ನವದೆಹಲಿ: ನ್ಯೂಜಿಲೆಂಡ್ ಮತ್ತು ಜಿಂಬಾಬ್ವೆ ನಡುವೆ ನಡೆಯುತ್ತಿರುವ ಟೆಸ್ಟ್ ಸರಣಿಯ (ZIM vs NZ) ಮೊದಲನೇ ಪಂದ್ಯ ಇಲ್ಲಿನ ಬುಲುವಾಯೋದಲ್ಲಿ ನಡೆಯಿತು. ಈ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ 9 ವಿಕೆಟ್ ಭರ್ಜರಿ ಜಯ ಸಾಧಿಸಿತು. ಮೂರು ದಿನಗಳಿಗೆ ಸೀಮಿತವಾದ ಪಂದ್ಯದಲ್ಲಿ ಕಿವೀಸ್ ನಿರಂತರವಾಗಿ ಹಿಡಿತ ಸಾಧಿಸಿ ಗೆಲ್ಲುವ ಮೂಲಕ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲು ಮುಂದಾದ ಜಿಂಬಾಬ್ವೆ ತಂಡಕ್ಕೆ ಎದುರಾಳಿ ನ್ಯೂಜಿಲೆಂಡ್ ತಂಡದ ಮ್ಯಾಟ್ ಹೆನ್ರಿ (Mat Henry) ಮುಳುವಾಗಿ ಪರಿಣಮಿಸಿದರು. ತನ್ನ ಬಿಗಿ ಬೌಲಿಂಗ್‌ನಲ್ಲಿ ಕೇವಲ 39ರನ್ ನೀಡಿ 6 ಪ್ರಮುಖ ವಿಕೆಟ್ ಕಬಳಿಸಿ ಅತಿಥೇಯರ ಅಗ್ರ ಕ್ರಮಾಂಕವನ್ನು ಚಿದ್ರಗೊಳಿಸಿದರು. ಇದರಿಂದಾಗಿ ಜಿಂಬಾಬ್ವೆ (Zimbabwe) ಕೇವಲ 149ರನ್‌ಗಳಿಗೆ ಆಲೌಟ್ ಆಗಿ ತೀವ್ರ ಹಿನ್ನಡೆ ಅನುಭವಿಸಿತು.
ಇನ್ನು ಸಾಧರಣ ಗುರಿಯನ್ನು ಬೆನ್ನತ್ತಿದ ನ್ಯೂಜಿಲೆಂಡ್ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳು ಉತ್ತಮ ಆರಂಭ ಒದಗಿಸಿ ಭದ್ರ ಅಡಿಪಾಯ ಹಾಕಿದರು. ಬಳಿಕ ಡ್ಯಾರಿಲ್ ಮಿಚೆಲ್ (80 ರನ್) ಮತ್ತು ಡೆವೋನ್ ಕಾನ್ವೆ ಅವರ (88 ರನ್) ಅರ್ಧಶತಕಗಳ ನೆರವಿನಿಂದ ಪ್ರವಾಸಿ ನ್ಯೂಜಿಲೆಂಡ್ ತಂಡ 307ರನ್‌ಗಳನ್ನು ಕಲೆಹಾಕಿ ಪ್ರಥಮ ಇನಿಂಗ್ಸ್‌ನಲ್ಲಿ 158 ರನ್‌ಗಳ ಮುನ್ನಡೆ ಸಾಧಿಸಿತು.
IND vs ENG: ಜೋ ರೂಟ್-ಪ್ರಸಿಧ್ ಕೃಷ್ಣ ನಡುವೆ ಮಾತಿನ ಚಕಮಕಿ! ವಿಡಿಯೊ ವೈರಲ್
158 ರನ್‌ಗಳ ಹಿನ್ನಡೆಯಲ್ಲಿ ತನ್ನ ಎರಡನೇ ಇನಿಂಗ್ಸ್ ಆರಂಭಿಸಿದ ಜಿಂಬಾಬ್ವೆ ತಂಡ ಆರಂಭದಲ್ಲೇ ಮುಗ್ಗರಿಸಿ ಎರಡನೇ ದಿನದಾಟದ ಅಂತ್ಯಕ್ಕೆ 2ವಿಕೆಟ್ ಕಳೆದುಕೊಂಡು ಕೇವಲ 32ರನ್‌ಗಳನ್ನು ಮಾತ್ರ ಕಲೆಹಾಕಿತ್ತು. ನಂತರ 3ನೇ ದಿನದಾಟದಲ್ಲಿ ಗಾಯಗೊಂಡು ಪಂದ್ಯದಿಂದ ಹೊರಗುಳಿದ ಟಾಮ್ ಲೇಥಮ್ ಬದಲಿಗೆ ನಾಯಕನಾಗಿ ಕಣಕ್ಕಿಳಿದ ಮಿಚೆಲ್ ಸ್ಯಾಂಟ್ನರ್ 27 ರನ್ ನೀಡಿ 4 ಪ್ರಮುಖ ವಿಕೆಟ್ ಕಬಳಿಸಿ ಜಿಂಬಾಬ್ವೆಗೆ ಆಘಾತ ನೀಡಿದರು. ಇವರ ಜೊತೆಗೆ ಸಾಥ್ ನೀಡಿದ ಹೆನ್ರಿ ಮತ್ತು ವಿಲಿಯಂ ತಲಾ ಮೂರು ವಿಕೆಟ್ ಕಬಳಿಸುವ ಮೂಲಕ ಜಿಂಬಾಬ್ವೆಯನ್ನು 165ಕ್ಕೆ ಯಶಸ್ವಿಯಾಗಿ ಆಲ್‌ಔಟ್ ಮಾಡಿದರು.
ಬಳಿಕ ಎರಡನೇ ಇನಿಂಗ್ಸ್‌ನಲ್ಲಿ ಗೆಲುವಿಗೆ ಕೇವಲ 8ರನ್‌ಗಳ ಬೆನ್ನತ್ತಿದ ನ್ಯೂಜಿಲೆಂಡ್ ತಂಡ ಡೆವೋನ್ ಕಾನ್ವೆ ಶೂನ್ಯಕ್ಕೆ ಔಟಾದ ಹೊರತಾಗಿಯೂ, ವಿಲ್ ಯಂಗ್ ಮತ್ತು ಹೆನ್ರಿ ನಿಕೋಲಸ್ ತಲಾ ಒಂದು ಬೌಂಡರಿ ಬಾರಿಸಿ ಗೆಲುವಿನ ನಗೆ ಬೀರಿದರು. ಆ ಮೂಲಕ ಸರಣಿಯಲ್ಲಿ ನ್ಯೂಜಿಲೆಂಡ್ ತಂಡ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ.
IND vs ENG: ಬೆನ್ ಡಕೆಟ್ ಭುಜದ ಮೇಲೆ ಕೈ ಹಾಕಿ ಪೆವಿಲಿಯನ್‌ಗೆ ಕಳುಹಿಸಿಕೊಟ್ಟ ಆಕಾಶ್ ದೀಪ್!
ಪಂದ್ಯದ ನಂತರ ಸ್ಯಾಂಟ್ನರ್ ಹೇಳಿದ್ದೇನು?
ಪಂದ್ಯ ಮುಗಿದ ಬಳಿಕ ತಂಡದ ಪ್ರದರ್ಶನದ ಕುರಿತು ಮಾತಾನಾಡಿದ ಹಂಗಾಮಿ ನಾಯಕ ಮಿಚೆಲ್ ಸ್ಯಾಂಟ್ನರ್ "ಒಟ್ಟಾಗಿ ತಂಡ ಅದ್ಭುತ ಪ್ರದರ್ಶನ ನೀಡಿದೆ. ಬೌಲಿಂಗ್ ವಿಭಾಗದಲ್ಲಿ ನಮ್ಮ ನಿರೀಕ್ಷೆಗೂ ಮೀರಿದ ಪ್ರದರ್ಶನ ಮೂಡಿ ಬಂದಿದೆ. ಮುಖ್ಯವಾಗಿ ಬೌಲ್ ಮಾಡುವಾಗ ಲೈನ್ ಮತ್ತು ಲೆನ್ತ್ ಅನ್ನು ಗಮನದಲ್ಲಿಟ್ಟುಕೊಂಡು ಬೌಲ್ ಮಾಡಿದ್ದು ಎದುರಾಳಿ ತಂಡವನ್ನು ಸಾಧರಣ ಮೊತ್ತಕ್ಕೆ ಕಟ್ಟಿ ಹಾಕಲು ಸಾಧ್ಯವಾಯಿತು. ನಾವು ಇನ್ನು ಬ್ಯಾಟಿಂಗ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ತೋರಬಹುದಿತ್ತು. ಆದರೆ ನಮ್ಮ ನಿರೀಕ್ಷೆಗೆ ತಕ್ಕಂತೆ ಜೊತೆಯಾಟ ಬರಲಿಲ್ಲ ಇದನ್ನು ಸುಧಾರಿಸುವ ಬಗ್ಗೆ ಮಾತನಾಡಿದ್ದೇವೆ," ಎಂದು ಹೇಳಿದ್ದಾರೆ.