ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Duleep Trophy: ದುಲೀಪ್ ಟ್ರೋಫಿ ಎಲ್ಲ ತಂಡಗಳ ಆಟಗಾರರ ಪಟ್ಟಿ ಹೀಗಿದೆ

ಕಳೆದ ವರ್ಷ(2024) ದುಲೀಪ್ ಟ್ರೋಫಿಯನ್ನು ಚಾಲೆಂಜರ್ ಟ್ರೋಫಿ ಮಾದರಿಯಲ್ಲಿ ನಡೆಸಲಾಗಿತ್ತು. ಆ ವರ್ಷದ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರನ್ನು ಆಯ್ಕೆ ಮಾಡಿ ಎ, ಬಿ, ಸಿ ಮತ್ತು ಡಿ ತಂಡಗಳನ್ನಾಗಿ ರಚಿಸಲಾಗಿತ್ತು. ಈ ವರ್ಷ ಮತ್ತೆ ಹಳೆಯ ಮಾದರಿಗೆ ಮರಳಿದ್ದು ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ, ಕೇಂದ್ರ ಮತ್ತು ಈಶಾನ್ಯ ವಲಯ ತಂಡಗಳು ಆಡಲಿವೆ.

ಮುಂಬಯಿ: ಆಗಸ್ಟ್ 28 ರಿಂದ ಆರಂಭವಾಗಲಿರುವ ದುಲೀಪ್ ಟ್ರೋಫಿಗೆ(Duleep Trophy) ಎಲ್ಲ ತಂಡಗಳು(Duleep Trophy Full squads) ಪ್ರಕಟಗೊಂಡಿದೆ. 6 ತಂಡಗಳ ಪೈಕಿ ಈಶಾನ್ಯ ವಲಯ ಮಾತ್ರ ತನ್ನ ತಂಡವನ್ನು ಪ್ರಕಟಿಸಲು ಬಾಕಿ ಇತ್ತು. ಇದೀಗ ಈ ತಂಡ ಕೂಡ ಪ್ರಕಟಗೊಂಡಿದೆ. ಕೆಲ ತಂಡದಲ್ಲಿ ಆಟಗಾರರು ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇವರ ಸ್ಥಾನಕ್ಕೂ ಬದಲಿ ಆಟಗಾರರ ಆಯ್ಕೆಯೂ ಆಗಿದೆ. ಎಲ್ಲ ತಂಡಗಳ ಆಟಗಾರ ಮಾಹಿತಿ ಇಲ್ಲಿದೆ.

ಪೂರ್ವ ವಲಯ

ಅಭಿಮನ್ಯು ಈಶ್ವರನ್ (ನಾಯಕ), ಸಂದೀಪ್ ಪಟ್ನಾಯಕ್, ವಿರಾಟ್ ಸಿಂಗ್, ಡೆನಿಶ್ ದಾಸ್, ಶ್ರೀದಂ ಪಾಲ್, ಶರಣದೀಪ್ ಸಿಂಗ್, ಕುಮಾರ್ ಕುಶಾಗ್ರಾ, ರಿಯಾನ್ ಪರಾಗ್, ಉತ್ಕರ್ಷ್ ಸಿಂಗ್, ಮನೀಷಿ, ಸೂರಜ್ ಸಿಂಧು ಜೈಸ್ವಾಲ್, ಮುಖೇಶ್ ಕುಮಾರ್, ಮೊಹಮ್ಮದ್ ಶಮಿ, ಆಶೀರ್ವಾದ್ ಸ್ವೈನ್.

ಮೀಸಲು ಆಟಗಾರರು: ಮುಖ್ತಾರ್ ಹುಸೇನ್, ವೈಭವ್ ಸೂರ್ಯವಂಶಿ, ಸ್ವಸ್ತಿಕ್ ಸಮಲ್, ಸುದೀಪ್ ಕುಮಾರ್ ಘರಾಮಿ, ರಾಹುಲ್ ಸಿಂಗ್.

ಪಶ್ಚಿಮ ವಲಯ

ಶಾರ್ದೂಲ್ ಠಾಕೂರ್ (ನಾಯಕ), ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್, ಶಮ್ಸ್‌ ಮುಲಾನಿ, ತನುಷ್ ಕೋಟ್ಯಾನ್, ತುಷಾರ್ ದೇಶಪಾಂಡೆ, ರ್ಯ ದೇಸಾಯಿ, ಜಯಮೀತ್ ಪಟೇಲ್, ಮನನ್ ಹಿಂಗರಜಿಯಾ, ಅರ್ಜನ್ ನಾಗವಾಸ್ವಾಲಾ, ಹಾರ್ವಿಕ್ ದೇಸಾಯಿ , ಧರ್ಮದರ್ಶಿನ್ ಜಡೇಜ (ವಿಕೆಟ್‌ಕೀಪರ್), ಋತುರಾಜ್ ಗಾಯಕವಾಡ , ಸೌರಭ್ ನವಲೆ.

ಮೀಸಲು ಆಟಗಾರರು: ಮಹೇಶ್ ಪಿತೀಯಾ, ಶಿವಾಲಿಕ್ ಶರ್ಮಾ, ಮುಕೇಶ್ ಚೌಧರಿ, ಸಿದ್ಧಾರ್ಥ್ ದೇಸಾಯಿ, ಚಿಂತನ್ ಗಜ, ಊರ್ವಿಲ್ ಪಟೇಲ್, ಮುಷೀರ್ ಖಾನ್.

ದಕ್ಷಿಣ ವಲಯ

ತಿಲಕ್ ವರ್ಮಾ (ನಾಯಕ), ಮೊಹಮ್ಮದ್ ಅಜರುದ್ದೀನ್ (ಉಪ ನಾಯಕ), ತನ್ಮಯ್ ಅಗರವಾಲ್, ದೇವದತ್ತ ಪಡಿಕ್ಕಲ್, ಮೋಹಿತ್ ಕಾಳೆ,ಸಲ್ಮಾನ್ ನಿಜಾರ್, ನಾರಾಯಣ್ ಜಗದೀಶನ್, ಟಿ.ವಿಜಯ್, ಆರ್. ಸಾಯಿ ಕಿಶೋರ್, ತನಯ್ ತ್ಯಾಗರಾಜನ್, ವೈಶಾಖ ವಿಜಯ್‌ಕುಮಾರ್, ಎಂ.ಡಿ. ನಿಧೀಶ್, ರಿಕಿ ಭುಯಿ, ಬಾಸಿಲ್ ಎನ್‌.ಪಿ, ಗುರ್ಜಪ್ನೀತ್ ಸಿಂಗ್, ಸ್ನೇಹಲ್ ಕೌತಂಕರ್.

ಮೀಸಲು ಆಟಗಾರರು: ಮೋಹಿತ್ ರೆಡ್ಕರ್, ಆರ್. ಸ್ಮರನ್, ಅಂಕಿತ್ ಶರ್ಮಾ, ಎಡೆನ್ ಆಪಲ್ ಟಾಮ್, ಆ್ಯಂಡ್ರೆ ಸಿದ್ದಾರ್ಥ್, ಶೇಖ್ ರಶೀದ್.

ಕೇಂದ್ರ ವಲಯ

ಧ್ರುವ ಜುರೇಲ್(ನಾಯಕ), ರಜತ್ ಪಾಟಿದಾರ್, ಆರ್ಯನ್ ಜುಯಲ್, ಡ್ಯಾನಿಶ್ ಮಾಲೆವಾರ್, ಸಂಜೀತ್ ದೇಸಾಯಿ, ಕುಲದೀಪ್ ಯಾದವ್, ಆದಿತ್ಯ ಠಾಕರೆ, ದೀಪಕ್ ಚಾಹರ್, ಸರನ್ಶ್ ಜೈನ್, ಆಯುಷ್ ಪಾಂಡೆ, ಶುಭಂ ಶರ್ಮಾ, ಯಶ್ ರಾಥೋಡ್, ಹರ್ಷ್ ದುಬೆ, ಮಾನವ್ ಸುತಾರ್, ಖಲೀಲ್ ಅಹ್ಮದ್.

ಮೀಸಲು ಆಟಗಾರರು: ಮಾಧವ್ ಕೌಶಿಕ್, ಯಶ್ ಠಾಕೂರ್, ಯುವರಾಜ್ ಚೌಧರಿ, ಮಹಿಪಾಲ್ ಲೊಮ್ರೋರ್, ಕುಲದೀಪ್ ಸೇನ್, ಉಪೇಂದ್ರ ಯಾದವ್.

ಈಶಾನ್ಯ ವಲಯ

ಜೊನಾಥನ್ ರೊಂಗ್‌ಸೆನ್ (ನಾಯಕ), ಆಕಾಶ್ ಕುಮಾರ್ ಚೌಧರಿ, ಟೆಚಿ ಡೋರಿಯಾ, ಯುಮ್ನಮ್ ಕರ್ನಾಜಿತ್, ಸೆಡೆಝಾಲೀ ರುಪೆರೊ, ಆಶಿಶ್ ಥಾಪಾ, ಹೆಮ್ ಬಹದ್ದೂರ್ ಚೆಟ್ರಿ, ಜೆಹು ಆಂಡರ್ಸನ್, ಅರ್ಪಿತ್ ಸುಭಾಷ್ ಭತೇವಾರಾ, ಫೆರೋಯಿಜಮ್ ಜೋತಿನ್ ಸಿಂಗ್, ಪಾಲ್ಝೋರ್ ತಮಾಂಗ್, ಅಂಕುರ್ ಮಲಿಕ್, ಲಮಾಬಮ್ ಅಜಯ್ ಸಿಂಗ್, ಬಿಶ್ವರ್ಜಿತ್ ಸಿಂಗ್ ಕೊಂತೌಜಮ್, ಆರ್ಯನ್ ಬೋರಾಹ್.