ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND-W vs SL-W: ಭಾರತ vs ಲಂಕಾ ಮಹಿಳಾ ವಿಶ್ವಕಪ್‌ ಪಂದ್ಯದ ಪಿಚ್‌ ರಿಪೋರ್ಟ್‌ ಹೇಗಿದೆ?

Women's World Cup 2025: ಒಡಿಶಾ ಭಾಗದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಮಳೆ ಮಾರುತಗಳು ಚುರುಕುಗೊಂಡಿವೆ. ಇದರ ಪರಿಣಾಮ ಪಂದ್ಯದ ವೇಳೆ ಶೇ.30 ರಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಗುವಾಹಟಿ: ಪ್ರತಿಷ್ಠಿತ ಮಹಿಳಾ ಏಕದಿನ ಮಹಿಳಾ ವಿಶ್ವಕಪ್(Women's World Cup 2025) ಸೆಪ್ಟೆಂಬರ್ 30ರ ಮಂಗಳವಾರ ಗುವಾಹಟಿಯ ಬರ್ಸಪಾರ ಕ್ರಿಕೆಟ್ ಕ್ರೀಡಾಂಗಣದಲ್ಲಿ(Baraspara Cricket Stadium ) ಭಾರತ (IND-W) ಮತ್ತು ಶ್ರೀಲಂಕಾ(SL-W) ನಡುವಿನ ಉದ್ಘಾಟನಾ ಪಂದ್ಯದೊಂದಿಗೆ ಪ್ರಾರಂಭವಾಗಲಿದೆ. ಈಶಾನ್ಯ ರಾಜ್ಯವಾದ ಅಸ್ಸಾಂನ ಸುಂದರ ನಗರದಲ್ಲಿ ಕಿಕ್ಕಿರಿದ ಜನಸಂದಣಿಯ ಮುಂದೆ ಉಭಯ ತಂಡಗಳು ಗೆಲುವಿನ ಅಭಿಯಾನಕ್ಕಾಗಿ ಕಾದಾಟ ನಡೆಸಲಿವೆ.

ಪಿಚ್‌ ರಿಪೋರ್ಟ್‌

ಗುವಾಹಟಿಯ ಬರ್ಸಾಪರ ಕ್ರಿಕೆಟ್ ಕ್ರೀಡಾಂಗಣ ಪಿಚ್‌ ಬ್ಯಾಟಿಂಗ್‌ ಬ್ಯಾಟಿಂಗ್‌ ಸ್ನೇಗಿಯಾಗಿದೆ. ಹೊಸ ಪಿಚ್ ಆಗಿರುವುದರಿಂದ ಚೆಂಡು ಚೆನ್ನಾಗಿ ಪುಟಿಯುತ್ತದೆ ಮತ್ತು ವೇಗದ ಬೌಲರ್‌ಗಳಿಗೆ ಹೆಚ್ಚಿನ ನೆರವು ನೀಡಲಿದೆ. ಪಂದ್ಯ ಮುಂದುವರೆದಂತೆ, ಮೇಲ್ಮೈ ಸ್ವಲ್ಪ ನಿಧಾನವಾದಗ ಸ್ಪಿನ್ನರ್‌ಗಳಿಗೆ ಸಹಕಾರಿಯಾದರೂ ಬ್ಯಾಟಿಂಗ್‌ಗೆ ಯಾವುದೇ ಅಡ್ಡಿಯಾಗದು. ಬ್ಯಾಟಿಂಗ್‌ ಪಿಚ್‌ ಆಗಿರುವ ಕಾರಣ ಟಾಸ್‌ ಗೆದ್ದ ತಂಡ ಬೌಲಿಂಗ್‌ಗೆ ಮೊದಲ ಆದ್ಯತೆ ನೀಡಬಹುದು.

ಪಂದ್ಯಕ್ಕೆ ಮಳೆ ಭೀತಿ

ಒಡಿಶಾ ಭಾಗದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಮಳೆ ಮಾರುತಗಳು ಚುರುಕುಗೊಂಡಿವೆ. ಇದರ ಪರಿಣಾಮ ಪಂದ್ಯದ ವೇಳೆ ಶೇ.30 ರಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಒಂದೊಮ್ಮೆ ಪಂದ್ಯ ಸಂಪೂರ್ಣವಾಗಿ ನಡೆಯದೇ ಹೋದರೆ ಉಭಯ ತಂಡಗಳಿಗೂ ತಲಾ ಒಂದು ಅಂಕ ನೀಡಲಾಗುತ್ತದೆ.

ಮುಖಾಮುಖಿ

ಭಾರತ ಮತ್ತು ಶ್ರೀಲಂಕಾ ಮಹಿಳಾ ತಂಡಗಳು ಇದುವರೆಗೆ ಏಕದಿನದಲ್ಲಿ 35 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಭಾರತ ಗರಿಷ್ಠ 31 ಪಂದ್ಯಗಳನ್ನು ಗೆದ್ದಿದೆ. ಲಂಕಾ ಕೇವಲ 3 ಪಂದ್ಯಗಳನ್ನು ಮಾತ್ರ ಜಯಿಸಿದೆ. ಒಂದು ಪಂದ್ಯ ಫಲಿತಾಂಶ ಕಂಡಿಲ್ಲ.

ಉಭಯ ಸಂಭಾವ್ಯ ತಂಡಗಳು

ಭಾರತ: ಪ್ರತೀಕಾ ರಾವಲ್, ಸ್ಮೃತಿ ಮಂಧಾನ, ಹರ್ಲೀನ್ ಡಿಯೋಲ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಜೆಮಿಮಾ ರಾಡ್ರಿಗಸ್, ದೀಪ್ತಿ ಶರ್ಮಾ, ರಿಚಾ ಘೋಷ್ (ವಿ.ಕೀ.), ಸ್ನೇಹ ರಾಣಾ, ರಾಧಾ ಯಾದವ್, ಕ್ರಾಂತಿ ಗೌಡ್, ರೇಣುಕಾ ಸಿಂಗ್ ಠಾಕೂರ್.

ಶ್ರೀಲಂಕಾ: ಹಾಸಿನಿ ಪೆರೇರಾ, ಚಾಮರಿ ಅಥಾಪತ್ತು (ನಾಯಕಿ), ಹರ್ಷಿತಾ ಸಮರವಿಕ್ರಮ, ವಿಶ್ಮಿ ಗುಣರತ್ನೆ, ಅನುಷ್ಕಾ ಸಂಜೀವನಿ (ವಿ.ಕೀ.), ಕವಿಶಾ ದಿಲ್ಹಾರಿ, ದೇವ್ಮಿ ವಿಹಂಗಾ, ಪಿಯುಮಿ ವತ್ಸಲಾ, ಅಚಿನಿ ಕುಲಸೂರ್ಯ, ಉದೇಶಿಕಾ ಪ್ರಬೋಧನಿ, ಮಾಲ್ಕಿ ಮಾದರ.

ಇದನ್ನೂ ಓದಿ Women’s Cricket World Cup: ಮಹಿಳಾ ಏಕದಿನ ವಿಶ್ವಕಪ್‌ನ ದಾಖಲೆಯ ಪಟ್ಟಿ ಇಲ್ಲಿದೆ