ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Karun Nair: ಟೆಸ್ಟ್‌ನಲ್ಲಿ ಕರುಣ್ ನಾಯರ್ ಹಾದಿ ಅಂತ್ಯವೇ? ವಿಂಡೀಸ್‌ ಸರಣಿಯಿಂದ ಕೈಬಿಟ್ಟಿದ್ದಕ್ಕೆ ಅಗರ್ಕರ್ ಸ್ಪಷ್ಟನೆ

ಜಸ್‌ಪ್ರೀತ್‌ ಬುಮ್ರಾ ಅವರು ವಿಂಡೀಸ್‌ ವಿರುದ್ಧದ ಸರಣಿಗೆ ಸಂಪೂರ್ಣವಾಗಿ ಲಭ್ಯವಿರುವುದಾಗಿ ಬಿಸಿಸಿಐಗೆ ತಿಳಿಸಿದ ಕಾರಣ ಅವರನ್ನೂ ಕೂಡ ಆಯ್ಕೆ ಮಾಡಲಾಗಿದೆ. ಅಕ್ಷರ್‌ ಪಟೇಲ್‌ಗೂ ಸ್ಥಾನ ನೀಡಲಾಗಿದೆ. ರಿಷಭ್‌ ಪಂತ್ ಬದಲು ಮೊದಲ ಆಯ್ಕೆಯ ಕೀಪರ್‌-ಬ್ಯಾಟರ್‌ ಆಗಿ ಧೃವ್‌ ಜುರೆಲ್‌ ಆಯ್ಕೆಯಾಗಿದ್ದಾರೆ.

ನವದೆಹಲಿ: ಗುರುವಾರ ಪ್ರಕಟಿಸಲಾದ ಮುಂಬರುವ ವೆಸ್ಟ್ ಇಂಡೀಸ್ ಎದುರಿನ(India squad) ಟೆಸ್ಟ್‌ ಸರಣಿಗೆ ಕರುಣ್ ನಾಯರ್(Karun Nair) ಅವರನ್ನು ತಂಡದಿಂದ ಹೊರಗಿಟ್ಟ ಹಿಂದಿನ ನಿರ್ಧಾರವನ್ನು ಬಿಸಿಸಿಐ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್(Ajit Agarkar) ಸ್ಪಷ್ಟಪಡಿಸಿದ್ದಾರೆ.

"ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾವು ಕರುಣ್ ಅವರಿಂದ ಸ್ವಲ್ಪ ಹೆಚ್ಚಿನದನ್ನು ನಿರೀಕ್ಷಿಸಿದ್ದೇವು. ಇಂಗ್ಲೆಂಡ್‌ನಲ್ಲಿ ಅವರು ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಿದ್ದರು. ಆದರೆ ನಿರೀಕ್ಷಿತ ಪ್ರದರ್ಶನ ಕಂಡುಬಂದಿಲ್ಲ. ಪಡಿಕ್ಕಲ್‌ ಅವರು ಭಾರತ ಎ ತಂಡದೊಂದಿಗೆ ಉತ್ತಮ ಫಾರ್ಮ್ ತೋರಿಸಿದ್ದಾರೆ. ಹೀಗಾಗಿ ಪಡಿಕ್ಕಲ್ ಸ್ವಲ್ಪ ಹೆಚ್ಚಿನದನ್ನು ನೀಡುತ್ತಾನೆ ಎಂದು ನಾವು ಭಾವಿಸುತ್ತೇವೆ. ಈ ಸರಣಿಯಲ್ಲಿ ಅವಕಾಶ ಸಿಕ್ಕಿಲ್ಲ ಎಂದ ಮಾತ್ರಕ್ಕೆ, ಕರುಣ್‌ ಟೆಸ್ಟ್‌ ಹಾದಿ ಅಂತ್ಯ ಎಂದು ಭಾವಿಸಬಾರದು. ಮುಂದೆ ಅವಕಾಶ ಲಭಿಸಬಹುದು" ಎಂದರು.ಇತ್ತೀಚೆಗೆ ನಡೆದ ಆಸ್ಟ್ರೇಲಿಯಾ 'ಎ' ವಿರುದ್ಧದ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಭಾರತ 'ಎ' ಪರ ಪಡಿಕ್ಕಲ್ 150 ರನ್ ಗಳಿಸಿ ಭಾರತದ ಟಾಪ್ ಸ್ಕೋರರ್ ಆಗಿದ್ದರು.

ಇದನ್ನೂ ಓದಿ Shreyas Iyer: ಇಂಡಿಯಾ ಎ ತಂಡ ಪ್ರಕಟ; ಅಯ್ಯರ್‌ಗೆ ನಾಯಕತ್ವದ ಹೊಣೆ

ಇಂಗ್ಲೆಂಡ್ ಪ್ರವಾಸದ ಐದು ಟೆಸ್ಟ್ ಪಂದ್ಯಗಳಲ್ಲಿ ನಾಲ್ಕರಲ್ಲಿ ಕರುಣ್ ನಾಯರ್‌ಗೆ ಅವಕಾಶ ಸಿಕ್ಕಿತು. ಆದರೆ, ಕರುಣ್‌ಗೆ ಸ್ಥಿರವಾದ ಸ್ಥಾನ ಸಿಗಲಿಲ್ಲ. ಲೀಡ್ಸ್ ಮತ್ತು ಓವಲ್‌ನಲ್ಲಿ ಐದನೇ ಕ್ರಮಾಂಕದಲ್ಲಿ, ಬರ್ಮಿಂಗ್‌ಹ್ಯಾಮ್ ಮತ್ತು ಲಾರ್ಡ್ಸ್‌ನಲ್ಲಿ ಮೂರನೇ ಕ್ರಮಾಂಕದಲ್ಲಿ ಆಡಿದರು. ನಾಲ್ಕು ಪಂದ್ಯಗಳಿಂದ ಒಂದು ಅರ್ಧಶತಕ ಸೇರಿದಂತೆ ಕರುಣ್ ಇಂಗ್ಲೆಂಡ್‌ನಲ್ಲಿ ಗಳಿಸಿದ್ದು ಕೇವಲ 205 ರನ್ ಮಾತ್ರ. ಕರುಣ್ ಅವರ ಸ್ಕೋರ್‌ಗಳು ಹೀಗಿದ್ದವು, 0, 20, 57, 17, 31, 26, 40, 14 ರನ್.

ಭಾರತ ತಂಡ

ಶುಭಮನ್ ಗಿಲ್ (ನಾಯಕ), ರವೀಂದ್ರ ಜಡೇಜಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ದೇವದತ್ ಪಡಿಕ್ಕಲ್, ಧ್ರುವ್ ಜುರೆಲ್, ವಾಷಿಂಗ್ಟನ್‌ ಸುಂದರ್, ಜಸ್ಪ್ರೀತ್ ಬುಮ್ರಾ, ಅಕ್ಷರ್‌ ಪಟೇಲ್, ನಿತೀಶ್ ಕುಮಾರ್ ರೆಡ್ಡಿ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಕುಲದೀಪ್ ಯಾದವ್, ಎನ್‌. ಜಗದೀಸನ್.