ನವದೆಹಲಿ: ನಿವೃತ್ತಿಯ ವದಂತಿಗಳ ಹೊರತಾಗಿಯೂ ಭಾರತದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ(Virat Kohli) ಹಾಗೂ ರೋಹಿತ್ ಶರ್ಮಾ (Rohit Sharma) ಅವರು 2027ರ ಐಸಿಸಿ ಏಕದಿನ ವಿಶ್ವಕಪ್ (ODI World Cup 2027) ಟೂರ್ನಿಯವರೆಗೂ ಮುಂದುವರಿಯಬೇಕೆಂದು ನ್ಯೂಜಿಲೆಂಡ್ ಮಾಜಿ ಬ್ಯಾಟ್ಸ್‌ಮನ್ ರಾಸ್ ಟೇಲರ್ (Ross Taylor) ಆಗ್ರಹಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಬಳಿಕ ಈ ಇಬ್ಬರೂ ಆಟಗಾರರು ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಲಿದ್ದಾರೆಂದು ಹಲವು ಮಾಧ್ಯಮಗಳು ವರದಿ ಮಾಡಿದ್ದವು. ಈ ಇಬ್ಬರೂ ಆಟಗಾರರಿಗೆ ಚಿಕ್ಕ ಕುಟುಂಬವಿದ್ದು, ದೀರ್ಘಾವಧಿ ಕುಟುಂಬದಿಂದ ದೂರ ಉಳಿದರೆ, ಸಮಸ್ಯೆಯಾಗಬಹುದು.
ಇಂಡಿಯಾ ಟುಡೇ ಜೊತೆ ಮಾತನಾಡಿದ ರಾಸ್ ಟೇಲರ್, "ವಿರಾಟ್ ಮತ್ತು ರೋಹಿತ್ ಅವರನ್ನು ನೀವು ನೋಡುತ್ತೀರಿ, ಅವರು ಇನ್ನೂ ತುಂಬಾ ಫಿಟ್ ಆಗಿದ್ದಾರೆ, ಆದರೆ ಇನ್ನೂ ರನ್ ಗಳಿಸುತ್ತಿದ್ದಾರೆ, ಆದ್ದರಿಂದ ನಿಜವಾಗಿಯೂ ಅದು ಅವರಿಗೆ ಮತ್ತು ಅವರು ಏನು ಮಾಡಬೇಕೆಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಇದು ಅವರ ದೇಹದ ಮೇಲೆ ಸಾಕಷ್ಟು ಹೊರೆಯಾಗುತ್ತದೆ. ಅವರು ಸಾಧ್ಯವಾದಷ್ಟು ಕ್ರಿಕೆಟ್ ಆಡುತ್ತಾರೆ. ಅವರಿಬ್ಬರೂ ಪೋಷಕರು ಕೂಡ, ಅವರು ಮನೆ ಮತ್ತು ಮಕ್ಕಳಿಂದ ಹೆಚ್ಚು ಸಮಯ ಹೊರಗೆ ಕಳೆಯುತ್ತಿದ್ದಾರೆ. ಜಗತ್ತು ಅವರನ್ನು ಕ್ರಿಕೆಟ್ ಅಂಗಣದಲ್ಲಿ ನೋಡಲು ಬಯಸುತ್ತದೆ ಮತ್ತು ವಿಶ್ವ ಕ್ರಿಕೆಟ್ ದೃಷ್ಟಿಕೋನದಿಂದ ಮತ್ತು ಭಾರತೀಯ ಕ್ರಿಕೆಟ್ ದೃಷ್ಟಿಕೋನದಿಂದ 2027 ರಲ್ಲಿ ಅವರಿಬ್ಬರೂ ಅಲ್ಲಿ ಇರಬೇಕೆಂದು ಆಶಿಸುತ್ತೇವೆ," ಎಂದು ತಿಳಿಸಿದ್ದಾರೆ.
ರೋಹಿತ್ ಶರ್ಮಾರ ನಾಯಕತ್ವದ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡ ರಾಹುಲ್ ದ್ರಾವಿಡ್!
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮೊಟ್ಟ ಮೊದಲ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುವಾಗ ವಿರಾಟ್ ಕೊಹ್ಲಿಯನ್ನು ಭೇಟಿಯಾದ ಕ್ಷಣವನ್ನು ಇದೇ ವೇಳೆ ಕಿವೀಸ್ ಮಾಜಿ ಬ್ಯಾಟರ್ ಸ್ಮರಿಸಿಕೊಂಡಿದ್ದಾರೆ.
"ಅವರು (ಕೊಹ್ಲಿ) 18 ರಿಂದ 19 ವರ್ಷ ವಯಸ್ಸಿನಲ್ಲಿ ವಿರಾಟ್ ಕೊಹ್ಲಿ ಸ್ವಲ್ಪ ದಪ್ಪನಾಗಿದ್ದರು. ʻನೀವು ಈ ಹುಡುಗನನ್ನು ನೋಡಿ? ಅವರು ವಿಶ್ವ ದರ್ಜೆಯ ಆಟಗಾರನಾಗುತ್ತಾರೆʼ ಎಂದು ಕ್ಯಾಮೆರಾನ್ ವೈಟ್ ನನಗೆ ಹೇಳಿದ್ದರು. ಅವರು ನೋಡಲು ಓಕೆ ರೀತಿ ಇದ್ದರು. ತದ ನಂತರ ಅವರು ಅದ್ಭುತ ಆಟಗಾರನಾಗಿ ಬದಲಾದರು. ಹೌದು ಅವರು ಆರ್‌ಸಿಬಿ ಪ್ರಾಮಾಣಿಕವಾಗಿದ್ದಾರೆ ಹಾಗೂ ಭಾರತ ಹಾಗೂ ವಿಶ್ವ ಕ್ರಿಕೆಟ್‌ಗೆ ಅವರು ಅದ್ಭುತ ಕೊಡುಗೆಯನ್ನು ನೀಡಿದ್ದಾರೆ. ಅವನು ಹದಿಹರೆಯದಿಂದ ಬೆಳೆಯುವುದನ್ನು ನಾನು ನೋಡಿರುವುದರಿಂದ ನನಗೆ ಯಾವಾಗಲೂ ಒಂದು ಮೃದುತ್ವ ಇರುತ್ತದೆ ಎಂದು ನಾನು ಭಾವಿಸುತ್ತೇನೆ. ಆದ್ದರಿಂದ ಈ ವರ್ಷ ಆರ್‌ಸಿಬಿ ಗೆರೆ ದಾಟಿ ಅಂತಿಮವಾಗಿ ಐಪಿಎಲ್ ಗೆದ್ದಿರುವುದು ಒಳ್ಳೆಯದು," ಎಂದು ಕಿವೀಸ್ ದಿಗ್ಗಜ ತಿಳಿಸಿದ್ದಾರೆ.
ವಿರಾಟ್ ಕೊಹ್ಲಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿನ ಸಕ್ಸಸ್‌ಗೆ ಕಾರಣ ತಿಳಿಸಿದ ಶ್ರೀಶಾಂತ್!
ಉದ್ಘಾಟನಾ ಆವೃತ್ತಿಯ ಐಪಿಎಲ್ ಟೂರ್ನಿಯ ಆರಂಭಕ್ಕೂ ಮುನ್ನ ನಡೆದಿದ್ದ ಮೆಗಾ ಹರಾಜಿನಲ್ಲಿ ವಿರಾಟ್ ಕೊಹ್ಲಿಯನ್ನು ಅಂಡರ್-19 ಡ್ರಾಫ್ಟ್‌ನಲ್ಲಿ ಬೆಂಗಳೂರು ಫ್ರಾಂಚೈಸಿ ಖರೀದಿಸಿತ್ತು. ಈ ವೇಳೆ ಆರ್‌ಸಿಬಿ ತಂಡದಲ್ಲಿ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಹಾಗೂ ಜಾಕ್ ಕಾಲಿಸ್ ಇದ್ದರು. ಅಂದಿನಿಂದ ಇಲ್ಲಿಯವರೆಗೂ ವಿರಾಟ್ ಕೊಹ್ಲಿ ಆರ್‌ಸಿಬಿಗೆ ಆಡುವ ಮೂಲಕ ಪ್ರಾಮಾಣಿಕವಾಗಿ ಆಡಿದ್ದಾರೆ. 2025ರ ಐಪಿಎಲ್ ಟೂರ್ನಿಯ ಫೈನಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸುವ ಮೂಲಕ ಆರ್‌ಸಿಬಿ ಚೊಚ್ಚಲ ಕಪ್ ಗೆದ್ದಿತ್ತು.