ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG 3rd Tes: ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಇಂಗ್ಲೆಂಡ್‌; ಭಾರತ ಪರ ಒಂದು ಬದಲಾವಣೆ

ಲಾರ್ಡ್ಸ್‌ ಕ್ರೀಡಾಂಗಣದ ಪಿಚ್‌ನಲ್ಲಿ ಹುಲ್ಲುಗಳಿದ್ದು, ಇದು ವೇಗಿಗಳು ಹೆಚ್ಚಿನ ನೆರವು ನೀಡುವ ನಿರೀಕ್ಷೆಯಿದೆ. ಅಧಿಕ ಬೌನ್ಸರ್‌ಗಳೂ ಕಂಡುಬರಲಿವೆ. ಹೀಗಾಗಿ ಬ್ಯಾಟರ್‌ಗಳು ರನ್‌ ಗಳಿಸಲು ಹೆಚ್ಚಿನ ಶ್ರಮ ವಹಿಸಬೇಕಿದೆ. 2021ರ ಬಳಿಕ ಇಲ್ಲಿ ನಡೆದ 9 ಟೆಸ್ಟ್‌ಗಳಲ್ಲಿ ಮೊದಲ ಇನ್ನಿಂಗ್ಸ್‌ನ ಸರಾಸರಿ ಮೊತ್ತ 265.

ಲಂಡನ್‌: ಪ್ರವಾಸಿ ಭಾರತ ವಿರುದ್ಧದ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಟಾಸ್‌ ಗೆದ್ದ ಇಂಗ್ಲೆಂಡ್‌ ನಾಯಕ ಬೆನ್‌ ಸ್ಟೋಕ್ಸ್‌ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದೆ. ನಿರೀಕ್ಷೆಯಂತೆ ಜಸ್‌ಪ್ರೀತ್‌ ಬುಮ್ರಾ ಭಾರತ ತಂಡಕ್ಕೆ ಆಗಮಿಸಿದ್ದು ಅವರಿಗಾಗಿ ಪ್ರಸಿದ್ಧ್‌ ಕೃಷ್ಣ ಜಾಗ ಬಿಟ್ಟುಕೊಡಬೇಕಾಯಿತು. ಕಳೆದ ಪಂದ್ಯಕ್ಕೆ ಬುಮ್ರಾ ವಿಶ್ರಾಂತಿ ಪಡೆದಿದ್ದರು. ಕರುಣ್‌ ನಾಯರ್‌ಗೆ ಮತ್ತೊಂದು ಅವಕಾಶ ಸಿಕ್ಕಿದೆ. ಆಲ್ರೌಂಡರ್‌ ನಿತೀಶ್‌ ಕುಮಾರ್‌ ಕೂಡಾ ತಂಡದಲ್ಲಿ ಮುಂದುವರಿದ್ದಾರೆ.

ಲಾರ್ಡ್ಸ್‌ ಟೆಸ್ಟ್‌ಗೆ ಇಂಗ್ಲೆಂಡ್‌ ಒಂದು ದಿನ ಮೊದಲೇ ತನ್ನ ತಂಡವನ್ನು ಘೋಷಿಸಿದ ಕಾರಣ ಈ ತಂಡದ ಪರ ಯಾವುದೇ ಕುತೂಹಲ ಇರಲಿಲ್ಲ. ಪದೇ ಪದೇ ಗಾಯಗೊಳ್ಳುತ್ತಿದ್ದ ಆರ್ಚರ್ 2021ರ ಬಳಿಕ ಇದೇ ಮೊದಲ ಬಾರಿ ಟೆಸ್ಟ್‌ ಆಡಲು ಸಜ್ಜಾಗಿದ್ದಾರೆ.

ಲಾರ್ಡ್ಸ್‌ ಕ್ರೀಡಾಂಗಣದ ಪಿಚ್‌ನಲ್ಲಿ ಹುಲ್ಲುಗಳಿದ್ದು, ಇದು ವೇಗಿಗಳು ಹೆಚ್ಚಿನ ನೆರವು ನೀಡುವ ನಿರೀಕ್ಷೆಯಿದೆ. ಅಧಿಕ ಬೌನ್ಸರ್‌ಗಳೂ ಕಂಡುಬರಲಿವೆ. ಹೀಗಾಗಿ ಬ್ಯಾಟರ್‌ಗಳು ರನ್‌ ಗಳಿಸಲು ಹೆಚ್ಚಿನ ಶ್ರಮ ವಹಿಸಬೇಕಿದೆ. 2021ರ ಬಳಿಕ ಇಲ್ಲಿ ನಡೆದ 9 ಟೆಸ್ಟ್‌ಗಳಲ್ಲಿ ಮೊದಲ ಇನ್ನಿಂಗ್ಸ್‌ನ ಸರಾಸರಿ ಮೊತ್ತ 265.



ಭಾರತ ತಂಡ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ಈವರೆಗೂ 19 ಟೆಸ್ಟ್‌ ಪಂದ್ಯಗಳನ್ನಾಡಿದ್ದು, 3ರಲ್ಲಿ ಜಯಗಳಿಸಿದೆ. 12 ಪಂದ್ಯಗಳಲ್ಲಿ ಇಂಗ್ಲೆಂಡ್ ಗೆದ್ದಿದ್ದರೆ, ಉಳಿದ 4 ಪಂದ್ಯಗಳು ಡ್ರಾಗೊಂಡಿವೆ. ಆದರೆ ಇಲ್ಲಿ ಕೊನೆ 3 ಮುಖಾಮುಖಿಯಲ್ಲಿ ಭಾರತ 2ರಲ್ಲಿ ಜಯಗಳಿಸಿದೆ. ಕೊನೆಯಬಾರಿ 2021ರ ಪ್ರವಾಸದಲ್ಲಿ ಭಾರತ ಜಯಭೇರಿ ಬಾರಿಸಿತ್ತು. ಕನ್ನಡಿಗ ರಾಹುಲ್‌ ಶತಕ ಬಾರಿಸಿ ಸಂಭ್ರಮಿಸಿದ್ದರು. ಈ ಬಾರಿಯೂ ಅವರು ತಂಡದಲ್ಲಿದ್ದಾರೆ.

ಇದನ್ನೂ ಓದಿ IND vs ENG: ತಮ್ಮ ಸ್ಟಂಪ್‌ ಮೈಕ್‌ ಸಂಭಾಷಣೆಯ ಹಿಂದಿನ ರಹಸ್ಯ ಬಯಲು ಮಾಡಿದ ರಿಷಭ್‌ ಪಂತ್!

ಉಭಯ ಆಡುವ ಬಳಗ

ಇಂಗ್ಲೆಂಡ್‌: ಜ್ಯಾಕ್ ಕ್ರಾಲಿ, ಬೆನ್ ಡಕೆಟ್, ಓಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಜೇಮೀ ಸ್ಮಿತ್ (ವಿಕೆಟ್ ಕೀಪರ್), ಕ್ರಿಸ್ ವೋಕ್ಸ್, ಬ್ರೈಡನ್ ಕಾರ್ಸೆ, ಜೋಫ್ರಾ ಆರ್ಚರ್ ಮತ್ತು ಶೋಯೆಬ್ ಬಶೀರ್.

ಭಾರತ: ಯಶಸ್ವಿ ಜೈಸ್ವಾಲ್‌, ಕೆ.ಎಲ್‌ ರಾಹುಲ್‌, ಕರುಣ್‌ ನಾಯರ್‌ , ಶುಭಮನ್‌ ಗಿಲ್‌(ನಾಯಕ), ರಿಷಭ್‌ ಪಂತ್‌, ರವೀಂದ್ರ ಜಡೇಜಾ, ನಿತೀಶ್‌ ರೆಡಿ, ವಾಷಿಂಗ್ಟನ್‌ ಸುಂದರ್‌, ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್‌ ಸಿರಾಜ್‌, ಆಕಾಶ್‌ದೀಪ್‌.

ಪಂದ್ಯ ಆರಂಭ: ಮಧ್ಯಾಹ್ನ 3.30ರಿಂದ(ಭಾರತೀಯ ಕಾಲಮಾನ)

ನೇರಪ್ರಸಾರ: ಸೋನಿ ಸ್ಪೋರ್ಟ್ಸ್‌, ಜಿಯೋ ಹಾಟ್‌ಸ್ಟಾರ್‌.