್ನು ಔಟ್ ಮಾಡಿದರು. ಕ್ಲೈವ್ ಮದಾಂಡೆ (8) ನಂಡ್ರೆ ಬರ್ಗರ್ ಎಸೆತದಲ್ಲಿ ಸಿಕ್ಸರ್ ಬಾರಿಸಿದರು, ಆದರೆ ಅವರು ಕೂಡ ಬಾಷ್‌ಗೆ ಬಲಿಯಾದರು. ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಈ ತ್ರಿಕೋನ ಸರಣಿಯ ಎಲ್ಲಾ ಮೂರು ಪಂದ್ಯಗಳಲ್ಲಿ ಎಂಟು ರನ್‌ಗಳಿಗೆ ಔಟಾಗಿದ್ದಾರೆ.
IND vs ENG: ವೀರೇಂದ್ರ ಸೆಹ್ವಾಗ್‌ರ ದೊಡ್ಡ ದಾಖಲೆ ಮುರಿಯುವ ಸನಿಹದಲ್ಲಿ ರಿಷಭ್ ಪಂತ್!
ಮಧ್ಯಮ ಕ್ರಮಾಂಕ ಜಿಂಬಾಬ್ವೆ ಪರ ಬಲ ಪ್ರದರ್ಶಿಸಿತು
ಮಧ್ಯಮ ಕ್ರಮಾಂಕದಲ್ಲಿ ನಾಯಕ ಸಿಕಂದರ್ ರಾಜಾ (9) ಜಿಂಬಾಬ್ವೆ ಪರ ಹೆಚ್ಚಿನ ಪರಿಣಾಮ ಬೀರಲು ಸಾಧ್ಯವಾಗಲಿಲ್ಲ ಏಕೆಂದರೆ ಅವರು ಸ್ಲಾಗ್ ಸ್ವೀಪ್ ಮಾಡಲು ಪ್ರಯತ್ನಿಸಿ ಡೀಪ್ ಬ್ಯಾಕ್‌ವರ್ಡ್ ಸ್ಕ್ವೇರ್‌ನಲ್ಲಿ ಬರ್ಗರ್‌ಗೆ ನೇರವಾಗಿ ಕ್ಯಾಚ್ ಕೊಟ್ಟಿದ್ದಾರೆ ಆದಾಗ್ಯೂ, ಇದರ ನಂತರ ಬ್ರಿಯಾನ್ ಬೆನೆಟ್ ಮತ್ತು ರಯಾನ್ ಬರ್ಲ್ (36) ಒಟ್ಟಾಗಿ ಆತಿಥೇಯರ ಪರವಾಗಿ 78 ರನ್‌ಗಳ ಪಾಲುದಾರಿಕೆಯನ್ನು ಆಡಿದರು. ಆ ಮೂಲಕ ಜಿಂಬಾಬ್ವೆ ತಂಡಕ್ಕೆ ಆಸರೆಯಾಗಿದ್ದರು. ಈ ವೇಳೆ ಅದ್ಭುತವಾಗಿ ಬ್ಯಾಟ್ ಮಾಡಿದ್ದ ಬ್ರಿಯಾನ್ ಬೆನೆಟ್ ಅರ್ಧಶತಕವನ್ನು ಬಾರಿಸಿದರು. ಅವರು ಆಡಿದ 43 ಎಸೆತಗಳಲ್ಲಿ ಮೂರು ಸಿಕ್ಸರ್ ಹಾಗೂ ಏಳು ಬೌಂಡರಿಗಳೊಂದಿಗೆ 61 ರನ್‌ಗಳನ್ನು ಕಲೆ ಹಾಕಿದ್ದರು. ಆ ಮೂಲಕ ಜಿಂಬಾಬ್ವೆ ಮೊತ್ತವನ್ನು 120ರ ಗಡಿ ದಾಟಿಸಲು ನೆರವು ನೀಡಿದ್ದರು.
ದಕ್ಷಿಣ ಆಫ್ರಿಕಾ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶನವನ್ನು ತೋರಿದ ಕಾರ್ಬಿನ್ ಬಾಷ್ ಎರಡು ವಿಕೆಟ್ ಪಡೆದರು. ಲುಂಗಿ ಎನ್‌ಗಿಡಿ, ನಂಡ್ರೆ ಬರ್ಗರ್ ಒಂದೊಂದು ವಿಕೆಟ್ ಕಿತ್ತರು.
🚨 MATCH RESULT 🚨
— Proteas Men (@ProteasMenCSA) July 20, 2025
A dominant all-round display from our Proteas Men 🇿🇦 💥
Clinical with the ball, composed with the bat. A comprehensive 7-wicket victory to confirm our spot in the Tri-Series Final! 💪🔥#WozaNawe pic.twitter.com/Y3XPl0etRw
ದಕ್ಷಿಣ ಆಫ್ರಿಕಾ ತಂಡಕ್ಕೆ 7 ವಿಕೆಟ್ ಜಯ
ಜಿಂಬಾಬ್ವೆ ನೀಡಿದ್ದ 145 ರನ್‌ಗಳ ಗುರಿಯನ್ನು ಹಿಂಬಾಲಿಸಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಪ್ರವಾಸಿ ತಂಡ 22 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡಿತ್ತು. ಪ್ರೆಟೋರಿಯಸ್ ಹಾಗೂ ರೀಝಾ ಹೆಂಡ್ರಿಕ್ಸ್ ಅವರು ಬಹುಬೇಗ ವಿಕೆಟ್ ಒಪ್ಪಿಸಿದರು. ಆದರೆ, ಮೂರನೇ ವಿಕೆಟ್‌ಗೆ ಜೊತೆಯಾದ ರಾಸಿ ವ್ಯಾನ್ ಡೆರ್ ಡುಸೆನ್ ಹಾಗೂ ರುಬಿನ್ ಹರ್ಮೆನ್ ಅವರು ಅದ್ಭುತ ಬ್ಯಾಟ್ ಮಾಡಿದ್ದಾರೆ. ಅವರು 106 ರನ್‌ಗಳ ಜೊತೆಯಾಟವನ್ನು ಆಡಿದರು. ಆ ಮೂಲಕ ತಂಡದ ಮೊತ್ತವನ್ನು 120ರ ಗಡಿ ದಾಟಿಸಲು ನೆರವು ನೀಡಿದ್ದರು.
ENG vs IND: ಟೀಂ ಇಂಡಿಯಾಗೆ ಗಾಯಾಳುಗಳ ಚಿಂತೆ; ಆಲ್‌ರೌಂಡರ್ ಸರಣಿಯಿಂದ ಔಟ್!
ರಾಸಿ ವ್ಯಾನ್ ಡೆರ್ ಡುಸೆನ್ ಅದ್ಭುತವಾಗಿ ಬ್ಯಾಟ್ ಮಾಡಿ 41 ಎಸೆತಗಳಲ್ಲಿ 52 ರನ್ ಗಳಿಸಿದರೆ, ರುಬಿನ್ ಹರ್ಮೆನ್ 63 ರನ್‌ಗಳ ಕೊಡುಗೆ ನೀಡಿದರು. ಆ ಮೂಲಕ ದಕ್ಷಿಣ ಆಫ್ರಿಕಾ ತಂಡ ಗೆಲುವಿಗೆ ನೆರವು ನೀಡಿದ್ದಾರೆ. ಅಂತಿಮವಾಗಿ ದಕ್ಷಿಣ ಆಫ್ರಿಕಾ ತಂಡ 17.2 ಓವರ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡು 145 ರನ್‌ಗಳನ್ನು ಕಲೆ ಹಾಕಿದೆ. ಆ ಮೂಲಕ ತ್ರಿಕೋನ ಸರಣಿಯಲ್ಲಿ ಫೈನಲ್‌ಗೆ ಪ್ರವೇಶ ಮಾಡಿದೆ. ಜುಲೈ 26 ರಂದು ನ್ಯೂಜಿಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ ತಂಡ ಫೈನಲ್‌ಗೆ ಪ್ರವೇಶ ಮಾಡಲಿದೆ.