ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಅಂಪೈರ್‌ಗಳನ್ನು ಗೌರವಿಸುವಂತೆ ಆಟಗಾರರಿಗೆ ಸಂದೇಶ ನೀಡಿದ ಕೋಚ್‌ ಗಂಭೀರ್‌

ಪಂದ್ಯದ ಬಳಿಕ ಮಾತನಾಡಿದ ಕೋಚ್‌ ಗಂಭೀರ್‌ ಪಾಕ್‌ ಆಟಗಾರರಿಗೆ ಹಸ್ತಲಾಘವ ನೀಡದಿದ್ದರೂ ಫೀಲ್ಡ್‌ ಅಂಪೈರ್‌ಗಳಿಗೆ ಗೌರವ ಸೂಚಿಸಿ ಅವರಿಗೆ ಹಸ್ತಲಾಘವ ಮಾಡುವಂತೆ ತಂಡದ ಆಟಗಾರರಿಗೆ ಸಂದೇಶ ನೀಡಿದ್ದಾರೆ. ಹೀಗಾಗಿ ಒಂದೊಮ್ಮೆ ಪಾಕ್‌ ವಿರುದ್ಧ ಭಾರತ ಫೈನಲ್‌ ಆಡುವ ಅವಕಾಶ ಸಿಕ್ಕರೆ ಆ ಪಂದ್ಯದಲ್ಲಿ ಭಾರತೀಯ ಆಟಗಾರರು ಅಂಪೈರ್‌ಗಳ ಕೈಕುಲುಕಲಿದ್ದಾರೆ.

ದುಬೈ: ಭಾನುವಾರ ನಡೆದಿದ್ದ ಏಷ್ಯಾಕಪ್ 2025(Asia Cup 2025) ರ ಸೂಪರ್ 4 ಪಂದ್ಯದಲ್ಲಿ ಪಾಕಿಸ್ತಾನ(Pakistan vs India) ವಿರುದ್ಧ ಭಾರತ ಭರ್ಜರಿ 6 ಗೆಲುವು ಸಾಧಿಸಿದ ನಂತರ, ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್(Gautam Gambhir) ತಮ್ಮ ಆಟಗಾರರನ್ನು ಪಂದ್ಯದ ಅಧಿಕಾರಿಗಳೊಂದಿಗೆ ಕೈಕುಲುಕುವಂತೆ ಕೇಳಿಕೊಂಡರು.

ಭಾರತ ತಂಡ ಪಾಕ್‌ ವಿರುದ್ಧದ ಗುಂಪು ಹಂತದ ಪಂದ್ಯದಲ್ಲಿ ಪಾಕಿಸ್ತಾನ ಆಟಗಾರರಿಗೆ ಹಸ್ತಲಾಘವ ನೀಡಿರಲಿಲ್ಲ. ಟಾಸ್ ಹಾಗೂ ಪಂದ್ಯದ ಬಳಿಕ ಪಾಕ್ ಆಟಗಾರರನ್ನು ಭಾರತೀಯರು ಕಡೆಗಣಿಸಿದ್ದರು. ಇದು ಭಾನುವಾರದ ಪಂದ್ಯದಲ್ಲೂ ಮುಂದುವರಿಯಿತು. ಟಾಸ್ ವೇಳೆ ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಅವರು ಪಾಕಿಸ್ತಾನದ ನಾಯಕ ಸಲ್ಮಾನ್ ಆಘಾ ಕೈ ಕುಲುಕಲಿಲ್ಲ. ಅವರನ್ನು ಕಣ್ಣೆತ್ತಿಯೂ ನೋಡದೆ ತಮ್ಮ ಪಾಡಿಗೆ ಇದ್ದರು. ಪಂದ್ಯದ ಬಳಿಕವೂ ಟೀಮ್‌ ಇಂಡಿಯಾ ಆಟಗಾರರು ಯಾವುದೇ ಹಸ್ತಲಾಘವ ಮಾಡದೆ ಡ್ರೆಸ್ಸಿಂಗ್‌ ರೂಮ್‌ಗೆ ಮರಳಿದ್ದರು.

ಆದರೆ ಪಂದ್ಯದ ಬಳಿಕ ಮಾತನಾಡಿದ ಕೋಚ್‌ ಗಂಭೀರ್‌ ಪಾಕ್‌ ಆಟಗಾರರಿಗೆ ಹಸ್ತಲಾಘವ ನೀಡದಿದ್ದರೂ ಫೀಲ್ಡ್‌ ಅಂಪೈರ್‌ಗಳಿಗೆ ಗೌರವ ಸೂಚಿಸಿ ಅವರಿಗೆ ಹಸ್ತಲಾಘವ ಮಾಡುವಂತೆ ತಂಡದ ಆಟಗಾರರಿಗೆ ಸಂದೇಶ ನೀಡಿದ್ದಾರೆ. ಹೀಗಾಗಿ ಒಂದೊಮ್ಮೆ ಪಾಕ್‌ ವಿರುದ್ಧ ಭಾರತ ಫೈನಲ್‌ ಆಡುವ ಅವಕಾಶ ಸಿಕ್ಕರೆ ಆ ಪಂದ್ಯದಲ್ಲಿ ಭಾರತೀಯ ಆಟಗಾರರು ಅಂಪೈರ್‌ಗಳ ಕೈಕುಲುಕಲಿದ್ದಾರೆ.

ಇದನ್ನೂ ಓದಿ Asia Cup 2025: ಕೆಣಕಿದ ರೌಫ್‌ಗೆ ಚಳಿ ಬಿಡಿಸಿದ ಅಭಿಷೇಕ್‌, ಗಿಲ್‌; ವಿಡಿಯೊ ವೈರಲ್‌

ಪಾಕಿಸ್ತಾನ ಬ್ಯಾಟರ್ ಸಾಹಿಬ್‌ಝಾದ ಫರ್ಹಾನ್ ಅರ್ಧಶತಕ ದಾಖಲಿಸಿದ ಬಳಿಕ ತಮ್ಮ ಬ್ಯಾಟ್ ಮೂಲಕ ಎಕೆ 47 ಗನ್ ಶಾಟ್ ರೀತಿ ಸಂಭ್ರಮಿಸಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.