ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs BAN: ಭಾರತ-ಬಾಂಗ್ಲಾ ಸೂಪರ್‌-4 ಪಂದ್ಯದ ಪಿಚ್‌ ರಿಪೋರ್ಟ್‌, ಸಂಭಾವ್ಯ ತಂಡ ಹೇಗಿದೆ?

ಇತ್ತಂಡಗಳ ಏಷ್ಯಾಕಪ್‌ ದಾಖಲೆ ನೋಡುವುದಾದರೆ ಭಾರತವೇ ಬಲಿಷ್ಠವಾಗಿದೆ. ಇದುವರೆಗೂ ಒಟ್ಟು 15 ಬಾರಿ ಸೆಣಸಾಟ ನಡೆಸಿದ್ದು, ಈ ಪೈಕಿ ಭಾರತ ಗರಿಷ್ಠ 13 ಪಂದ್ಯಗಳನ್ನು ಗೆದ್ದಿದೆ. ಬಾಂಗ್ಲಾ ಎರಡು ಪಂದ್ಯಗಳನ್ನು ಜಯಿಸಿದೆ. ಇದರೊಲ್ಲೊಂದು ಗೆಲುವು ಕಳೆದ ಆವೃತ್ತಿಯಲ್ಲಿ ದಾಖಲಾಗಿತ್ತು. 2023ರಲ್ಲಿ ನಡೆದಿದ್ದ ಪಂದ್ಯದಲ್ಲಿ 6ರನ್‌ ರೋಚಕ ಗೆಲುವು ಸಾಧಿಸಿತ್ತು.

ದುಬೈ: ಬುಧವಾರ(ಸೆ.24) ಏಷ್ಯಾಕಪ್‌ ಟೂರ್ನಿಯ(Asia Cup 2025) ಸೂಪರ್‌ ಫೋರ್‌ ಮಹತ್ವದ ಪಂದ್ಯದಲ್ಲಿ ಅಜೇಯ ಭಾರತ ಮತ್ತು ಬಾಂಗ್ಲಾದೇಶ(IND vs BAN) ನಡುವೆ ಮುಖಾಮುಖಿ ನಡೆಯಲಿದೆ. ಈ ಪಂದ್ಯದ ಅಂಕಣ ಗುಟ್ಟು, ಸಂಭಾವ್ಯ ಆಡುವ ಬಳಗದ ಮಾಹಿತಿ ಇಲ್ಲಿದೆ.

ಪಿಚ್‌ ರಿಪೋರ್ಟ್‌

ದುಬೈ ಕ್ರೀಡಾಂಗಣದ ಪಿಚ್‌ ಸ್ಪರ್ಧಾತ್ಮಕವಾಗಿದೆ. ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ನೀಡುವ ಈ ಪಿಚ್‌ನಲ್ಲಿ ಬ್ಯಾಟರ್‌ಗಳಿಗೆ ರನ್‌ ಗಳಿಸಲು ಅಷ್ಟು ಸುಲಭವಲ್ಲ.ರಾತ್ರಿ ವೇಳೆ ಮಂಜು ಬೀಳುವ ಕಾರಣ ಚೇಸಿಂಗ್ ತಂಡಕ್ಕೆ ಉಪಯೋಗವಾಗಲಿದೆ. ಟಾಸ್‌ ಗೆಲ್ಲುವ ತಂಡ ಫೀಲ್ಡಿಂಗ್‌ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಯಿದೆ.

ಮುಖಾಮುಖಿ

ಇತ್ತಂಡಗಳ ಏಷ್ಯಾಕಪ್‌ ದಾಖಲೆ ನೋಡುವುದಾದರೆ ಭಾರತವೇ ಬಲಿಷ್ಠವಾಗಿದೆ. ಇದುವರೆಗೂ ಒಟ್ಟು 15 ಬಾರಿ ಸೆಣಸಾಟ ನಡೆಸಿದ್ದು, ಈ ಪೈಕಿ ಭಾರತ ಗರಿಷ್ಠ 13 ಪಂದ್ಯಗಳನ್ನು ಗೆದ್ದಿದೆ. ಬಾಂಗ್ಲಾ ಎರಡು ಪಂದ್ಯಗಳನ್ನು ಜಯಿಸಿದೆ. ಇದರೊಲ್ಲೊಂದು ಗೆಲುವು ಕಳೆದ ಆವೃತ್ತಿಯಲ್ಲಿ ದಾಖಲಾಗಿತ್ತು. 2023ರಲ್ಲಿ ನಡೆದಿದ್ದ ಪಂದ್ಯದಲ್ಲಿ 6ರನ್‌ ರೋಚಕ ಗೆಲುವು ಸಾಧಿಸಿತ್ತು.

ಉಭಯ ಸಂಭಾವ್ಯ ತಂಡಗಳು

ಭಾರತ: ಅಭಿಷೇಕ್ ಶರ್ಮಾ, ಶುಭಮನ್ ಗಿಲ್, ಸಂಜು ಸ್ಯಾಮ್ಸನ್ (ವಿ.ಕೀ.), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ.

ಇದನ್ನೂ ಓದಿ Asia Cup 2025: ಪಾಕಿಸ್ತಾನ ತಂಡದ ವೈಫಲ್ಯಕ್ಕೆ ಸಲ್ಮಾನ್‌ ಆಘಾ ಕಾರಣ ಎಂದ ಶೋಯೆಬ್‌ ಅಖ್ತರ್‌!

ಬಾಂಗ್ಲಾದೇಶ: ಸೈಫ್ ಹಸನ್, ತಂಝಿದ್ ಹಸನ್ ತಮೀಮ್, ಲಿಟ್ಟನ್ ದಾಸ್ (ನಾಯಕ), ತೌಹಿದ್ ಹೃದಯೋಯ್, ಶಮೀಮ್ ಹೊಸೈನ್, ಜೇಕರ್ ಅಲಿ, ಮಹೇದಿ ಹಸನ್, ನಸುಮ್ ಅಹ್ಮದ್, ಟಸ್ಕಿನ್ ಅಹ್ಮದ್, ಶೋರಿಫುಲ್ ಇಸ್ಲಾಂ, ಮುಸ್ತಫಿಜುರ್ ರೆಹಮಾನ್.