ಬರ್ಮಿಂಗ್‌ಹ್ಯಾಮ್: ಲೀಡ್ಸ್‌ನಲ್ಲಿ ಗೆಲ್ಲಬಹುದಾದ ಪಂದ್ಯವನ್ನು ಕೈಚೆಲ್ಲಿದ ಟೀಂ ಇಂಡಿಯಾ ಎಲ್ಲ ತಪ್ಪುಗಳನ್ನು ತಿದ್ದಿಕೊಂಡು ಬರ್ಮಿಂಗ್‌ಹ್ಯಾಮ್‌ನಲ್ಲಿ ಬುಧವಾರ(ಜು.2) ದಿಂದ ಆರಂಭಗೊಳ್ಳಲಿರುವ ದ್ವಿತೀಯ ಟೆಸ್ಟ್ ಪಂದ್ಯಲ್ಲಿ ತಂಡದ ಆಡುವ ಬಳಗದಲ್ಲಿ(India Predicted Playing 11) ಮಹತ್ವದ ಬದಲಾವಣೆಯೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದೆ. ಎಡ್ಜ್‌ಬಾಸ್ಟನ್(Edgbaston)ನಲ್ಲಿ ಇದುವರೆಗೂ ಗೆಲುವು ಸಾಧಿಸಿದ ಭಾರತ ಈ ಬಾರಿ ಐತಿಹಾಸಿಕ ಸಾಧನೆ ಮಾಡುವ ತಕದಲ್ಲಿದೆ.
ಭಾರತದ ಅತಿದೊಡ್ಡ ಅಸ್ತ್ರ ಜಸ್‌ಪ್ರೀತ್ ಬುಮ್ರಾ ಅವರ ಸೇವೆ ಲಭ್ಯವಿರುವುದಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ. ಬೂಮ್ರಾ ಹೊರಗುಳಿದರೆ, ಅವರ ಜಾಗವನ್ನು ಎಡಗೈ ವೇಗಿ ಅರ್ಶ್‌ದೀಪ್ ಸಿಂಗ್ ತುಂಬುವ ಸಾಧ್ಯತೆ ಹೆಚ್ಚು. ಇನ್ನೊಂದೆಡೆ ಎರಡು ಸ್ಪಿನ್ನರ್‌ಗಳನ್ನು ಆಡಿಸುವ ಸಾಧ್ಯತೆ ಇದೆ. ಹಾಗಾದರೆ ರವೀಂದ್ರ ಜಡೇಜಾ ಜತೆ ಎರಡನೇ ಸ್ಪಿನ್ನರ್ ಆಗಿ ಕುಲ್‌ದೀಪ್ ಆಡುವ ಅವಕಾಶ ಪಡೆಯಬಹುದು. ಮೊದಲ ಟೆಸ್ಟ್‌ನಲ್ಲಿ ನಿರಾಸೆ ಮೂಡಿಸಿದ್ದ ಶಾರ್ದೂಲ್ ಠಾಕೂರ್‌ರನ್ನು ಹೊರಗಿಟ್ಟು ಆಲ್‌ರೌಂಡರ್ ನಿತೇಶ್ ರೆಡ್ಡಿ ಆಡಿಸಿದರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ.
ಭಾರತ ಸಂಭಾವ್ಯ ಆಡುವ ಬಳಗ
ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ಶುಭಮನ್ ಗಿಲ್(ನಾಯಕ), ರಿಷಭ್ ಪಂತ್(ವಿ.ಕೀ.), ಕರುಣ್ ನಾಯರ್, ವಾಷಿಂಗ್ಟನ್ ಸುಂದರ್, ನಿತೀಶ್ ಕುಮಾರ್ ರೆಡ್ಡಿ, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.
ಇಂಗ್ಲೆಂಡ್ ತನ್ನ ಆಡುವ ಬಳಗವನ್ನು ಪಂದ್ಯಕ್ಕೂ ಮುನ್ನ ದಿನವೇ ಪ್ರಕಟಿಸಿದೆ. ಜೋಫ್ರ ಆರ್ಚರ್ ಅವರು ಆಡುವ ಅವಕಾಶ ಪಡೆಯಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಇಂಗ್ಲೆಂಡ್ ತನ್ನ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಮೊದಲ ಪಂದ್ಯದ ಆಡುವ ಬಳಗವನ್ನೇ ಮುಂದುವರಿಸಿದೆ.
ಇದನ್ನೂ ಓದಿ IND vs ENG: ಜಸ್‌ಪ್ರೀತ್ ಬುಮ್ರಾ ಸ್ಥಾನದಲ್ಲಿ ಆಕಾಶ್ ದೀಪ್‌ಗೆ ಸ್ಥಾನ ನೀಡಿ ಎಂದ ಇರ್ಫಾನ್ ಪಠಾಣ್!
ಇಂಗ್ಲೆಂಡ್ ಆಡುವ ಬಳಗ
ಜಾಕ್ ಕ್ರಾಲಿ, ಬೆನ್ ಡಕೆಟ್, ಒಲ್ಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಜೇಮಿ ಸ್ಮಿತ್ (ವಿಕೆಟ್ ಕೀಪರ್), ಕ್ರಿಸ್ ವೋಕ್ಸ್, ಬ್ರೈಡೆನ್ ಕಾರ್ಸ್, ಜಾಶ್ ಟಾಂಗ್, ಶೋಯೆಬ್ ಬಶೀರ್.