ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʻನನ್ನನ್ನು ಉಳಿಸಿಕೊಳ್ಳಲು ಅವರಿಗೆ ಇಷ್ಟವಿರಲಿಲ್ಲʼ: ಮುಂಬೈನಿಂದ ಆರ್‌ಸಿಬಿಗೆ ಬಂದಿದ್ದ ಘಟನೆ ನೆನೆದ ಉತ್ತಪ್ಪ!

Robin Uthappa on Joining RCB in IPL 2009: ಭಾರತ ಕ್ರಿಕೆಟ್‌ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ರಾಬಿನ್‌ ಉತ್ತಪ್ಪ ಅವರು 2009ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ನಿಮಿತ್ತ ಮುಂಬೈ ಇಂಡಿಯನ್ಸ್‌ ತಂಡದಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಮರಳಿದ್ದ ಘಟನೆಯನ್ನು ಸ್ಮರಿಸಿಕೊಂಡಿದ್ದಾರೆ.

2009ರ ಘಟನೆ ನೆನೆದ ರಾಬಿನ್‌ ಉತ್ತಪ್ಪ.

ನವದೆಹಲಿ: 2009ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2029) ಟೂರ್ನಿಯ ನಿಮಿತ್ತ ಮುಂಬೈ ಇಂಡಿಯನ್ಸ್‌ (Mumbai Indians) ತಂಡದಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಸೇರ್ಪಡೆಯಾಗಿದ್ದ ಘಟನೆಯನ್ನು ಭಾರತ ಕ್ರಿಕೆಟ್‌ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ರಾಬಿನ್‌ ಉತ್ತಪ್ಪ (Robin Uthappa) ಸ್ಮರಿಸಿಕೊಂಡಿದ್ದಾರೆ. 2008ರ ಉದ್ಘಾಟನಾ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ರಾಬಿನ್‌ ಉತ್ತಪ್ಪ ಮುಂಬೈ ಇಂಡಿಯನ್ಸ್‌ ಪರ ಆಡಿದ್ದರು. ಈ ಆವೃತ್ತಿಯಲ್ಲಿ ಅವರು ಆಡಿದ 14 ಇನಿಂಗ್ಸ್‌ಗಳಿಂದ 35.55ರ ಸರಾಸರಿ ಮತ್ತು 114.69ರ ಸ್ಟ್ರೈಕ್‌ ರೇಟ್‌ನಲ್ಲಿ 320 ರನ್‌ಗಳನ್ನು ಗಳಿಸಿದ್ದರು. 48 ರನ್‌ ಇವರ ಅಂದಿನ ಸೀಸನ್‌ ವೈಯಕ್ತಿಕ ಗರಿಷ್ಠ ಮೊತ್ತವಾಗಿತ್ತು.

ಇತ್ತೀಚೆಗೆ ಫಸ್ಟ್‌ ಅಂಪೈರ್‌ ಯೂಟ್ಯೂಬ್‌ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ರಾಬಿನ್‌ ಉತ್ತಪ್ಪ, 2008ರ ಐಪಿಎಲ್‌ ಟೂರ್ನಿಯ ಬಗ್ಗೆ ಬಹಿರಂಗಪಡಿಸಿದ್ದಾರೆ. ಈ ಸೀಸನ್‌ ಬಳಿಕ ನನ್ನನ್ನು ಹಾಗೂ ಮನೀಷ್‌ ಪಾಂಡೆ ಅವರನ್ನು ಆರ್‌ಸಿಬಿಗೆ ಕಳುಹಿಸಲು ಆಸಕ್ತಿಯನ್ನು ಹೊಂದಿದ್ದರು. ಮನೀಷ್‌ ಪಾಂಡೆ ಅವರನ್ನು ಆರ್‌ಸಿಬಿಗೆ ಕಳುಹಿಸಿದ ಜಹೀರ್‌ ಖಾನ್‌ ಅವರನ್ನು ಕರೆಯಿಸಿಕೊಳ್ಳಲು ನಿರ್ಧರಿಸಿದ್ದರು.

IPL 2025: ʻಪಂಜಾಬ್‌ ಕಿಂಗ್ಸ್‌ನಲ್ಲಿ ಸಿಕ್ಕಿದ್ದ ಬೆಂಬಲ ಕೆಕೆಆರ್‌ನಲ್ಲಿ ಸಿಕ್ಕಿರಲಿಲ್ಲʼ-ಶ್ರೇಯಸ್‌ ಅಯ್ಯರ್!

"ಅವರು ಜಹೀರ್ ಖಾನ್ ಅವರನ್ನು ಬೆಂಗಳೂರಿನಿಂದ ಮುಂಬೈಗೆ ಕರೆತರಲು ಬಯಸಿದ್ದರು ಮತ್ತು ನನ್ನನ್ನು ಮತ್ತು ಮನೀಶ್ ಪಾಂಡೆಯನ್ನು ಬೆಂಗಳೂರಿಗೆ ಕಳುಹಿಸಲು ಬಯಸಿದ್ದರು. ಅದು ಮಾಲೀಕರ ನಡುವಿನ ಒಪ್ಪಂದ ಎಂದು ನಾನು ಭಾವಿಸುತ್ತೇನೆ. ನನಗೆ ಗೊತ್ತಿಲ್ಲ. ಅದರ ಒಳಭಾಗ ನನಗೆ ತಿಳಿದಿಲ್ಲ. ನಾನು ಕ್ರಿಕೆಟ್ ಪ್ರೀತಿಗಾಗಿ ಮಾತ್ರ ಕ್ರಿಕೆಟ್ ಆಡಿದ್ದೇನೆ ಮತ್ತು ಈ ಮನಸ್ಥಿತಿಯಲ್ಲಿ ನಾನು ಅಂದು ಇದ್ದೆ," ಎಂದು ಹೇಳಿದ್ದಾರೆ.

ರಾಬಿನ್‌ ಉತ್ತಪ್ಪ ಆರ್‌ಸಿಬಿ ಪರ ಎರಡು ಋತುಗಳಲ್ಲಿ (2009 ಮತ್ತು 2010) ಆಡಿದ 31 ಪಂದ್ಯಗಳಿಂದ 23.87ರ ಸರಾಸರಿ ಹಾಗೂ 141.49ರ ಸ್ಟ್ರೈಕ್ ರೇಟ್‌ನೊಂದಿಗೆ 549 ರನ್ ಗಳಿಸಿದ್ದರು. ಇದರಲ್ಲಿ ನಾಲ್ಕು ಅರ್ಧಶತಕಗಳನ್ನು ಬಾರಿಸಿದ್ದಾರೆ.

Asia Cup 2025: ಬಹಿಷ್ಕಾರದ ಬೆದರಿಕೆಯಿಂದ ಹಿಂದೆ ಸರಿದ ಪಾಕ್‌; ಯುಎಇ ವಿರುದ್ಧ ಕಣಕ್ಕೆ

ಆರ್‌ಸಿಬಿಗೆ ಹೋಗಲು ನಿರಾಕರಿಸಿದ್ದೆ: ಉತ್ತಪ್ಪ

"ಪ್ರಾಮಾಣಿಕತೆ ಎಂಬುದು ಕ್ರಿಕೆಟ್‌ನಲ್ಲಿ ದೊಡ್ಡ ಸಂಗತಿ. ಹಾಗಾಗಿ ನಾನು ಮುಂಬೈ ಇಂಡಿಯನ್ಸ್‌ ಪರ ಆಡುವಾಗ, ನಾನು ಕೂಡ ಮುಂಬೈ ಆಟಗಾರ ಎಂಬ ಭಾವನೆ ನನ್ನಲ್ಲಿ ಇತ್ತು. ಹಾಗಾಗಿ ನಾನು ಮುಂಬೈ ತಂಡವನ್ನು ಬಿಟ್ಟು ಹೋಗಲು ನನಗೆ ಮನಸು ಇರಲಿಲ್ಲ. ಮುಂಬೈ ಪ್ರಶಸ್ತಿ ಗೆಲ್ಲಬೇಕೆಂದು ನಾನು ಬಯಸಿದ್ದೆ ಹಾಗೂ ಇದು ನನ್ನ ಮೈಂಡ್‌ಸೆಟ್‌ ಆಗಿತ್ತು. ಹಾಗಾಗಿ ಯಾವುದೇ ತಂಡಕ್ಕೆ ಸೇರ್ಪಡೆಯಾಗುವ ಆಯ್ಕೆಗಳು ನನಗೆ ಬಂದಾಗಲೂ ನಾನು ಅದನ್ನು ನಿರಾಕರಿಸುತ್ತಿದ್ದೆ. ಆಗ ನಾನು ಹೋಗಲು ಇಷ್ಟವಿಲ್ಲ ಎಂದು ಫ್ರಾಂಚೈಸಿಗೆ ಹೇಳುತ್ತಿದ್ದೆ," ಎಂದು ರಾಬಿನ್‌ ಉತ್ತಪ್ಪ ತಿಳಿಸಿದ್ದಾರೆ.

ರಾಬಿನ್ ಉತ್ತಪ್ಪ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ 205 ಪಂದ್ಯಗಳನ್ನು ಆಡಿದ್ದಾರೆ ಹಾಗೂ 27.51ರ ಸರಾಸರಿಯಲ್ಲಿ 4,952 ರನ್ ಗಳಿಸಿದ್ದಾರೆ ಮತ್ತು 27 ಅರ್ಧಶತಕಗಳನ್ನು ಒಳಗೊಂಡಂತೆ 130.35 ಸ್ಟ್ರೈಕ್ ರೇಟ್ ಹೊಂದಿದ್ದಾರೆ. 2014 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಅನ್ನು ಪ್ರತಿನಿಧಿಸಿ ಆರೆಂಜ್ ಕ್ಯಾಪ್ ಗೆದ್ದಿದ್ದರು. ಇದು ಅವರ ಐಪಿಎಲ್‌ ವೃತ್ತಿ ಜೀವನದ ಶ್ರೇಷ್ಠ ಆವೃತ್ತಿಯಾಗಿದೆ. ಕೆಕೆಆರ್ ಪ್ರಶಸ್ತಿ ವಿಜೇತ ಅಭಿಯಾನದಲ್ಲಿ ಅವರು 16 ಇನಿಂಗ್ಸ್‌ಗಳಲ್ಲಿ 44.00ರ ಸರಾಸರಿಯಲ್ಲಿ ಮತ್ತು 137.78 ಸ್ಟ್ರೈಕ್ ರೇಟ್‌ನಲ್ಲಿ 660 ರನ್ ಗಳಿಸಿದ್ದಾರೆ, ಇದರಲ್ಲಿ ಐದು ಅರ್ಧಶತಕಗಳಿವೆ.