ಜಮೈಕಾ: ಡೆಬ್ಯೂಟಂಟ್ ಮಿಚೆಲ್ ಒವೆಲ್ (Mitchell Owen) ಹಾಗೂ ಕ್ಯಾಮೆರಾನ್ ಗ್ರೀನ್ (Cameron Green) ಅವರ ಸ್ಪೋಟಕ ಬ್ಯಾಟಿಂಗ್ ಬಲದಿಂದ ಆಸ್ಟ್ರೇಲಿಯಾ ತಂಡ, ಮೊದಲನೇ ಟಿ20ಐ ಪಂದ್ಯದಲ್ಲಿ (AUS vs WI) ವೆಸ್ಟ್ ಇಂಡೀಸ್ ವಿರುದ್ಧ ಮೂರು ವಿಕೆಟ್‌ಗಳಿಂದ ಗೆಲುವು ಪಡೆದಿದೆ. ಆ ಮೂಲಕ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ ಮಿಚೆಲ್ ಮಾರ್ಷ್ ನಾಯಕತ್ವದ ಆಸ್ಟ್ರೇಲಿಯಾ ತಂಡ 1-0 ಮುನ್ನಡೆ ಪಡೆದಿದೆ. ತಮ್ಮ ಚೊಚ್ಚಲ ಅಂತಾರಾಷ್ಟ್ರೀಯ ಟಿ20ಐ ಪದ್ಯದಲ್ಲಿಯೇ ಸ್ಪೋಟಕಕ ಬ್ಯಾಟ್ ಮಾಡಿ ಅರ್ಧಶತಕ ಬಾರಿಸಿದ ಮಿಚೆಲ್ ಒವೆನ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇಲ್ಲಿನ ಕಿಂಗ್ಸ್‌ಸ್ಟನ್ ಸಬೀನಾ ಪಾರ್ಕ್‌ನಲ್ಲಿ ನಡೆದಿದ್ದ ಮೊದಲನೇ ಟಿ20ಐ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ವೆಸ್ಟ್ ಇಂಡೀಸ್ ತಂಡ, ಶೇಯ್ ಹೋಪ್ (55) ಹಾಗೂ ರಾಸ್ಟನ್ ಚೇಸ್ (60) ಅವರ ಅರ್ಧಶತಕಗಳ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 8 ವಿಕೆಟ್‌ಗಳ ನಷ್ಟಕ್ಕೆ 189 ರನ್‌ಗಳನ್ನು ಕಲೆ ಹಾಕಿತು. ಆಸ್ಟ್ರೇಲಿಯಾ ಪರ ನಾಲ್ಕು ಓವರ್‌ಗಳಿಗೆ 36 ರನ್ ಕೊಟ್ಟರೂ ಬೆನ್ ದ್ವಾರ್ಶುಯಿಸ್ 4 ವಿಕೆಟ್‌ಗಳನ್ನು ಕಬಳಿಸಿದರು.
IND vs ENG: ವೀರೇಂದ್ರ ಸೆಹ್ವಾಗ್‌ರ ದೊಡ್ಡ ದಾಖಲೆ ಮುರಿಯುವ ಸನಿಹದಲ್ಲಿ ರಿಷಭ್ ಪಂತ್!
ಬಳಿಕ ಗುರಿ ಹಿಂಬಾಲಿಸಿದ ಆಸ್ಟ್ರೇಲಿಯಾ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ, ಜೇಮ್ ಮೆಗರ್ಕ್ ಬೇಗ ವಿಕೆಟ್ ಒಪ್ಪಿಸಿದರು. ಆದರೆ, ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಮಿಚೆಲ್ ಒವೆನ್ ಹಾಗೂ ಕ್ಯಾಮೆರಾನ್ ಗ್ರೀನ್ ತಮ್ಮ ಸ್ಪೋಟಕ ಬ್ಯಾಟಿಂಗ್ ಬಲದಿಂದ 18.5 ಓವರ್‌ಗಳಿಗೆ ಆಸ್ಟ್ರೇಲಿಯಾ 7 ವಿಕೆಟ್‌ಗಳ ನಷ್ಟಕ್ಕೆ 190 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಮೂರು ವಿಕೆಟ್‌ಗಳಿಂದ ಗೆಲುವು ಪಡೆಯಿತು.
ಗುರಿ ಹಿಂಬಾಲಿಸಿದ ಆಸ್ಟ್ರೇಲಿಯಾ ಚೇಸಿಂಗ್ ಸುಲಭವಾಗಿರಲಿಲ್ಲ. ಅಗ್ರ ಕ್ರಮಾಂಕದ ಜೇಕ್ ಮೆಗರ್ಕ್, ಮಿಚೆಲ್ ಮಾರ್ಷ್ (24) ಹಾಗೂ ಜಾಶ್ ಇಂಗ್ಲಿಸ್(18) ಅವರು ವಿಫಲರಾದರು. ನಾಯಕ ಮಿಚೆಲ್ ಮಾರ್ಷ್ 24 ರನ್ ಗಳಿಸಿ ಉತ್ತಮ ಆರಂಭ ಪಡೆದರೂ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. ಸ್ಪೋಟಕ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ಕೇವಲ 11 ರನ್ ಗಳಿಸಿ ಔಟ್ ಆದರು. ಆದರೆ, ಐದನೇ ವಿಕೆಟ್‌ಗೆ ಜೊತೆಯಾದ ಮಿಚೆಲ್ ಒವೆನ್ ಹಾಗೂ ಕ್ಯಾಮೆರಾನ್ ಗ್ರೀನ್ ಸ್ಪೋಟಕ ಬ್ಯಾಟ್ ಮಾಡಿದರು. ಈ ಇಬ್ಬರೂ 80 ರನ್‌ಗಳ ಜೊತೆಯಾಟವನ್ನು ಆಡಿದರು. ಆ ಮೂಲಕ ತಂಡದ ಮೊತ್ತವನ್ನು 150ರ ಗಡಿಯನ್ನು ದಾಟಿಸಿದರು.
Just the third Australia Men's player with a fifty on T20I debut 👊
— ICC (@ICC) July 21, 2025
Mitchell Owen had a sensational start to his international career 🤩#WIvAUS 📝: https://t.co/Avoh9uDggn pic.twitter.com/Q1kDyWvp0u
ಸ್ಪೋಟಕ ಬ್ಯಾಟ್ ಮ್ಯಾಡಿದ ಕ್ಯಾಮೆರಾನ್ ಗ್ರೀನ್ ಕೇವಲ 26 ಎಸೆತಗಳಲ್ಲಿ ಐದು ಸಿಕ್ಸರ್ ಹಾಗೂ ಎರಡು ಬೌಂಡರಿಗಳೊಂದಿಗೆ ಅಜೇಯ 51 ರನ್ ಸಿಡಿಸಿದರು. ಇವರಿಗೆ ಮತ್ತೊಂದು ತುದಿಯಲ್ಲಿ ಸಾಥ್ ನೀಡಿದ್ದ ಮಿಚೆಲ್ ಒವೆನ್ ಕೇವಲ 27 ಎಸೆತಗಳಲ್ಲಿ50 ರನ್ ಸಿಡಿಸಿದರು. ಇನ್ನೇನು ತಂಡವನ್ನು ಗೆಲ್ಲಿಸುವ ಹೊತ್ತಿನಲ್ಲಿ ಇವರಿಬ್ಬರೂ ವಿಕೆಟ್ ಒಪ್ಪಿಸಿದರು.
Fifties from Mitch Owen and Cameron Green lead Australia to victory in the 1st T20I against West Indies in Jamaica ⚡️https://t.co/Avoh9uDggn pic.twitter.com/bxQnLJI4ES
— ICC (@ICC) July 21, 2025
ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ್ದ ವೆಸ್ಟ್ ಇಂಡೀಸ್ ತಂಡದ ಪರ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನವನ್ನು ತೋರಿದ್ದರು. ಬ್ರೆಂಡನ್ ಕಿಂಗ್ ಕೇವಲ 18 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು. ಆದರೆ, ಎರಡನೇ ವಿಕೆಟ್‌ಗೆ ಸ್ಪೋಟಕ ಬ್ಯಾಟ್ ಮಾಡಿದ ಶೇಯ್ ಹೋಪ್ ಹಾಗೂ ರಾಸ್ಟನ್ ಚೇಸ್ 91 ರನ್‌ಗಳ ಜೊತೆಯಾಟವನ್ನು ಆಡಿದ್ದರು. ಆ ಮೂಲಕ ವಿಂಡೀಸ್‌ಗೆ ಉತ್ತಮ ಆರಭ ತಂದುಕೊಟ್ಟಿದ್ದರು. ಶೇಯ್ ಹೋಪ್ 39 ಎಸೆತಗಳಲ್ಲಿ 55 ರನ್ ಸಿಡಿಸಿದರೆ, ರಾಸ್ಟನ್ ಚೇಸ್ 32 ಎಸೆತಗಳಲ್ಲಿ 60 ರನ್ ಗಳಿಸಿದರು. ಶಿಮ್ರಾನ್ ಹೆಟ್ಮಾಯೆರ್ ಕೇವಲ 19 ಎಸೆತಗಳಲ್ಲಿ 32 ರನ್ ಸಿಡಿಸಿದ್ದರು.