ನವದೆಹಲಿ: ಅಕ್ಟೋಬರ್ 30 ರಿಂದ ನವೆಂಬರ್ 27 ರವರೆಗೆ ಗೋವಾದಲ್ಲಿ ನಡೆಯಲಿರುವ ಈ ವರ್ಷದ ವಿಶ್ವಕಪ್‌ಗಾಗಿ(FIDE World Cup) ವಿಶ್ವ ಚೆಸ್ ಆಡಳಿತ ಮಂಡಳಿಯಾದ ಫಿಡೆ, ವೈಲ್ಡ್‌ಕಾರ್ಡ್ ಸ್ಫರ್ಧಿಗಳ ಪಟ್ಟಿಯನ್ನು ಪ್ರಕಟಿಸಿದೆ. ಭಾರತದ ಯುವ ಚೆಸ್ ತಾರೆ, ಮಹಿಳಾ ಚೆಸ್ ವಿಶ್ವಕಪ್ ವಿಜೇತೆ ದಿವ್ಯಾ ದೇಶ್‌ಮುಖ್, ವಿಶ್ವ ಚಾಂಪಿಯನ್ ಡಿ. ಗುಕೇಶ್ ನೇತೃತ್ವದ ನಾಕೌಟ್ ಪಂದ್ಯಾವಳಿಯಲ್ಲಿ ಇತರ 20 ಭಾರತೀಯರೊಂದಿಗೆ ಸೇರಿಕೊಳ್ಳಲಿದ್ದಾರೆ.
ದಿವ್ಯಾ, ಚೆಸ್ ವಿಶ್ವಕಪ್ ಮಾತ್ರವಲ್ಲದೆ 3 ಬಾರಿ ಒಲಿಂಪಿಯಾಡ್ ಚಿನ್ನ, ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ, ಜೂನಿಯರ್ ವಿಶ್ವ ಚಾಂಪಿಯನ್ ಪಟ್ಟ, ವಿಶ್ವ ಯೂತ್ ಚಾಂಪಿಯನ್‌ಶಿಪ್ ಕಿರೀಟ ಕೂಡಾ ಗೆದ್ದಿದ್ದಾರೆ.
ಫಿಡೆ ವಿಶ್ವಕಪ್ 2025ರ ವೈಲ್ಡ್‌ಕಾರ್ಡ್‌ಗಳ ಸಂಪೂರ್ಣ ಪಟ್ಟಿ
ದಿವ್ಯಾ ದೇಶಮುಖ್ (ಭಾರತ)
ಅಭಿಮನ್ಯು ಮಿಶ್ರಾ (ಅಮೆರಿಕ)
ಆಂಡಿ ವುಡ್ವರ್ಡ್ (ಅಮೆರಿಕ)
ವೊಲೊಡರ್ ಮುರ್ಜಿನ್(ರಷ್ಯಾ)
ಕಿರಿಲ್ ಅಲೆಕ್ಸೀಂಕೊ(ಆಸ್ಟ್ರಿಯಾ)
ಫೌಸ್ಟಿನೊ ಓರೊ (ಅರ್ಜೆಂಟೀನಾ)
ಇದನ್ನೂ ಓದಿ Divya Deshmukh: ಚೆಸ್ ವಿಶ್ವಕಪ್ ವಿಜೇತೆ ದಿವ್ಯಾ ದೇಶ್‌ಮುಖ್‌ಗೆ 3 ಕೋಟಿ ಬಹುಮಾನ
ಫಿಡೆ ವಿಶ್ವಕಪ್ ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುತ್ತದೆ ಮತ್ತು ಮೂರು ವಾರಗಳವರೆಗೆ ನಡೆಯುತ್ತದೆ. ಇದು ಮಿನಿ-ಪಂದ್ಯಗಳನ್ನು ಒಳಗೊಂಡಿರುವ ನಾಕ್-ಔಟ್ ಸ್ವರೂಪದಲ್ಲಿ 206 ವಿಶ್ವದ ಅಗ್ರ ಆಟಗಾರರು ಸ್ಪರ್ಧಿಸುವುದನ್ನು ಒಳಗೊಂಡಿದೆ.