ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Nashra Sandhu: ಪಾಕ್‌ ಮಹಿಳಾ ತಂಡಕ್ಕೂ ವಕ್ಕರಿಸಿದ 6-0 ಕೈಸನ್ನೆ ಹುಚ್ಚಾಟದ ಸೋಂಕು

ಭಾರತ ವಿರುದ್ಧದ ಸೋಲಿನ ಬಳಿಕ ರೌಫ್‌ ಅವರ ಪತ್ನಿ ತಮ್ಮ ಇನ್‌ಸ್ಟಾ ಖಾತೆಯಲ್ಲಿ ರೌಫ್‌ 6-0 ಎಂದು ತೋರಿಸುತ್ತಿರುವ ಫೋಟೋವನ್ನು ಹಾಕಿ, ‘ಪಂದ್ಯ ಸೋತಿರಬಹುದು ಆದರೆ ಯುದ್ಧ ಗೆದ್ದಿದ್ದೇವೆ’ ಎಂದು ಪೋಸ್ಟ್‌ ಮಾಡಿದ್ದರು. ಇದು ಭಾರೀ ಟ್ರೋಲ್‌ ಆಗಿತ್ತು.

ಕರಾಚಿ: ಏಷ್ಯಾಕಪ್‌ ಸೂಪರ್‌-4 ಪಂದ್ಯದ ವೇಳೆ ಭಾರತದ 6 ವಿಮಾನಗಳನ್ನು ಹೊಡೆದುರುಳಿಸಿದ್ದೇವೆ ಎನ್ನುವ ರೀತಿಯಲ್ಲಿ 6-0 ಎಂದು ಕೈಸನ್ನೆ(Haris Rauf's 6-0 gesture) ಮೂಲಕ ಪಾಕ್‌ ವೇಗಿ ಹ್ಯಾರಿಸ್‌ ರೌಫ್‌(Haris Rauf) ಹುಚ್ಚಾಟ ಪ್ರದರ್ಶಿಸಿ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ಪಾಕ್‌ ಮಹಿಳಾ ತಂಡಕ್ಕೂ 6-0 ಕೈಸನ್ನೆ ರೋಗ ಅಂಟಿಕೊಂಡಿದೆ. ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ವಿರುದ್ಧ ಮಹಿಳಾ ಏಕದಿನ ಪಂದ್ಯದ ಗೆಲುವಿನ ಬಳಿಕ ಬೌಲರ್‌ ನಶ್ರಾ ಸಂಧು(Nashra Sandhu) ಅವರು ರೌಫ್‌ ಮಾದರಿಯಲ್ಲೇ ಸಂಭ್ರಮಿಸಿದ್ದಾರೆ. ಇದಕ್ಕೂ ಮುನ್ನ ಸಿದ್ರಾ ಅಮಿನ್ ಕೂಡ ಇದೇ 6-0 ಎಂದು ಕೈಸನ್ನೆ ಮಾಡಿ ಟೀಕೆಗೆ ಗುರಿಯಾಗಿದ್ದರು.

ರೌಫ್‌ ಬೌಂಡರಿ ಗೆರೆ ಬಳಿ ಫೀಲ್ಡ್‌ ಮಾಡುವಾಗ ಭಾರತೀಯ ಅಭಿಮಾನಿಗಳತ್ತ ಕೈ ತೋರಿಸಿ ಜೆಟ್‌ಗಳು ಕೆಳಕ್ಕೆ ಬೀಳುವಂತೆ ಕೈಸನ್ನೆ ಮಾಡಿ, ಭಾರತದ 6 ವಿಮಾನಗಳನ್ನು ಹೊಡೆದುರುಳಿಸಿದ್ದೇವೆ ಎನ್ನುವ ಪಾಕ್‌ ಸೇನೆಯ ಸುಳ್ಳು ಮಾಹಿತಿಯನ್ನೇ ಆಧಾರವಾಗಿಟ್ಟುಕೊಂಡು 6-0 ಎಂದು ಕೈಸನ್ನೆ ಮಾಡಿ ಉದ್ದಟತನ ತೋರಿದ್ದರು. ಇದನ್ನು ಅನೇಕ ಕ್ರಿಕೆಟ್‌ ಅಭಿಮಾನಿಳು ಇದು ಕ್ರೀಡಾಸ್ಪೂರ್ತಿಗೆ ಧಕ್ಕೆ ತಂದಿದೆ ಎಂಬ ಆರೋಪ ಮಾಡಿದ್ದರು.

ನಶ್ರಾ ಸಂಧು ಅವರು ದಕ್ಷಿಣ ಆಫ್ರಿಕಾ ವಿರುದ್ಧ 6 ವಿಕೆಟ್ ಪಡೆಯುವ ಜತೆಗೆ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅತಿ ವೇಗವಾಗಿ 100 ವಿಕೆಟ್ ಪಡೆದ ಪಾಕಿಸ್ತಾನದ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದ್ದರು. ಅವರ ಆಟವನ್ನು ಎಲ್ಲರೂ ಪ್ರಶಂಸಿಸಿದರು. ಆದರೆ, ಅವರು ಮಾತ್ರ ತಮ್ಮ ಆರು ಬೆರಳುಗಳನ್ನು ತೋರಿಸಿ ಸನ್ನೆ ಮಾಡಿದ್ದು ಇದೀಗ ಅವರ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿದೆ.

ಭಾರತ ವಿರುದ್ಧದ ಸೋಲಿನ ಬಳಿಕ ರೌಫ್‌ ಅವರ ಪತ್ನಿ ತಮ್ಮ ಇನ್‌ಸ್ಟಾ ಖಾತೆಯಲ್ಲಿ ರೌಫ್‌ 6-0 ಎಂದು ತೋರಿಸುತ್ತಿರುವ ಫೋಟೋವನ್ನು ಹಾಕಿ, ‘ಪಂದ್ಯ ಸೋತಿರಬಹುದು ಆದರೆ ಯುದ್ಧ ಗೆದ್ದಿದ್ದೇವೆ’ ಎಂದು ಪೋಸ್ಟ್‌ ಮಾಡಿದ್ದರು. ಇದು ಭಾರೀ ಟ್ರೋಲ್‌ ಆಗಿತ್ತು.