ಗುವಾಹಟಿ: ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್‌ನ 13ನೇ ಆವೃತ್ತಿಯು(Women's World Cup 2025) ಸೆಪ್ಟೆಂಬರ್ 30, ಮಂಗಳವಾರದಿಂದ ಆರಂಭವಾಗಲಿದ್ದು, ಹರ್ಮನ್‌ಪ್ರೀತ್ ಕೌರ್ ಸಾರಥ್ಯದ ಭಾರತ ಮಹಿಳಾ ತಂಡ ಚೊಚ್ಚಲ ಪ್ರಶಸ್ತಿಯನ್ನು ಎತ್ತಿ ಹಿಡಿಯುವ ನಿರೀಕ್ಷೆಯಲ್ಲಿದೆ. ಟೂರ್ನಿ ಲಂಕಾ ಮತ್ತು ಭಾರತ ಜಂಟಿ ಆತಿಥ್ಯದಲ್ಲಿ ನಡೆಯಲಿದೆ. ಮಂಗಳವಾರ ನಡೆಯುವ ಉದ್ಘಾಟನ ಪಂದ್ಯದಲ್ಲಿ ಉಭಯ ತಂಡಗಳೇ ಮುಖಾಮುಖಿಯಾಗುವ ಮೂಲಕ ಪಂದ್ಯಾವಳಿಗೆ ಚಾಲನೆ ಸಿಗಲಿದೆ. ಟೂರ್ನಿಯ ಸ್ವರೂಪ, ಪಂದ್ಯಗಳು, ವೇಳಾಪಟ್ಟಿ ಹಾಗೂ ತಂಡಗಳ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಟೂರ್ನಿ ಮಾದರಿ
8 ತಂಡಗಳ ನಡುವಣ ಈ ಟೂರ್ನಿಯು ರೌಂಡ್ ರಾಬಿನ್ ಲೀಗ್ ಮಾದರಿಯಲ್ಲಿ ನಡೆಯಲಿದೆ. ಲೀಗ್ ಹಂತದಲ್ಲಿ ಎಲ್ಲ ತಂಡಗಳು ಪರಸ್ಪರ ಒಂದು ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಈ ಪೈಕಿ ಅಗ್ರ ನಾಲ್ಕು ಸ್ಥಾನ ಪಡೆದ ತಂಡಗಳು ಸೆಮಿಫೈನಲ್ ಪ್ರವೇಶಿಸಲಿದೆ.
ಮೀಸಲು ದಿನ
ಲೀಗ್ ಪಂದ್ಯಗಳಿಗೆ ಮೀಸಲು ದಿನ ಇರುವುದಿಲ್ಲ.ಎರಡು ಸೆಮಿ ಫೈನಲ್ ಸೇರಿ ಫೈನಲ್ ಪಂದ್ಯಕ್ಕೆ ಮಾತ್ರ ಮೀಸಲು ದಿನ ನಿಗದಿಯಾಗಿದೆ. ಲೀಗ್ ಪಂದ್ಯ ಮಳೆಯಿಂದ ಅಥವಾ ಇನ್ನಿತರ ಕಾರಣದಿಂದ ನಡೆಯದಿದ್ದರೆ ಉಭಯ ತಂಡಗಳಿಗೂ ತಲಾ ಒಂದು ಅಂಕ ನೀಡಲಾಗುತ್ತದೆ.
ಟೈ ಆದರೆ?
ಟೂರ್ನಮೆಂಟ್ ನಿಮಯದ ಪ್ರಕಾರ ಪಂದ್ಯ ಟೈಗೊಂಡರೆ ಫಲಿತಾಂಶ ನಿರ್ಧರಿಸುವ ತನಕ ಸೂಪರ್ ಓವರ್ ಆಡಿಸಲಾಗುತ್ತದೆ.
ಇದನ್ನೂ ಓದಿ Women’s Cricket World Cup: ಮಹಿಳಾ ಏಕದಿನ ವಿಶ್ವಕಪ್‌ನ ದಾಖಲೆಯ ಪಟ್ಟಿ ಇಲ್ಲಿದೆ