ದುಬೈ: ಪಾಕಿಸ್ತಾನ(IND vs PAK) ವಿರುದ್ಧದ ಏಷ್ಯಾಕಪ್ ಸೂಪರ್-4(Asia Cup 2025) ಪಂದ್ಯದಲ್ಲಿ ಟೀಮ್ ಇಂಡಿಯಾ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ(Hardik Pandya) ಒಂದು ವಿಕೆಟ್ ಕಿತ್ತರೂ ಎರಡು ದಾಖಲೆಗಳನ್ನು ನಿರ್ಮಿಸಿದ್ದಾರೆ. ಭಾರತ ಪರ ಅತ್ಯಧಿಕ ಟಿ20 ವಿಕೆಟ್ ಕಿತ್ತ ಎರಡನೇ ಬೌಲರ್ ಎಂಬ ದಾಖಲೆ ಜತೆಗೆ ಏಷ್ಯಾಕಪ್ ಟಿ20ಯಲ್ಲಿ ಅತ್ಯಧಿಕ ವಿಕೆಟ್ ಪಡೆದ ಆಟಗಾರರ ಪಟ್ಟಿಯಲ್ಲಿ ಜಂಟಿ ಅಗ್ರಸ್ಥಾನಕ್ಕೇರಿದರು.
ಭಾರತ ಪರ ಟಿ20ಯಲ್ಲಿ ಅತ್ಯಧಿಕ ವಿಕೆಟ್ ಪಡೆದ ದಾಖಲೆ ಅರ್ಶ್‌ದೀಪ್ ಸಿಂಗ್ ಹೆಸರಿನಲ್ಲಿದೆ. ಅವರು 100 ವಿಕೆಟ್ ಕಿತ್ತಿದ್ದಾರೆ. ಎರಡನೇ ಸ್ಥಾನದಲ್ಲಿರುವ ಹಾರ್ದಿಕ್ ಪಾಂಡ್ಯ 97 ವಿಕೆಟ್ ಉರುಳಿಸಿದ್ದಾರೆ. 96 ವಿಕೆಟ್ ಪಡೆದಿರುವ ಯಜುವೇಂದ್ರ ಚಹಲ್ ಮೂರನೇ ಸ್ಥಾನದಲ್ಲಿದ್ದಾರೆ.
ಭಾರತ ಪರ ಟಿ20ಯಲ್ಲಿ ಅತಿ ಹೆಚ್ಚು ವಿಕೆಟ್‌ಗಳು
100 - ಅರ್ಶ್‌ದೀಪ್ ಸಿಂಗ್ (64 ಇನ್ನಿಂಗ್ಸ್‌ಗಳಲ್ಲಿ)
97 - ಹಾರ್ದಿಕ್ ಪಾಂಡ್ಯ (106 ಇನ್ನಿಂಗ್ಸ್‌ಗಳಲ್ಲಿ)
96 - ಯುಜ್ವೇಂದ್ರ ಚಾಹಲ್ (79 ಇನ್ನಿಂಗ್ಸ್‌ಗಳಲ್ಲಿ)
92 - ಜಸ್‌ಪ್ರೀತ್ ಬುಮ್ರಾ (72 ಇನ್ನಿಂಗ್ಸ್‌ಗಳಲ್ಲಿ)
ಏಷ್ಯಾಕಪ್ ಟಿ20 ಮಾದರಿಯಲ್ಲಿ ಹಾರ್ದಿಕ್ ಪಾಂಡ್ಯ 14 ವಿಕೆಟ್ ಕಲೆಹಾಕಿ ಶ್ರೀಲಂಕಾದ ವನಿಂದು ಹಸರಂಗ ಮತ್ತು ಅಫ್ಘಾನಿಸ್ತಾನ ರಶೀದ್ ಖಾನ್ ಜತೆ ಜಂಟಿ ಅಗ್ರಸ್ಥಾನ ಪಡೆದಿದ್ದಾರೆ. ಅಫ್ಘಾನ್ ಸೂಪರ್ 4 ನಿಂದ ಹೊರಬಿದ್ದಿರುವ ಕಾರಣ ಸದ್ಯ ಪಾಂಡ್ಯ ಮತ್ತು ಹಸರಂಗ ಮಧ್ಯೆ ಅಗ್ರಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ಟಿ20 ಏಷ್ಯಾಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್‌ಗಳು
14 - ವನಿಂದು ಹಸರಂಗ (ಶ್ರೀಲಂಕಾ), 10 ಇನ್ನಿಂಗ್ಸ್‌ಗಳಲ್ಲಿ
14 - ಹಾರ್ದಿಕ್ ಪಾಂಡ್ಯ (ಭಾರತ), 12 ಇನ್ನಿಂಗ್ಸ್‌ಗಳಲ್ಲಿ
14 - ರಶೀದ್ ಖಾನ್ (ಅಫ್ಘಾನಿಸ್ತಾನ), 11 ಇನ್ನಿಂಗ್ಸ್‌ಗಳಲ್ಲಿ
13 - ಭುವನೇಶ್ವರ್ ಕುಮಾರ್ (ಭಾರತ), 6 ಇನ್ನಿಂಗ್ಸ್‌ಗಳಲ್ಲಿ
12 - ಅಮ್ಜದ್ ಜಾವೇದ್ (ಯುಎಇ), 7 ಇನ್ನಿಂಗ್ಸ್‌ಗಳಲ್ಲಿ
12 - ಹ್ಯಾರಿಸ್ ರೌಫ್ (ಪಾಕಿಸ್ತಾನ), 8 ಇನ್ನಿಂಗ್ಸ್‌ಗಳಲ್ಲಿ
ಇದನ್ನೂ ಓದಿ Asia Cup 2025: ಕೆಣಕಿದ ರೌಫ್‌ಗೆ ಚಳಿ ಬಿಡಿಸಿದ ಅಭಿಷೇಕ್, ಗಿಲ್; ವಿಡಿಯೊ ವೈರಲ್