ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Drop-in pitches: ಭಾರತದ ಆಸೀಸ್‌ ಪ್ರವಾಸಕ್ಕೂ ಮುನ್ನ ಎಂಸಿಜಿಯಲ್ಲಿ ಡ್ರಾಪ್-ಇನ್ ಪಿಚ್‌ ಅಳವಡಿಕೆ; ಇಲ್ಲಿದೆ ವಿಡಿಯೊ

ಡ್ರಾಪ್ ಇನ್ ಪಿಚ್ ಹೇಗಿರುತ್ತೆದೆ ಅಂದರೆ ಮೈದಾನದ ಮಧ್ಯೆ 20 ಮೀಟರ್​​ ಉದ್ದ, ಮೂರು ಮೀಟರ್​​​​​ ಅಗಲ, 20 ಸೆಂಟಿ ಮೀಟರ್​​​​ ಆಳದಲ್ಲಿ, ಕ್ರಿಕೆಟ್​​​ ಪಿಚ್​​​ಗೆ ಗುಂಡಿ ತೆಗೆದಿರಲಾಗಿರುತ್ತದೆ. ಗುಂಡಿ ಸುತ್ತಲೂ ಸಿಮೆಂಟ್​ ಸ್ಲಾಬ್ ನಿರ್ಮಿಸಲಾಗುತ್ತದೆ. ಮೈದಾನದ ಹೊರಗೆ ಪಿಚ್​​​​​​ ಅಳತೆಗೆ ತಕ್ಕಂತೆ, ಸ್ಟೀಲ್​​​ ಕೇಸ್​​ ಸಿದ್ಧಪಡಿಸಲಾಗುತ್ತದೆ.

ಸಿಡ್ನಿ: ಮೆಲ್ಬೋರ್ನ್ ಕ್ರಿಕೆಟ್ ಮೈದಾನವು(Melbourne Cricket Ground) ದೀರ್ಘ ಬೇಸಿಗೆಯ ಕ್ರಿಕೆಟ್‌ಗೆ ಸಿದ್ಧವಾಗುತ್ತಿದೆ. ಆಸ್ಟ್ರೇಲಿಯನ್ ಫುಟ್‌ಬಾಲ್ ಲೀಗ್ ಸೀಸನ್ ಮುಗಿದ ಕಾರಣ ಇದೀಗ ಭಾರತ ವಿರುದ್ಧದ(India's tour of Australia) ವೈಟ್‌ ಬಾಲ್‌ ಸರಣಿಗಾಗಿ ಡ್ರಾಪ್-ಇನ್ ಪಿಚ್‌ಗಳನ್ನು(Drop-in pitches) ಮೈದಾನಕ್ಕೆ ಅಳವಡಿಸಲಾಗುತ್ತಿದೆ. ಭಾರತ ಸರಣಿ ಬಳಿಕ ಇಂಗ್ಲೆಂಡ್ ವಿರುದ್ಧ ಆಶಸ್ ಸರಣಿ ಆರಂಭವಾಗಲಿದೆ.

ಭಾರತ ಸರಣಿಯ ಹಲವು ಪಂದ್ಯಗಳ ಟಿಕೆಟ್‌ಗಳು ಈಗಾಗಲೇ ಸೋಲ್ಡ್‌ ಔಟ್‌ ಆಗಿದೆ ಎಂದು ಆಯೋಜಕರು ಈಗಾಗಲೇ ಘೋಷಿಸಿದ್ದಾರೆ. ಗುರುವಾರ, ಅಕ್ಟೋಬರ್ 9 ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನವು, ಡ್ರಾಪ್-ಇನ್ ಪಿಚ್‌ಗಳನ್ನು ಹೇಗೆ ಅಳವಡಿಸಲಾಗುತ್ತದೆ ಎಂಬುದರ ತೆರೆಮರೆಯ ಟೈಮ್‌ಲ್ಯಾಪ್ಸ್ ವಿಡಿಯೊವನ್ನು ಹಂಚಿಕೊಂಡಿದೆ.

ಡ್ರಾಪ್ ಇನ್ ಪಿಚ್ ಎಂದರೇನು?

ಡ್ರಾಪ್-ಇನ್ ಪಿಚ್‌ಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸ್ಥಳಾಂತರಿಸಲಾಗುತ್ತದೆ. ಅಚ್ಚರಿ ಅಂದರೆ ಅವುಗಳನ್ನು ಸ್ಥಳದಲ್ಲೇ ಸಿದ್ಧಪಡಿಸುವುದಿಲ್ಲ. ಮೈದಾನದ ಹೊರಗೆ ಕ್ಯುರೇಟ್ ಮಾಡಿದ ನಂತರ ಕ್ರೀಡಾಂಗಣಕ್ಕೆ ರವಾನಿಸಲಾಗುತ್ತದೆ. ಕ್ರಿಕೆಟ್​ ಪಂದ್ಯ ಇದ್ದಾಗ, ರಚಿಸಿದ ಪಿಚ್​​​​ ಅನ್ನು ಕ್ರೇನ್​ ಮೂಲಕ ಪಿಚ್​ ಮೇಲೆ ಡ್ರಾಪ್​ ಮಾಡಲಾಗುತ್ತದೆ. ಸಿಮೆಂಟ್​ ಸ್ಲಾಬ್​​ಗಳ ಮೇಲೆ ಪಿಚ್​ ಕೂರಿಸಿದ ಬಳಿಕ, ಸ್ಟೀಲ್​ ಕೇಸ್​​ ಹೊರ ತೆಗೆಯಲಾಗುತ್ತದೆ. ಈ ಪಿಚ್​​​​​​​​ನಲ್ಲಿ ಬಿರುಕು ಕಾಣಿಸುವುದಿಲ್ಲ.

ಡ್ರಾಪ್ ಇನ್ ಪಿಚ್ ಅಳವಡಿಕೆಯ ವಿಡಿಯೊ ಇಲ್ಲಿದೆ



ಡ್ರಾಪ್-ಇನ್ ಪಿಚ್‌ಗಳನ್ನು ಅಳವಡಿಸುವ ಮೈದಾನದಲ್ಲಿ ಕ್ರಿಕೆಟ್‌ ಇಲ್ಲದ ವೇಳೆ ಫುಟ್ಬಾಲ್‌, ಇನ್ನಿತ್ತರ ಕ್ರೀಡೆಗಳನ್ನು ಆಯೊಜಿಸಾಗುತ್ತದೆ. ಆಸ್ಟ್ರೇಲಿಯಾದಲ್ಲಿ ಹೆಚ್ಚಾಗಿ ಈ ಪಿಚ್‌ ಕಂಡುಬರುತ್ತವೆ. ಕ್ರಿಕೆಟ್ ಪಂದ್ಯ ಮುಗಿದ ನಂತರ ಈ ಪಿಚ್​ ಹೊರ ತೆಗೆದು ಫುಟ್ಬಾಲ್​, ರಗ್ನಿಗಳಿಗೆ ಮೈದಾನ ಸಿದ್ಧಪಡಿಸಲಾಗುತ್ತದೆ. ಅಡಿಲೇಡ್​ನಲ್ಲಿ ಈ ಪಿಚ್‌ಗಳನ್ನು ತಯಾರು ಮಾಡಲಾಗುತ್ತದೆ. ಕಳೆದ ವರ್ಷ ನ್ಯೂಯಾರ್ಕ್‌ನಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ ಪಂದ್ಯಗಳಿಗೆ ಆಸ್ಟ್ರೇಲಿಯಾದಿಂದ ಡ್ರಾಪ್-ಇನ್ ಪಿಚ್‌ಗಳನ್ನು ತರಲಾಗಿತ್ತು.

ಇದನ್ನೂ ಓದಿ Daren Sammy: ‘ನಾವು ಸ್ವ-ಹಣಕಾಸಿನೊಂದಿಗೆ ಹೋರಾಡುತ್ತಿದ್ದೇವೆ’; ವಿಂಡೀಸ್‌ ಕ್ರಿಕೆಟ್‌ನ ಸತ್ಯಾಸತ್ಯತೆ ಬಿಚ್ಚಿಟ್ಟ ಕೋಚ್‌ ಡೇರೆನ್ ಸ್ಯಾಮಿ

ಡ್ರಾಪ್ ಇನ್ ಪಿಚ್ ಹೇಗಿರುತ್ತೆದೆ?

ಈ ಡ್ರಾಪ್ ಇನ್ ಪಿಚ್ ಹೇಗಿರುತ್ತೆದೆ ಅಂದರೆ ಮೈದಾನದ ಮಧ್ಯೆ 20 ಮೀಟರ್​​ ಉದ್ದ, ಮೂರು ಮೀಟರ್​​​​​ ಅಗಲ, 20 ಸೆಂಟಿ ಮೀಟರ್​​​​ ಆಳದಲ್ಲಿ, ಕ್ರಿಕೆಟ್​​​ ಪಿಚ್​​​ಗೆ ಗುಂಡಿ ತೆಗೆದಿರಲಾಗಿರುತ್ತದೆ. ಗುಂಡಿ ಸುತ್ತಲೂ ಸಿಮೆಂಟ್​ ಸ್ಲಾಬ್ ನಿರ್ಮಿಸಲಾಗುತ್ತದೆ. ಮೈದಾನದ ಹೊರಗೆ ಪಿಚ್​​​​​​ ಅಳತೆಗೆ ತಕ್ಕಂತೆ, ಸ್ಟೀಲ್​​​ ಕೇಸ್​​ ಸಿದ್ಧಪಡಿಸಲಾಗುತ್ತದೆ. ಆ ಕೇಸ್​​ನ ಕೆಳ ಭಾಗದಲ್ಲಿ ಕಪ್ಪುಮಣ್ಣು ಅಥವಾ ಜೇಡಿಮಣ್ಣು ಹಾಕಿದರೆ, ಮೇಲಿನ ಭಾಗದಲ್ಲಿ ಹುಲ್ಲಿನ ಸಂಯೋಜನೆ ಮಾಡಲಾಗುತ್ತದೆ. ಅಥವಾ ಹುಲ್ಲಿನ ಮ್ಯಾಟನ್ನೂ ಹಾಕಲಾಗುತ್ತದೆ. ಈ ಫ್ಲಾಟ್​ ಪಿಚ್​​ಗಳು ಬೌಲರ್ ಸ್ನೇಹಿಯಾಗಿದ್ದು, ಬೌಲರ್​​ಗಳು ಪೇಸ್​​​ & ಬೌನ್ಸ್​​​​ ಹಾಕಲು ನೆರವಾಗುತ್ತದೆ. ಆಟಗಾರರಿಗೆ ಯಾವುದೇ ತೊಂದರೆ ಉಂಟಾಗದಂತೆ ತಯಾರಕರು ಎಚ್ಚರ ವಹಿಸುತ್ತಾರೆ. ಆದರೆ ಈ ಪಿಚ್​​ಗಳು ಹೆಚ್ಚು ಬೌನ್ಸ್​​ ಆಗುತ್ತವೆ.