ಮುಂಬಯಿ: ಆಸ್ಟ್ರೇಲಿಯಾ ಎ(India A squad) ವಿರುದ್ಧದ ಏಕದಿನ ಸರಣಿಗೆ ಭಾರತ ಎ ತಂಡದಲ್ಲಿ ರೋಹಿತ್ ಶರ್ಮಾ(Rohit) ಅಥವಾ ವಿರಾಟ್ ಕೊಹ್ಲಿ(Kohli) ಸ್ಥಾನ ಪಡೆಯುವ ಬಗ್ಗೆ ಇದ್ದ ಊಹಾಪೋಹಗಳು ಕೊನೆಗೊಂಡಿದೆ. ಬಿಸಿಸಿಐ ಪ್ರಕಟಿಸಿದ(India A squad) ತಂಡದಲ್ಲಿ ಇಬ್ಬರೂ ಅವಕಾಶ ಪಡೆದಿಲ್ಲ. ಸೆಪ್ಟೆಂಬರ್ 30 ರಂದು ಕಾನ್ಪುರದಲ್ಲಿ ನಡೆಯಲಿರುವ ಆರಂಭಿಕ ಪಂದ್ಯಕ್ಕೆ ರಜತ್ ಪಟಿದಾರ್ ನಾಯಕರಾಗಲಿದ್ದಾರೆ. ಆದರೆ ಅಕ್ಟೋಬರ್ 3 ಮತ್ತು 5 ರಂದು ನಡೆಯಲಿರುವ ಪಂದ್ಯಗಳಿಗೆ ತಿಲಕ್ ವರ್ಮಾ ನಾಯಕನಾಗಿದ್ದಾರೆ.
ಏಷ್ಯಾ ಕಪ್‌ಗಾಗಿ ಪ್ರಸ್ತುತ ದುಬೈನಲ್ಲಿರುವ ತಿಲಕ್, ಅಭಿಷೇಕ್ ಶರ್ಮಾ, ಹರ್ಷಿತ್ ರಾಣಾ ಮತ್ತು ಅರ್ಷದೀಪ್ ಸಿಂಗ್ ಎರಡನೇ ಪಂದ್ಯದಿಂದ ತಂಡಕ್ಕೆ ಸೇರಲಿದ್ದಾರೆ. ಸೆಪ್ಟೆಂಬರ್ 16 ರಿಂದ ಲಕ್ನೋದಲ್ಲಿ ಪ್ರಾರಂಭವಾಗುವ ಎರಡು ಬಹು-ದಿನಗಳ ಪಂದ್ಯಗಳ ನಂತರ ಏಕದಿನ ಪಂದ್ಯಗಳು ನಡೆಯಲಿವೆ.
ಮೊದಲ ಪಂದ್ಯಕ್ಕೆ ಭಾರತ ಎ ತಂಡ
ರಜತ್ ಪಾಟಿದಾರ್ (ನಾಯಕ), ಪ್ರಭಾಸಿಮ್ರಾನ್ ಸಿಂಗ್ (ವಿ.ಕೀ.), ರಿಯಾನ್ ಪರಾಗ್, ಆಯುಷ್ ಬಡೋನಿ, ಸೂರ್ಯಾಂಶ್ ಶೆಡ್ಗೆ, ವಿಪ್ರಜ್ ನಿಗಮ್, ನಿಶಾಂತ್ ಸಿಂಧು, ಗುರ್ಜಪ್ನೀತ್ ಸಿಂಗ್, ಯುಧ್ವಿರ್ ಸಿಂಗ್, ರವಿ ಬಿಷ್ಣೋಯ್, ಅಭಿಷೇಕ್ ಪೊರೆಲ್ (ವಿ.ಕೀ.), ಪ್ರಿಯಾಂಶ್ ಆರ್ಯ, ಸಿಮರ್ಜೀತ್ ಸಿಂಗ್.
2 ಮತ್ತು 3ನೇ ಪಂದ್ಯಕ್ಕೆ ಭಾರತ ಎ ತಂಡ
ತಿಲಕ್ ವರ್ಮಾ (ನಾಯಕ), ರಜತ್ ಪಾಟಿದಾರ್ (ಉಪನಾಯಕ), ಅಭಿಷೇಕ್ ಶರ್ಮಾ, ಪ್ರಭಾಸಿಮ್ರಾನ್ ಸಿಂಗ್ (ವಿ.ಕೀ.), ರಿಯಾನ್ ಪರಾಗ್, ಆಯುಷ್ ಬಡೋನಿ, ಸೂರ್ಯಾಂಶ್ ಶೆಡ್ಗೆ, ವಿಪ್ರಜ್ ನಿಗಮ್, ನಿಶಾಂತ್ ಸಿಂಧು, ಗುರ್ಜಪ್ನೀತ್ ಸಿಂಗ್, ಯುಧ್ವಿರ್ ಸಿಂಗ್, ರವಿ ಬಿಷ್ಣೋಯ್, ಅಭಿಷೇಕ್ ಸಿಂಗ್ ಪೊರೆಲ್, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್.