ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವೆಸ್ಟ್‌ ಇಂಡೀಸ್‌ ಟೆಸ್ಟ್‌ ಸರಣಿಗೂ ಮುನ್ನ ಬೇಡಿಕೆಯೊಂದನ್ನು ಮುಂದಿಟ್ಟ ಶುಭಮನ್‌ ಗಿಲ್‌!

ಭಾರತ ಹಾಗೂ ವೆಸ್ಟ್‌ ಇಂಡೀಸ್‌ ತಂಡಗಳ ನಡುವಣ ಎರಡು ಪಂದ್ಯಗಳ ಟೆಸ್ಟ್‌ ಸರಣಿ ಅಕ್ಟೋಬರ್‌ 2ರಂದು ಆರಂಭವಾಗಲಿದೆ. ಮೊದಲನೇ ಟೆಸ್ಟ್‌ ಪಂದ್ಯದ ನಿಮಿತ್ತ ಭಾರತ ತಂಡದ ನಾಯಕ ಶುಭಮನ್‌ ಗಿಲ್‌ ಅವರು ಬೇಡಿಕೆಯೊಂದನ್ನು ಮುಂದಿಟ್ಟಿದ್ದಾರೆ. ಅವರು ಪಿಚ್‌ ಅನ್ನು ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ನೆರವಾಗುವ ರೀತಿ ತಯಾರಿ ಮಾಡಬೇಕೆಂದು ಆಗ್ರಹಿಸಿದ್ದಾರೆ.

ಪಿಚ್‌ ಬಗ್ಗೆ ಬೇಡಿಕೆಯೊಂದನ್ನು ಮುಂದಿಟ್ಟ ಶುಭಮನ್‌ ಗಿಲ್‌.

ನವದೆಹಲಿ: ಕಳೆದ ಏಷ್ಯಾ ಕಪ್ (Asia Cup 2025) ಟೂರ್ನಿ ಮುಗಿದ ಬಳಿಕ ಭಾರತ ತಂಡ ಇದೀಗ ವೆಸ್ಟ್ ಇಂಡೀಸ್ ವಿರುದ್ಧ ಎರಡು ಪಂದ್ಯಗಳ (IND vs WI) ಟೆಸ್ಟ್ ಸರಣಿಯನ್ನು ಆಡಲು ಸಜ್ಜಾಗುತ್ತಿದೆ. ಈ ಸರಣಿಯಲ್ಲಿ ಶುಭಮನ್ ಗಿಲ್ (Shubman Gill) ಮತ್ತೊಮ್ಮೆ ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ಇಂಗ್ಲೆಂಡ್‌ನಲ್ಲಿ ಗಿಲ್ ನಾಯಕನಾಗಿ ಹಾಗೂ ಬ್ಯಾಟ್ಸ್‌ಮನ್ ಆಗಿ ಅತ್ಯುತ್ತಮ ಪ್ರದರ್ಶನವನ್ನು ತೋರಿದ್ದರು. ಇದೀಗ ಶುಭಮನ್ ಗಿಲ್‌, ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯನ್ನು ಗೆಲ್ಲುವತ್ತ ಗಮನ ಹರಿಸಲಿದ್ದಾರೆ. ಇದರ ನಡವೆ ವೆಸ್ಟ್ ಇಂಡೀಸ್ ಸರಣಿಗೂ ಮುನ್ನ ಭಾರತ ತಂಡದ ನಾಯಕ ಪಿಚ್‌ಗೆ ಸಂಬಂಧಿಸಿದಂತೆ ಬೇಡಿಕೆಯೊಂದನ್ನು ಮುಂದಿಟ್ಟಿದ್ದಾರೆ.

ಭಾರತದ ಟೆಸ್ಟ್ ನಾಯಕ ಶುಭಮನ್ ಗಿಲ್ ಬುಧವಾರ ತವರು ಟೆಸ್ಟ್‌ ಪಂದ್ಯಗಳಲ್ಲಿ ಟರ್ನಿಂಗ್ ಪಿಚ್‌ಗಳಿಗೆ ಆದ್ಯತೆ ನೀಡುವ ಬದಲು, ಬ್ಯಾಟ್ಸ್‌ಮನ್ ಮತ್ತು ಬೌಲರ್‌ಗಳಿಬ್ಬರಿಗೂ ಬೆಂಬಲ ನೀಡುವ ಪಿಚ್‌ಗಳಲ್ಲಿ ಆಡಲು ಬಯಸುತ್ತದೆ ಎಂದು ಹೇಳಿದರು. ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ತಂಡ, ಮೊದಲ ಪಂದ್ಯದಲ್ಲಿ ಮೂರನೇ ವೇಗದ ಬೌಲರ್ ಅನ್ನು ಆಯ್ಕೆ ಮಾಡಬಹುದು. ಏಕೆಂದರೆ ಪಿಚ್‌ ಹುಲ್ಲಿನಿಂದ ಕೂಡಿದೆ ಎಂದು ಗಿಲ್ ಹೇಳಿದರು.

IND-W vs WI-W: ನಾಳೆ ಭಾರತ-ವಿಂಡೀಸ್‌ ಮೊದಲ ಮಹಿಳಾ ಟಿ20

"ನಾನು ನಾಯಕನಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು ಚರ್ಚಿಸಿದ ವಿಷಯಗಳ ಬಗ್ಗೆ ನಾನು ಮಾತನಾಡಲಾರೆ," ಎಂದು ಹಳಿದ ಶುಭಮನ್‌ ಗಿಲ್, ಬೌಲರ್‌ಗಳು ಮತ್ತು ಬ್ಯಾಟ್ಸ್‌ಮನ್‌ಗಳಿಬ್ಬರಿಗೂ ಅನುಕೂಲಕರವಾದ ಪಿಚ್‌ಗಳಲ್ಲಿ ಆಡಲು ನಾವು ಬಯಸುತ್ತೇವೆ ಎಂದಿದ್ದಾರೆ. "ಭಾರತಕ್ಕೆ ಬರುವ ಯಾವುದೇ ತಂಡಕ್ಕೆ ಸವಾಲು ಸ್ಪಿನ್ ಮತ್ತು ರಿವರ್ಸ್ ಸ್ವಿಂಗ್. ಈ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಬೌಲರ್‌ಗಳು ಮತ್ತು ಬ್ಯಾಟ್ಸ್‌ಮನ್‌ಗಳಿಬ್ಬರಿಗೂ ಅನುಕೂಲಕರವಾದ ಪಿಚ್‌ಗಳಲ್ಲಿ ಆಡಲು ನಾವು ಬಯಸುತ್ತೇವೆ," ಎಂದು ತಿಳಿಸಿದ್ದಾರೆ.

ತಂಡದ ಸಂಯೋಜನೆ ಬಗ್ಗೆ ತಿಳಿಸಿದ ಗಿಲ್‌

"ನಾವು ನಾಳೆ (ಗುರುವಾರ) ಸಂಯೋಜನೆಯನ್ನು ತಿಳಿಯುತ್ತೇವೆ. ಹವಾಮಾನ ಮತ್ತು ಪರಿಸ್ಥಿತಿಗಳನ್ನು ಅವಲಂಬಿಸಿ, ನಾವು ಮೂರನೇ ವೇಗದ ಬೌಲರ್ ಅನ್ನು ಕಣಕ್ಕಿಳಿಸಬಹುದು, ಆದರೆ ಇದನ್ನು ನಾವು ನಾಳೆ ನಿರ್ಧಾರ ತೆಗೆದುಕೊಳ್ಳುತ್ತೇವೆ," ಎಂದು ಅವರು ಹೇಳಿದ್ದಾರೆ.

IND vs WI 1st Test: ನಾಳೆಯಿಂದ ಭಾರತ-ವಿಂಡೀಸ್‌ ಟೆಸ್ಟ್‌ ಸರಣಿ; ಗೆಲುವಿನ ವಿಶ್ವಾಸದಲ್ಲಿ ಗಿಲ್‌ ಬಳಗ

ಭಾನುವಾರ ಕೊನೆಗೊಂಡ ಏಷ್ಯಾ ಕಪ್‌ ಟೂರ್ನಿಯಲ್ಲಿ ಟಿ20 ಕ್ರಿಕೆಟ್ ಆಡಿದ ನಂತರ ಅವರು ಮತ್ತು ಇತರ ಕೆಲವು ಆಟಗಾರರು ಟಿ20ಐ ಸ್ವರೂಪಕ್ಕೆ ಹೊಂದಿಕೊಳ್ಳಲು ಸೀಮಿತ ಸಮಯವನ್ನು ಹೊಂದಿದ್ದರು ಎಂದು ಗಿಲ್ ಒಪ್ಪಿಕೊಂಡರು. "ಟೆಸ್ಟ್ ಪಂದ್ಯಕ್ಕೆ ತಯಾರಿ ನಡೆಸಲು ನಮಗೆ ಕೇವಲ ಎರಡು ದಿನಗಳು ಮಾತ್ರ ಇದ್ದವು. ನಾವು ಬೇಗನೆ ಬೇರೆ ಸ್ವರೂಪವನ್ನು ಆಡಬೇಕಾಗಿದೆ, ಆದರೆ ನಾವು ನೆಟ್ಸ್‌ನಲ್ಲಿ ಶ್ರಮಿಸಿದ್ದೇವೆ," ಎಂದು ಅವರು ತಿಳಿಸಿದ್ದಾರೆ.

ಶುಭಮನ್ ಗಿಲ್ ಮತ್ತು ವೇಗದ ಬೌಲರ್ ಜಸ್‌ಪ್ರೀತ್‌ ಬುಮ್ರಾ ದುಬೈನಿಂದ ಇಲ್ಲಿ ತಂಡವನ್ನು ಸೇರಿಕೊಂಡರು. ಬುಮ್ರಾ ಅವರ ವರ್ಕ್‌ಲೋಡ್‌ ಮ್ಯಾನೇಜ್‌ಮೆಂಟ್‌ ಪರಿಗಣಿಸಿ ಅವರನ್ನು ಮೈದಾನಕ್ಕೆ ಇಳಿಸಲಾಗುತ್ತದೆಯೇ ಎಂದು ಕೇಳಿದಾಗ ಗಿಲ್, "ನಾವು ಪಂದ್ಯದಿಂದ ಪಂದ್ಯಕ್ಕೆ ನಿರ್ಧಾರ ತೆಗೆದುಕೊಳ್ಳುತ್ತೇವೆ. ಅದು ಪಂದ್ಯ ಎಷ್ಟು ಸಮಯ ಮತ್ತು ಬೌಲರ್ ಎಷ್ಟು ಓವರ್‌ಗಳನ್ನು ಬೌಲ್ ಮಾಡಬೇಕು ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಯಾವುದೂ ಪೂರ್ವನಿರ್ಧರಿತವಲ್ಲ," ಎಂದು ಶುಭಮನ್‌ ಗಿಲ್‌ ಹೇಳಿದ್ದಾರೆ.