ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shubman Gill: ಭಾರತ ತಂಡದ ಮುಂದಿನ ಸೂಪರ್‌ ಸ್ಟಾರ್‌ ಆಟಗಾರನನ್ನು ಆರಿಸಿದ ರವಿ ಶಾಸ್ತ್ರಿ!

ವಿರಾಟ್‌ ಕೊಹ್ಲಿ ಅವರ ಕ್ರಿಕೆಟ್‌ ವೃತ್ತಿ ಜೀವನ ಬಹುತೇಕ ಮುಗಿದೆ. ಈ ಹಿನ್ನೆಲೆಯಲ್ಲಿ ಭಾರತ ತಂಡದ ಮುಂದಿನ ಸ್ಟಾರ್‌ ಆಟಗಾರ ಯಾರೆಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಅದರಂತೆ ಟೀಮ್‌ ಇಂಡಿಯಾ ಮಾಜಿ ಹೆಡ್‌ ಕೋಚ್‌ ರವಿ ಶಾಸ್ತ್ರಿ, ಭಾರತಕ್ಕೆ ಮುಂದಿನ ಸ್ಟಾರ್‌ ಯಾರೆಂದು ಭವಿಷ್ಯ ನುಡಿದಿದ್ದಾರೆ.

ಶುಭಮನ್‌ ಗಿಲ್‌ ಭಾರತದ ಮುಂದಿನ ಸ್ಟಾರ್‌ ಆಟಗಾರ ಎಂದ ರವಿ ಶಾಸ್ತ್ರಿ.

ನವದೆಹಲಿ: ಭಾರತ ಕ್ರಿಕೆಟ್‌ ತಂಡ ದಿಗ್ಗಜ ಆಟಗಾರರಾದ ವಿರಾಟ್‌ ಕೊಹ್ಲಿ(Virat Kohli) ಹಾಗೂ ರೋಹಿತ್‌ ಶರ್ಮಾ (Rohit sharma) ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿ ಜೀವನದ ಅಂತಿಮ ಹಂತದಲ್ಲಿದ್ದಾರೆ. ಈ ಇಬ್ಬರೂ ಈಗಾಗಲೇ ಟಿ20ಐ ಹಾಗೂ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಆ ಮೂಲಕ ಅವರು ಇನ್ನು ಮುಂದೆ ಕೇವಲ ಏಕದಿನ ಕ್ರಿಕೆಟ್‌ನಲ್ಲಿ ಮುಂದುವರಿಯಲು ಬಯಸಿದ್ದಾರೆ. ಇದರ ನಡುವೆ ಭಾರತೀಯ ಕ್ರಿಕೆಟ್‌ನ ಮುಂದಿನ ಭವಿಷ್ಯದ ಸ್ಟಾರ್‌ ಆಟಗಾರನ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಅದರಂತೆ ಟೀಮ್‌ ಇಂಡಿಯಾ ಮಾಜಿ ಹೆಡ್‌ ಕೋಚ್‌ ರವಿ ಶಾಸ್ತ್ರಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಭಾರತೀಯ ಕ್ರಿಕೆಟ್‌ಗೆ ಶುಭಮನ್‌ ಗಿಲ್‌ (Shubman Gill) ಭವ್ಯಷ್ಯದ ಸ್ಟಾರ್‌ ಆಟಗಾರ ಎಂದು ಶ್ಲಾಘಿಸಿದ್ದಾರೆ.

ಸ್ಕೈ ಸ್ಪೋರ್ಟ್ಸ್‌ ಜೊತೆ ಮಾತನಾಡಿದ ರವಿ ಶಾಸ್ತ್ರಿ, ಶುಭಮನ್‌ ಗಿಲ್‌ ಅವರಿಗೆ ವಯಸ್ಸು ಇನ್ನೂ ಚಿಕ್ಕದು. ಇದು ಅವರಿಗೆ ಲಾಭವಾಗಬಹುದು ಹಾಗೂ ಭಾರತ ತಂಡದ ಪರ ದೀರ್ಘಾವಧಿ ಆಡಬಹುದು ಎಂದು ಹೇಳಿದ್ದಾರೆ.

ಬೆನ್‌ ಸ್ಟೋಕ್ಸ್‌ ಹಿಂದಿಕ್ಕಿ ನಾಲ್ಕನೇ ಬಾರಿ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ ಗೆದ್ದ ಶುಭಮನ್‌ ಗಿಲ್‌!

"ಶುಭಮನ್‌ ಗಿಲ್‌ ಅವರು ಭಾರತ ತಂಡದ ಪರ ದೀರ್ಘಾವಧಿ ಕ್ರಿಕೆಟ್‌ ಆಡಲಿದ್ದಾರೆ. ಇದರಲ್ಲಿ ಯಾವುದೇ ಪ್ರಶೆಗಳಿಲ್ಲ. ಏಕೆಂದರೆ ಅವರು ಇಂಗ್ಲೆಂಡ್‌ ಟೆಸ್ಟ್‌ ಸರಣಿಯಲ್ಲಿ ಯಾವ ರೀತಿಯ ಪ್ರದರ್ಶನವನ್ನು ತೋರಿದ್ದರು ಎಂಬುದನ್ನು ನಾವು ನೋಡಿದ್ದೇವೆ. ಅವರಿಗೆ ಇನ್ನೂ25 ವರ್ಷ ವಯಸ್ಸು. ಇದು ಅವರಿಗೆ ಲಾಭವನ್ನು ತಂದುಕೊಡಲಿದೆ," ಎಂದು ರವಿ ಶಾಸ್ತ್ರಿ ತಿಳಿಸಿದ್ದಾರೆ.

"ಅವರು ಇದೀಗ ಸರಿಯಾದ ಹಾದಿಯಲ್ಲಿದ್ದಾರೆ. ಅವರು ತಂಡದಲ್ಲಿದ್ದಾರೆ. ಅವರು ಉತ್ತಮ ಪ್ರದರ್ಶನವನ್ನು ತೋರಿದ್ದಾರೆ. ಅವರು ರಾಜಮನೆತನದವನು. ಅವರನ್ನು ನೀವು ನೋಡಿದಾಗ, ಅವರು ರಾಜಮನೆತನದ ಹುಡಗನ ರೀತಿ ಕಾಣುತ್ತಾರೆ. ಈ ಕಾರಣದಿಂದಲೇ ಅವರು ದೀರ್ಘಾವಧಿ ಇನಿಂಗ್ಸ್‌ ಆಡಲಿದ್ದಾರೆ," ಎಂದು ಹೇಳಿದ್ದಾರೆ.

Duleep Trophy 2025: ಉತ್ತರ ವಲಯ ತಂಡಕ್ಕೆ ಶುಭಮನ್‌ ಗಿಲ್‌ ನಾಯಕ!

ಇಂಗ್ಲೆಂಡ್‌ ವಿರುದ್ಧ ಇತ್ತೀಚೆಗೆ ಮುಗಿದಿದ್ದ ಐದು ಪಂದ್ಯಗಳ ಆಂಡರ್ಸನ್‌-ತೆಂಡೂಲ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ ಶುಭಮನ್‌ ಗಿಲ್‌ ಅತಿ ಹೆಚ್ಚು ರನ್‌ಗಳನ್ನು ಕಲೆ ಹಾಕಿದ್ದರು. 754 ರನ್‌ಗಳ ಮೂಲಕ ಈ ಸರಣಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದರು. ಇದರ ಫಲವಾಗಿ ಅವರು ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ಅಲ್ಲದೆ ಜುಲೈ ತಿಂಗಳ ಐಸಿಸಿ ಆಟಗಾರ ಪ್ರಶಸ್ತಿಯನ್ನು ಕೂಡ ಗೆದ್ದಿದ್ದರು. ಅಂದ ಹಾಗೆ ಟೆಸ್ಟ್‌ ಸರಣಿಯಲ್ಲಿ ಭಾರತ ತಂಡ 2-2 ಅಂತರದಲ್ಲಿ ಡ್ರಾ ಸಾಧಿಸಿತ್ತು.