ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಹಾಂಗ್‌ಕಾಂಗ್ ಓಪನ್‌ನಲ್ಲಿ ಭಾರತಕ್ಕೆ ನಿರಾಸೆ; ಫೈನಲ್‌ನಲ್ಲಿ ಸೇನ್‌, ಸಾತ್ವಿಕ್-ಚಿರಾಗ್‌ಗೆ ಸೋಲು

ಟೂರ್ನಿಯಾದ್ಯಂತ ಉತ್ತಮ ಫಾರ್ಮ್‌ನಲ್ಲಿದ್ದ ಸೇನ್, ಭಾನುವಾರ ನಡೆದ ಫೈನಲ್‌ ಪಂದ್ಯದಲ್ಲಿ 15-21, 12-21 ನೇರ ಗೇಮ್‌ ಅಂತರದಲ್ಲಿ ಎದುರಾಳಿ ಲಿ ಶಿ ಫೆನ್ ವಿರುದ್ಧ ಸೋತರು. ಆರಂಭಿಕ ಗೇಮ್‌ನಲ್ಲಿ ಅಂಕಗಳ ಮುನ್ನಡೆ ಸಾಧಿಸಿದರೂ ಕೂಡ ಎದುರಾಳಿಯ ಚುರುಕಿನ ಆಟದ ಮುಂದೆ ಸಂಪೂರ್ಣ ಆಯಾಸವಾಗಿ ಸೋಲು ಕಂಡು ರನ್ನರ್‌ ಅಪ್‌ ಆದರು.

ಹಾಂಗ್‌ಕಾಂಗ್‌: ಬಿಡಬ್ಲ್ಯೂಎಫ್ ವರ್ಲ್ಡ್ ಟೂರ್ ಸೂಪರ್ 500 ಟೂರ್ನಿಯಾದ ಹಾಂಗ್‌ಕಾಂಗ್ ಓಪನ್ ಸೂಪರ್ 500 ಬ್ಯಾಡ್ಮಿಂಟನ್(Hong Kong Open) ಟೂರ್ನಿಯಲ್ಲಿ ಎರಡು ಚಿನ್ನದ ಪದಕ ನಿರೀಕ್ಷೆಯಲ್ಲಿದ್ದ ಭಾರತೀಯರಿಗೆ ನಿರಾಸೆಯಾಗಿದೆ. ಪುರುಷರ ಸಿಂಗಲ್ಸ್‌ ಫೈನಲ್‌ನಲ್ಲಿ ಲಕ್ಷ್ಯ ಸೇನ್‌(Lakshya Sen) ಮತ್ತು ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ-ಚಿರಾಗ್ ಶೆಟ್ಟಿ ಜೋಡಿ(Satwik-Chirag) ಸೋಲು ಕಂಡಿದ್ದಾರೆ.

ಟೂರ್ನಿಯಾದ್ಯಂತ ಉತ್ತಮ ಫಾರ್ಮ್‌ನಲ್ಲಿದ್ದ ಸೇನ್, ಭಾನುವಾರ ನಡೆದ ಫೈನಲ್‌ ಪಂದ್ಯದಲ್ಲಿ 15-21, 12-21 ನೇರ ಗೇಮ್‌ ಅಂತರದಲ್ಲಿ ಎದುರಾಳಿ ಲಿ ಶಿ ಫೆನ್ ವಿರುದ್ಧ ಸೋತರು. ಆರಂಭಿಕ ಗೇಮ್‌ನಲ್ಲಿ ಅಂಕಗಳ ಮುನ್ನಡೆ ಸಾಧಿಸಿದರೂ ಕೂಡ ಎದುರಾಳಿಯ ಚುರುಕಿನ ಆಟದ ಮುಂದೆ ಸಂಪೂರ್ಣ ಆಯಾಸವಾಗಿ ಸೋಲು ಕಂಡು ರನ್ನರ್‌ ಅಪ್‌ ಆದರು. ಮಕಾವು ಓಪನ್‌ನಲ್ಲಿ ಸೆಮಿಫೈನಲ್ ತಲುಪಿದ ನಂತರ ಸೇನ್ ಈ ಋತುವಿನಲ್ಲಿ ಬಿಡಬ್ಲ್ಯೂಎಫ್ ಟೂರ್‌ನ ಅತ್ಯುತ್ತಮ ಪ್ರದರ್ಶನ ಇದಾಗಿದೆ.

ಸಾತ್ವಿಕ್-ಚಿರಾಗ್‌ಗೂ ಸೋಲು

ದಿನದ ಆರಂಭದಲ್ಲಿ ನಡೆದಿದ್ದ ಪುರುಷರ ಡಬಲ್ಸ್‌ ಫೈನಲ್‌ ಪಂದ್ಯದಲ್ಲಿ ಭಾರತದ ಅಗ್ರ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಚೀನಾದ ಲಿಯಾಂಗ್ ವೀ ಕೆಂಗ್ ಮತ್ತು ವಾಂಗ್ ಚಾಂಗ್ ವಿರುದ್ಧ ಮೂರು ಗೇಮ್‌ಗಳ ತೀವ್ರ ಹೋರಟ ನಡೆಸಿದರೂ 19-21, 21-14, 21-17 ಅಂತರದಿಂದ ಪರಾಭವಗೊಂಡರು.

ಎಂಟನೇ ಶ್ರೇಯಾಂಕದ ಭಾರತೀಯ ಜೋಡಿ ಮೊದಲ ಗೇಮ್ ಅನ್ನು ತಮ್ಮದಾಗಿಸಿಕೊಂಡಿತು. ಆದರೆ ಆ ಬಳಿಕದ ಎರಡು ನಿರ್ಣಾಯಕ ಗೇಮ್‌ನಲ್ಲಿ ಆಕ್ರಮಣಾರಿ ಆಟವಾಡಿದ ಲಿಯಾಂಗ್ ಮತ್ತು ವಾಂಗ್ ಸತತ ಎರಡು ಗೆಲುವಿನೊಂದಿಗೆ ಪಂದ್ಯದಲ್ಲಿ ಮೇಲುಗೈ ಸಾಧಿಸಿತು.

ಇದನ್ನೂ ಓದಿ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌: ಚಿನ್ನ ಗೆದ್ದ ಜಾಸ್ಮಿನ್, ಬೆಳ್ಳಿಗೆ ತೃಪ್ತಿಪಟ್ಟ ನೂಪುರ್