ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಭಾರತ vs ಇಂಗ್ಲೆಂಡ್‌ ಟೆಸ್ಟ್‌ ಸರಣಿಯಲ್ಲಿನ ಬೆಸ್ಟ್‌ ಬೌಲರ್‌ ಅನ್ನು ಆರಿಸಿದ ಮೈಕಲ್‌ ವಾನ್‌!

ಭಾರತ ಹಾಗೂ ಇಂಗ್ಲೆಂಡ್‌ ತಂಡಗಳ ನಡುವಣ ಐದು ಪಂದ್ಯಗಳ ಟೆಸ್ಟ್‌ ಸರಣಿ 2-2 ಅಂತರದಲ್ಲಿ ಡ್ರಾ ಆಯಿತು. ಈ ಸರಣಿಯಲ್ಲಿ ಭಾರತದ ವೇಗಿ ಮೊಹಮ್ಮದ್‌ ಸಿರಾಜ್‌ ಅತ್ಯುತ್ತಮ ಬೌಲರ್‌ ಎಂದು ಇಂಗ್ಲೆಂಡ್‌ ಮಾಜಿ ನಾಯಕ ಮೈಕಲ್‌ ವಾನ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮೊಹಮ್ಮದ್‌ ಸಿರಾಜ್‌ಗೆ ಮೈಕಲ್‌ ವಾನ್‌ ಮೆಚ್ಚುಗೆ.

ನವದೆಹಲಿ: ಭಾರತ ಹಾಗೂ ಇಂಗ್ಲೆಂಡ್‌ (IND vs ENG) ತಂಡಗಳ ನಡುವಣ ಐದು ಪಂದ್ಯಗಳ ಟೆಸ್ಟ್‌ ಸರಣಿಯು 2-2 ಅಂತರದಲ್ಲಿ ಡ್ರಾ ಆಯಿತು. ಈ ಸರಣಿ ಮುಗಿದ ಬಳಿಕ ಅತ್ಯುತ್ತಮ ಬ್ಯಾಟ್ಸ್‌ಮನ್‌ ಹಾಗೂ ಅತ್ಯುತ್ತಮ ಬೌಲರ್‌ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇದರ ನಡುವೆ ಇಂಗ್ಲೆಂಡ್‌ ಮಾಜಿ ನಾಯಕ ಮೈಕಲ್‌ ವಾನ್‌ (Michael Vaughan) ಅವರು ಕೂಡ ಇದೀಗ ಬೆಸ್ಟ್‌ ಬೌಲರ್‌ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಭಾರತ ತಂಡದ ಹಿರಿಯ ವೇಗಿ ಮೊಹಮ್ಮದ್‌ ಸಿರಾಜ್‌ (Mohammed Siraj) ಅವರು ಈ ಸರಣಿಯಲ್ಲಿನ ಅತ್ಯುತ್ತಮ ಬೌಲರ್‌ ಎಂದು ವಾನ್‌ ತಿಳಿಸಿದ್ದಾರೆ. ಈ ಸರಣಿಯಲ್ಲಿ ಸಿರಾಜ್‌ ಅವರು ಈ ಸರಣಿಯಲ್ಲಿ 23 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆ ಮೂಲಕ ಈ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ ಬೌಲರ್‌ ಎನಿಸಿಕೊಂಡಿದ್ದಾರೆ.

ಈ ಟೆಸ್ಟ್‌ ಸರಣಿಯಲ್ಲಿ ಮೊಹಮ್ಮದ್‌ ಸಿರಾಜ್‌ ಎಲ್ಲಾ ಐದು ಪಂದ್ಯಗಳನ್ನು ಆಡಿದ್ದರು ಹಾಗೂ ಎರಡು ಬಾರಿ ಐದು ವಿಕೆಟ್‌ಗಳನ್ನು ಕಬಳಿಸಿದ್ದರು. ಭಾರತದ ಪರ ಜಸ್‌ಪ್ರೀತ್‌ ಬುಮ್ರಾ ಅವರು ಕೇವಲ ಮೂರು ಟೆಸ್ಟ್‌ ಪಂದ್ಯಗಳನ್ನು ಆಡಿ 14 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಪ್ರಸಿಧ್‌ ಕೃಷ್ಣ ಹಾಗೂ ಆಕಾಶ್‌ ದೀಪ್‌ ಅವರು ಕ್ರಮವಾಗಿ 14 ಮತ್ತು 13 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

IND vs ENG: ಟೀಕೆಗಳಿಗೆ ಗುರಿಯಾಗಿರುವ ಜಸ್‌ಪ್ರೀತ್‌ ಬುಮ್ರಾಗೆ ಸಚಿನ್‌ ತೆಂಡೂಲ್ಕರ್‌ ವಿಶೇಷ ಸಂದೇಶ!

ಇಂಗ್ಲೆಂಡ್‌ ತಂಡದ ಪರ ಜಾಶ್‌ ಟಾಂಗ್‌ ಅತ್ಯಂತ ಯಶಸ್ವಿ ಬೌಲರ್‌ ಆಗಿದ್ದಾರೆ ಹಾಗೂ ಅವರು ಒಟ್ಟು 19 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇನ್ನು ಇಂಗ್ಲೆಂಡ್‌ ನಾಯಕ ಬೆನ್‌ ಸ್ಟೋಕ್ಸ್‌ ಅವರು 17 ವಿಕೆಟ್‌ಗಳನ್ನು ಕಿತ್ತಿದ್ದಾರೆ. ಗಸ್‌ ಅಟ್ಕಿನ್ಸನ್‌ ಅವರು 8 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 2021ರ ಬಳಿಕ ಟೆಸ್ಟ್‌ ಕ್ರಿಕೆಟ್‌ಗೆ ಮರಳಿದ್ದ ಜೋಫ್ರಾ ಆರ್ಚರ್‌ ಅವರು 9 ವಿಕೆಟ್‌ಗಳನ್ನು ಕಬಳಿಸಿದ್ದರು.

ಪಾಡ್‌ಕಾಸ್ಟ್‌ವೊಂದರಲ್ಲಿ ಮಾತನಾಡಿದ ಇಂಗ್ಲೆಂಡ್‌ ಮಾಜಿ ನಾಯಕ ಮೈಕಲ್‌ ವಾನ್‌, ಈ ಸರಣಿಯಲ್ಲಿ ಶುಭಮನ್‌ ಗಿಲ್‌ ಹಾಗೂ ಮೊಹಮ್ಮದ್‌ ಸಿರಾಜ್‌ ಅವರು ಅತ್ಯುತ್ತಮ ಪ್ರದರ್ಶನವನ್ನು ತೋರಿದ್ದಾರೆಂದು ಹೇಳಿದ್ದಾರೆ. ಗಿಲ್‌ ಈ ಸರಣಿಯಲ್ಲಿ ಆಡಿದ 10 ಇನಿಂಗ್ಸ್‌ಗಳಿಂದ 754 ರನ್‌ಗಳನ್ನು ಕಲೆ ಹಾಕಿದ್ದಾರೆ. ಆ ಮೂಲಕ ಈ ಸರಣಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ. ಭಾರತ ತಂಡ ಈ ಸರಣಿಯಲ್ಲಿ ಸಮಬಲ ಸಾಧಿಸುವ ಮೂಲಕ ಅತ್ಯುತ್ತಮವಾಗಿ ತಂಡ ಎನಿಸಿಕೊಂಡಿದೆ ಎಂದು ವಾನ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

IND vs ENG ಸಂಯೋಜನೆಯ ಪ್ಲೇಯಿಂಗ್‌ XI ಪ್ರಕಟಿಸಿದ ಆಕಾಶ ಚೋಪ್ರಾ!

ಓವಲ್‌ ಟೆಸ್ಟ್‌ ಪಂದ್ಯದ ಬಳಿಕ ಐದನೇ ದಿನದಲ್ಲಿ ಗಾಯದ ಹೊರತಾಗಿಯೂ ಕ್ರಿಸ್‌ ವೋಕ್ಸ್‌ ಕ್ರೀಸ್‌ಗೆ ಬಂದಿದ್ದರು. ಈ ಹಿನ್ನೆಲೆಯಲ್ಲಿ ಕ್ರಿಸ್‌ ವೋಕ್ಸ್‌ ಅವರನ್ನು ಕೂಡ ಇದೇ ವೇಳೆ ಮೈಕಲ್‌ ವಾನ್‌ ಗುಣಗಾನ ಮಾಡಿದ್ದಾರೆ. "ಇಂಗ್ಲೆಂಡ್‌ ತಂಡ ಟೆಸ್ಟ್‌ ಸರಣಿಯನ್ನು ಕೈ ಚೆಲ್ಲಿಕೊಂಡಿದೆಯಾ? ಅಥವಾ ಭಾರತ ತಂಡ ಡ್ರಾ ಸಾಧಿಸಲು ಅರ್ಹತೆ ಹೊಂದಿದೆಯಾ," ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ವಾನ್‌, "ಐದು ಪಂದ್ಯಗಳ ಟೆಸ್ಟ್‌ ಸರಣಿಯನ್ನು ಡ್ರಾ ಸಾಧಿಸಲು ಭಾರತ ತಂಡ ಅರ್ಹವಾಗಿದೆ. ಆದರೆ, ಇಂಗ್ಲೆಂಡ್‌ ತಂಡ ಕೊನೆಯ ದಿನ ಬೆಳಿಗ್ಗೆ ಪಂದ್ಯವನ್ನು ಬಿಟ್ಟುಕೊಟ್ಟಿದೆ,"ಎಂದು ಹೇಳಿದ್ದಾರೆ.