ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಏಷ್ಯಾ ಕಪ್‌ಗೆ ಆಯ್ಕೆಯಾಗದ ಭಾರತದ ಪ್ಲೇಯಿಂಗ್‌ XI ಆರಿಸಿದ ಆಕಾಶ್‌ ಚೋಪ್ರಾ!

2025ರ ಏಷ್ಯಾ ಕಪ್‌ ಟೂರ್ನಿಗೆ ಆಯ್ಕೆಯಾಗದ ಭಾರತ ತಂಡದ ಪ್ಲೇಯಿಂಗ್‌ XIಅನ್ನು ಆರಿಸಿದ ಮಾಜಿ ಕ್ರಿಕೆಟಿಗ ಆಕಾಶ್‌ ಚೋಪ್ರಾ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಶ್ರೇಯಸ್‌ ಅಯ್ಯರ್‌ಗೆ ನಾಯಕತ್ವವನ್ನು ನೀಡಿದ್ದಾರೆ ಹಾಗೂ ಕನ್ನಡಿಗ ಕೆಎಲ್‌ ರಾಹುಲ್‌ಗೂ ಅವಕಾಶವನ್ನು ಕೊಟ್ಟಿದ್ದಾರೆ.

ಏಷ್ಯಾ ಕಪ್‌ಗೆ ಆಯ್ಕೆಯಾಗದ ಭಾರತ ತಂಡವನ್ನು ಆರಿಸಿದ ಆಕಾಶ್‌ ಚೋಪ್ರಾ.

ನವದೆಹಲಿ: ಮುಂಬರುವ 2025ರ ಏಷ್ಯಾ ಕಪ್‌ (Asia Cup 2025) ಟೂರ್ನಿಗೆ 15 ಸದಸ್ಯರ ಭಾರತ ತಂಡವನ್ನು ಅಜಿತ್‌ ಅಗರ್ಕರ್‌ ನಾಯಕತ್ವದ ಬಿಸಿಸಿಐ ಆಯ್ಕೆ ಸಮಿತಿಯು ಆಗಸ್ಟ್‌ 19 ರಂದು ಪ್ರಕಟಿಸಿತ್ತು. ದೀರ್ಘಾವಧಿ ಬಳಿಕ ಶುಭಮನ್‌ ಗಿಲ್‌ ಟಿ20ಐ ತಂಡಕ್ಕೆ ಮರಳಿದ್ದಾರೆ. ಎಂದಿನಂತೆ ಸೂರ್ಯಕುಮಾರ್‌ ಯಾದವ್‌ಗೆ ನಾಯಕತ್ವವನ್ನು ನೀಡಲಾಗಿದೆ. ಆದರೆ, ದೇಶಿ, ಐಪಿಎಲ್‌ ಸೇರಿದಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅದ್ಭುತ ಫಾರ್ಮ್‌ನಲ್ಲಿರುವ ಶ್ರೇಯಸ್‌ ಅಯ್ಯರ್‌ (Shreyas Iyer) ಅವರನ್ನು ಕೈ ಬಿಡುವ ಮೂಲಕ ಸೆಲೆಕ್ಟರ್ಸ್‌ ಅಚ್ಚರಿ ಮೂಡಿಸಿದ್ದಾರೆ. ಏಷ್ಯಾ ಕಪ್‌ ಟೂರ್ನಿ ಸೆಪ್ಟಂಬರ್‌ 9 ರಂದು ಆರಂಭವಾಗಿ 28 ರಂದು ಫೈನಲ್‌ ಮೂಲಕ ಅಂತ್ಯವಾಗಲಿದೆ. ಅಂದಹಾಗೆ ಏಷ್ಯಾ ಕಪ್‌ಗೆ ಆಯ್ಕೆಯಾಗದ ಆಟಗಾರರನ್ನು ಒಳಗೊಂಡ ಭಾರತದ ಪ್ಲೇಯಿಂಗ್‌ XI ಅನ್ನು ಮಾಜಿ ಕ್ರಿಕೆಟಿಗ ಆಕಾಶ್‌ ಚೋಪ್ರಾ (Aakash Chopra) ಆರಿಸಿದ್ದಾರೆ.

ಏಷ್ಯಾ ಕಪ್‌ಗೆ ಭಾರತ ತಂಡವನ್ನು ಆಯ್ಕೆ ಮಾಡಿದ ಕೆಲ ದಿನಗಳ ಬಳಿಕ ಆಕಾಶ್‌ ಚೋಪ್ರಾ, ಈ ಟೂರ್ನಿಗೆ ಆಯ್ಕೆಯಾಗದ ಭಾರತದ ಪ್ಲೇಯಿಂಗ್‌ XIಅನ್ನು ಆರಿಸಿದ್ದಾರೆ. ಇವರು ಶ್ರೇಯಸ್‌ ಅಯ್ಯರ್‌ಗೆ ನಾಯಕತ್ವವನ್ನು ನೀಡಿದ್ದಾರೆ. 2023 ರಿಂದ ಶ್ರೇಯಸ್‌ ಅಯ್ಯರ್‌ ಟಿ20ಐ ತಂಡದಿಂದ ದೂರ ಉಳಿದಿದ್ದಾರೆ. ಅಂದ ಹಾಗೆ ತಮ್ಮ ನೆಚ್ಚಿನ ತಂಡಕ್ಕೆ ಆರಂಭಿಕ ಬ್ಯಾಟ್ಸ್‌ಮನ್‌ಗಳಾಗಿ ಋತುರಾಜ್‌ ಗಾಯಕ್ವಾಡ್‌ ಹಾಗೂ ಯಶಸ್ವಿ ಜೈಸ್ವಾಲ್‌ ಅವರನ್ನು ಆಕಾಶ್‌ ಚೋಪ್ರ ಆರಿಸಿದ್ದಾರೆ.

Asia Cup 2025 ಟೂರ್ನಿಗೆ 16 ಸದಸ್ಯರ ಬಾಂಗ್ಲಾದೇಶ ತಂಡ ಪ್ರಕಟ!

"ಯಶಸ್ವಿ ಜೈಸ್ವಾಲ್‌ ಏಷ್ಯಾ ಕಪ್‌ ತಂಡಕ್ಕೆ ಆಯ್ಕೆಯಾಗದೆ ಇರುವುದು ಅನಿರೀಕ್ಷಿತ. ಅಭಿಷೇಕ್‌ ಶರ್ಮಾ ಉತ್ತಮ ಪ್ರದರ್ಶನವನ್ನು ತೋರುತ್ತಿದ್ದಾರೆ ಹಾಗೂ ಅವರು ಬೌಲಿಂಗ್‌ನಲ್ಲಿಯೂ ಆಯ್ಕೆಯನ್ನು ನೀಡಲಿದ್ದಾರೆ. ಮತ್ತೊಂದು ಕಡೆ ಶ್ರೇಯಸ್‌ ಅಯ್ಯರ್‌ ಕೂಡ ಏಷ್ಯಾ ಕಪ್‌ ತಂಡಕ್ಕೆ ಆಯ್ಕೆಯಾಗಿಲ್ಲ, ಇದು ಅವರ ತಪ್ಪಲ್ಲ. ಅವರು ತಮ್ಮ ಅವಕಾಶಕ್ಕಾಗಿ ಕಾಯಬೇಕಾಗುತ್ತದೆ," ಎಂದು ಚೀಫ್‌ ಸೆಲೆಕ್ಟರ್‌ ಅಜಿತ್‌ ಅಗರ್ಕರ್‌ ತಿಳಿಸಿದ್ದರು.

ಋತುರಾಜ್‌ ಗಾಯಕ್ವಾಡ್‌ ಭಾರತದ ಪರ 23 ಟಿ20ಐ ಪಂದ್ಯಗಳನ್ನು ಹಾಗೂ 6 ಒಡಿಐ ಪಂದ್ಯಗಳನ್ನು ಆಡಿದ್ದಾರೆ. ಪ್ರಸ್ತುತ ಭಾರತ ತಂಡದಲ್ಲಿ ಗಾಯಕ್ವಾಡ್‌ ಇಲ್ಲ. ಕೆಎಲ್‌ ರಾಹುಲ್‌ಗೆ ಮೂರನೇ ಕ್ರಮಾಂಕದಲ್ಲಿ ಸ್ಥಾನವನ್ನು ನೀಡಲಾಗಿದೆ. ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ಆಗಿ ರಿಷಭ್‌ ಪಂತ್‌ ಹಾಗೂ ಆಲ್‌ರೌಂಡರ್‌ ರೂಪದಲ್ಲಿ ನಿತೀಶ್‌ ಕುಮಾರ್‌ ರೆಡ್ಡಿಗೆ ಚಾನ್ಸ್‌ ಕೊಡಲಾಗಿದೆ. ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯ ವೇಳೆ ಈ ಇಬ್ಬರೂ ಗಾಯಕ್ಕೆ ತುತ್ತಾಗಿದ್ದರು.

Asia Cup 2025: ಏಷ್ಯಾಕಪ್‌ ಇತಿಹಾಸದಲ್ಲಿ ಅತ್ಯಧಿಕ ವಿಕೆಟ್‌ ಕಿತ್ತ ಬೌಲರ್‌ಗಳ ಪಟ್ಟಿ ಹೀಗಿದೆ

ಆಕಾಶ್‌ ಚೋಪ್ರಾ ತಂಡದಲ್ಲಿ ಸ್ಪಿನ್‌ ಆಲ್‌ರೌಂಡರ್‌ ಆಗಿ ಕೃಣಾಲ್‌ ಪಾಂಡ್ಯ ಹಾಗೂ ವಾಷಿಂಗ್ಟನ್‌ ಸುಂದರ್‌ ಸ್ಥಾನವನ್ನು ಪಡೆದಿದ್ದಾರೆ. ಪೂರ್ಣ ಪ್ರಮಾಣದ ಸ್ಪಿನ್ನರ್‌ ಆಗಿ ರವಿ ಬಿಷ್ಣೋಯ್‌ ಅವಕಾಶವನ್ನು ಪಡೆದುಕೊಂಡಿದ್ದಾರೆ. ಇನ್ನು ಮುಂಚೂಣಿ ವೇಗದ ಬೌಲರ್‌ಗಳಾಗಿ ಪ್ರಸಿಧ್‌ ಕೃಷ್ಣ ಮತ್ತು ಮೊಹಮ್ಮದ್‌ ಸಿರಾಜ್‌ ಆಯ್ಕೆಯಾಗಿದ್ದಾರೆ.

ಏಷ್ಯಾ ಕಪ್‌ಗೆ ಆಯ್ಕೆಯಾಗದ ಭಾರತದ ಪ್ಲೇಯಿಂಗ್‌ XI ಆರಿಸಿದ ಆಕಾಶ್‌ ಚೋಪ್ರಾ: ಶ್ರೇಯಸ್ ಅಯ್ಯರ್ (ನಾಯಕ), ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ವಾಡ್, ಕೆಎಲ್ ರಾಹುಲ್, ರಿಷಭ್ ಪಂತ್, ನಿತೀಶ್ ಕುಮಾರ್ ರೆಡ್ಡಿ, ಕೃಣಾಲ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಪ್ರಸಿಧ್‌ ಕೃಷ್ಣ, ಮೊಹಮ್ಮದ್ ಸಿರಾಜ್, ರವಿ ಬಿಷ್ಣೋಯ್