ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಟೀಮ್​ ಇಂಡಿಯಾ ಪರ ಟೆಸ್ಟ್​ ಪದಾರ್ಪಣೆ ನಿರೀಕ್ಷೆಯಲ್ಲಿ ಕಂಬೋಜ್‌

ಎಡ ಮೊಣಕಾಲಿನ ನೋವಿನಿಂದಾಗಿ ಭಾರತದ ತಂಡದ ಆಲ್‌ರೌಂಡರ್‌ ನಿತೀಶ್‌ ಕುಮಾರ್ ರೆಡ್ಡಿ ಅವರು ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಿಂದ ಹೊರಬಿದ್ದಿದ್ದಾರೆ. ಭಾನುವಾರ ಜಿಮ್‌ನಲ್ಲಿ ಅಭ್ಯಾಸದ ವೇಳೆ ಅವರಿಗೆ ಈ ನೋವು ಕಾಣಿಸಿತ್ತು. ಸ್ಕ್ಯಾನ್‌ ನಂತರ ಅಸ್ಥಿರಜ್ಜುವಿಗೆ ಹಾನಿಯಾಗಿರುವುದು ಪತ್ತೆಯಾಗಿದೆ.

ಮ್ಯಾಂಚೆಸ್ಟರ್‌: ಆಕಾಶ್‌ದೀಪ್‌ ಹಾಗೂ ಅರ್ಶ್‌ದೀಪ್‌ ಸಿಂಗ್‌ ಗಾಯಗೊಂಡ ಕಾರಣ ಟೀಮ್‌ ಇಂಡಿಯಾ ಸೇರಿರುವ ಹರ್ಯಾಣದ ವೇಗಿ ಅನ್ಶುಲ್‌ ಕಂಬೋಜ್‌(Anshul Kamboj) ಇಂಗ್ಲೆಂಡ್​ ವಿರುದ್ಧ ಮ್ಯಾಚೆಸ್ಟರ್‌ನಲ್ಲಿ ಟೆಸ್ಟ್(ENG vs IND)​ ಪದಾರ್ಪಣೆ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಸೋಮವಾರ ನೆಟ್ಸ್‌ನಲ್ಲಿ ಕಂಬೋಜ್‌ ಬೌಲಿಂಗ್‌ ಅಭ್ಯಾಸ ನಡೆಸಿ ಗಮನಸೆಳೆದರು. ಹೀಗಾಗಿ ಅವರು ಇಗ್ಲೆಂಡ್ ವಿರುದ್ಧ ಬುಧವಾರ ಆರಂಭವಾಗುವ ನಾಲ್ಕನೇ ಟೆಸ್ಟ್‌ನಲ್ಲಿ ಕಣಕ್ಕಿಳಿಯುವ ಸಾಧ್ಯತೆ ಅಧಿಕವಾಗಿದೆ.

ಸೋಮವಾರ ನಡೆದ ನೆಟ್‌ ಅಭ್ಯಾಸದಲ್ಲಿ ಪ್ರಧಾನ ಕೋಚ್‌ ಗೌತಮ್‌ ಗಂಭೀರ್‌ ಮತ್ತು ಬೌಲಿಂಗ್‌ ಕೋಚ್‌ ಮಾರ್ನೆ ಮಾರ್ಕೆಲ್‌ ಮಾರ್ಗದರ್ಶನದಲ್ಲಿ ಅನ್ಶುಲ್‌ ಕಂಬೋಜ್‌ ಸತತವಾಗಿ ಹಲವು ಓವರ್‌ ಬೌಲಿಂಗ್‌ ನಡೆಸಿದರು.

ಅರ್ಶ್‌ದೀಪ್‌ ಕೈಬೆರಳಿಗೆ ಗಾಯ ಮಾಡಿಕೊಂಡು ನಾಲ್ಕನೇ ಟೆಸ್ಟ್‌ನಿಂದ ಅಧಿಕೃತವಾಗಿ ಹೊರಬಿದಿದ್ದಾರೆ. ಇನ್ನೊಂದೆಡೆ ಆಕಾಶ್‌ದೀಪ್‌ ತೊಡೆಸಂಧು ನೋವಿನಿಂದ ಬಳಲುತ್ತಿದ್ದು ಪಂದ್ಯದ ಆಯ್ಕೆಗೆ ಲಭ್ಯವಿರುವ ಸಾಧ್ಯತೆ ಕಡಿಮೆ. 24 ವರ್ಷದ ಅನ್ಶುಲ್‌ರನ್ನು ಕಣಕ್ಕಿಳಿಸಲು ಭಾರತ ಯೋಚಿಸಿದೆ.

ಬೌಲಿಂಗ್‌ ಆಲ್‌ರೌಂಡರ್‌ ಆಗಿರುವ ಅನ್ಶುಲ್‌ ಕಂಬೋಜ್‌ ಕಳೆದ ವರ್ಷ ರಣಜಿ ಟ್ರೋಫಿಯಲ್ಲಿ ಕೇರಳ ವಿರುದ್ಧ ಇನ್ನಿಂಗ್ಸ್‌ನ ಎಲ್ಲಾ 10 ವಿಕೆಟ್‌ ಕಬಳಿಸಿ ಮಿಂಚಿದ್ದ ಅನ್ಶುಲ್‌, ಇತ್ತೀಚೆಗೆ ಇಂಗ್ಲೆಂಡ್‌ ಲಯನ್ಸ್‌ ವಿರುದ್ಧ ಭಾರತ ‘ಎ’ ತಂಡದ ಪರ ಉತ್ತಮ ಪ್ರದರ್ಶನ ನೀಡಿದ್ದರು. ಅವರು ಕಳೆದ ಋತುವಿನ ರಣಜಿಯಲ್ಲಿ 6 ಪಂದ್ಯಗಳಲ್ಲಿ 34 ವಿಕೆಟ್‌ ಪಡೆದಿದ್ದರು. ಇದು ಮಾತ್ರವಲ್ಲದೆ ಇಂಗ್ಲೆಂಡ್‌ ಲಯಲ್ಸ್‌ ವಿರುದ್ಧದ ಎರಡು ಅನಧಿಕೃತ ಟೆಸ್ಟ್‌ನಲ್ಲಿ 5 ವಿಕೆಟ್‌ ಸಹಿತ ಒಂದು ಅರ್ಧಶತಕ ಬಾರಿಸಿದ್ದರು.



ಸರಣಿಯಿಂದ ಹೊರಬಿದ್ದ ನಿತೀಶ್‌ ಕುಮಾರ್‌

ಎಡ ಮೊಣಕಾಲಿನ ನೋವಿನಿಂದಾಗಿ ಭಾರತದ ತಂಡದ ಆಲ್‌ರೌಂಡರ್‌ ನಿತೀಶ್‌ ಕುಮಾರ್ ರೆಡ್ಡಿ ಅವರು ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಿಂದ ಹೊರಬಿದ್ದಿದ್ದಾರೆ. ಭಾನುವಾರ ಜಿಮ್‌ನಲ್ಲಿ ಅಭ್ಯಾಸದ ವೇಳೆ ಅವರಿಗೆ ಈ ನೋವು ಕಾಣಿಸಿತ್ತು. ಸ್ಕ್ಯಾನ್‌ ನಂತರ ಅಸ್ಥಿರಜ್ಜುವಿಗೆ ಹಾನಿಯಾಗಿರುವುದು ಪತ್ತೆಯಾಗಿದೆ. ತವರಿಗೆ ಮರಳಿದ ಬಳಿಕ ಅವರು ಬೆಂಗಳೂರಿನ ಎನ್‌ಸಿಎಯಲ್ಲಿ ಪುನಶ್ಚೇತನ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳಲಿದ್ದಾರೆ.

ಭಾರತ ಪರಿಷ್ಕೃತ ತಂಡ

ಶುಭಮನ್ ಗಿಲ್ (ನಾಯಕ), ರಿಷಭ್‌ ಪಂತ್ (ಉಪನಾಯಕ/ ವಿ.ಕೀ.), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್, ಕರುಣ್ ನಾಯರ್, ರವೀಂದ್ರ ಜಡೇಜಾ, ಧ್ರುವ್ ಜುರೆಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್. ಸಿರಾಜ್, ಪ್ರಸಿದ್ಧ್ ಕೃಷ್ಣ, ಆಕಾಶ್ ದೀಪ್, ಕುಲದೀಪ್ ಯಾದವ್, ಅನ್ಶುಲ್‌ ಕಂಬೋಜ್‌.

ಇದನ್ನೂ ಓದಿ ENG vs IND: 4ನೇ ಟೆಸ್ಟ್‌ಗೆ ಇಂಗ್ಲೆಂಡ್‌ ತಂಡ ಪ್ರಕಟ; 8 ವರ್ಷದ ಬಳಿಕ ಮರಳಿದ ಸ್ಪಿನ್ನರ್‌