ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಏಷ್ಯಾಕಪ್‌: ನಾಳೆ ಭಾರತ ತಂಡ ಪ್ರಕಟ; ಗಿಲ್‌, ಸಿರಾಜ್‌ಗೆ ಕೊಕ್‌!

ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್ ಮತ್ತು ಉಪನಾಯಕ ಅಕ್ಷರ್ ಪಟೇಲ್ ಅವರನ್ನು ಸ್ಪಿನ್ನರ್‌ಗಳಾಗಿ ಆಯ್ಕೆ ಮಾಡಲಾಗಿದ್ದು, ಫೆಬ್ರವರಿಯಲ್ಲಿ ಕೊನೆಯ ಟಿ20 ತಂಡದಲ್ಲಿದ್ದ ವಾಷಿಂಗ್ಟನ್ ಸುಂದರ್ ಅವರಿಗೆ ಸ್ಥಾನ ನೀಡುವ ಸಾಧ್ಯತೆ ಇದೆ. ಆದರೆ ಖಚಿತವಿಲ್ಲ.

ನವದೆಹಲಿ: ಮುಂಬರುವ ಏಷ್ಯಾಕಪ್‌ ಟಿ20(Asia Cup 2025) ಟೂರ್ನಿಗೆ ನಾಳೆ(ಮಂಗಳವಾರ) ಭಾರತ ತಂಡ(India's Squad For Asia Cup 2025) ಪ್ರಕಟಗೊಳ್ಳುವ ಸಾಧ್ಯತೆ ಇದೆ. ಇದಕ್ಕೂ ಮುನ್ನ ಮಹತ್ವದ ಅಪ್‌ಡೇಟ್‌ ಒಂದು ಹೊರಬಿದ್ದಿದ್ದು ಶುಭಮನ್‌ ಗಿಲ್‌(Shubman Gill) ಮತ್ತು ಮೊಹಮ್ಮದ್‌ ಸಿರಾಜ್‌(Mohammed Siraj) ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಆಯ್ಕೆದಾರರು ಪ್ರಸ್ತುತ ಟಿ20 ತಂಡದ ಜೋಡಿಯಾದ ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್‌ ಅವರನ್ನೇ ಮುಂದುವರಿಸುವ ನಿರೀಕ್ಷೆಯಿದೆ. ಇಂಗ್ಲೆಂಡ್‌ ಪ್ರವಾಸದಲ್ಲಿ ಗಿಲ್ 750 ಕ್ಕೂ ಹೆಚ್ಚು ರನ್ ಗಳಿಸಿದ್ದರು. ಏಷ್ಯಾ ಕಪ್‌ನಲ್ಲಿಯೂ ಆಡಿದರೆ ಅವರಿಗೆ ವೆಸ್ಟ್‌ ಇಂಡೀಸ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಬಿಡುವಿಲ್ಲದೆ ಆಡಿದಂತಾಗುತ್ತದೆ. ಇದೇ ಕಾರಣದಿಂದ ಅವರಿಗೆ ವಿಶ್ರಾಂತಿ ನೀಡುವ ಸಲುವಾಗಿ ಅವರನ್ನು ಆಯ್ಕೆ ಮಾಡದಿರಲು ಬಿಸಿಸಿಐ ನಿರ್ಧರಿಸಿದೆ ಎನ್ನಲಾಗಿದೆ.

ಇನ್ನೊಂದೆಡೆ ಆಂಡರ್ಸನ್-ತೆಂಡೂಲ್ಕರ್ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಮತ್ತು ಪ್ರಸ್ತುತ ದೇಶದಾದ್ಯಂತ ಖ್ಯಾತಿ ಗಳಿಸಿರುವ ಸಿರಾಜ್, ಸ್ಥಾನ ಪಡೆಯಲು ಕಷ್ಟಪಡಬಹುದು. ಏಕೆಂದರೆ ವಿಶ್ವದ ಅತ್ಯುತ್ತಮ ಬೌಲರ್ ಜಸ್‌ಪ್ರೀತ್‌ ಬುಮ್ರಾ ಏಷ್ಯಾ ಕಪ್‌ನಲ್ಲಿ ಆಡುವುದು ಖಚಿತವಾಗಿದೆ. ಹೀಗಾಗಿ ಸಿರಾಜ್‌ಗೆ ಸ್ಥಾನ ಸಿಗುವುದು ಕಷ್ಟ.

ಆಯ್ಕೆ ಸಮಿತಿ ಅರ್ಶ್‌ದೀಪ್‌ ಸಿಂಗ್, ಪ್ರಸಿದ್ಧ್ ಕೃಷ್ಣ ಮತ್ತು ಹರ್ಷಿತ್ ರಾಣಾ ಅವರಲ್ಲಿ ಒಬ್ಬರು (ಅಥವಾ ಇಬ್ಬರೂ) ಸ್ಥಾನ ಪಡೆಯುವ ನಿರೀಕ್ಷೆಯಿದೆ. ಟಿ20 ವಿಶ್ವಕಪ್‌ನಲ್ಲಿ ನಿರ್ಣಾಯಕ ಕೊನೆಯ ಓವರ್ ಎಸೆದ ಹಾರ್ದಿಕ್ ಪಾಂಡ್ಯ ತಂಡದಲ್ಲಿರುವ ಮತ್ತೊಬ್ಬ ವೇಗಿಯಾಗಿರುತ್ತಾರೆ. ಅನುಭವಿ ಸೀಮರ್ ಮೊಹಮ್ಮದ್ ಶಮಿ ಅವರನ್ನು ಪರಿಗಣಿಸುವ ಸಾಧ್ಯತೆ ಕಡಿಮೆ.

ಇದನ್ನೂ ಓದಿ Asia Cup 2025: ಭಾರತ ತಂಡದ ಆಯ್ಕೆಗೆ ಜಸ್‌ಪ್ರೀತ್‌ ಬುಮ್ರಾ ಲಭ್ಯ! ವರದಿ

ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್ ಮತ್ತು ಉಪನಾಯಕ ಅಕ್ಷರ್ ಪಟೇಲ್ ಅವರನ್ನು ಸ್ಪಿನ್ನರ್‌ಗಳಾಗಿ ಆಯ್ಕೆ ಮಾಡಲಾಗಿದ್ದು, ಫೆಬ್ರವರಿಯಲ್ಲಿ ಕೊನೆಯ ಟಿ20 ತಂಡದಲ್ಲಿದ್ದ ವಾಷಿಂಗ್ಟನ್ ಸುಂದರ್ ಅವರಿಗೆ ಸ್ಥಾನ ನೀಡುವ ಸಾಧ್ಯತೆ ಇದೆ. ಆದರೆ ಖಚಿತವಿಲ್ಲ.