ಕಾನ್ಪುರ: ಭಾರತ ಎ ಮತ್ತು ಆಸ್ಟ್ರೇಲಿಯಾ ಎ ನಡುವಿನ ಮೊದಲ ಅನಧಿಕೃತ ಏಕದಿನ ಪಂದ್ಯವು ಮಳೆಯಿಂದಾಗಿ ಒಂದೇ ಒಂದು ಎಸೆತ ಎಸೆಯದೆ ರದ್ದಾಯಿತು. ಬಿಟ್ಟು ಬಿಡದೆ ಸುರಿದ ಮಳೆ ಯಾವ ಹಂತದಲ್ಲಿಯೂ ಪಂದ್ಯಕ್ಕೆ ಅವಕಾಶವೇ ನೀಡಲಿಲ್ಲ. ಅಂತಿಮವಾಗಿ ಪಂದ್ಯವನ್ನು ರದ್ದು ಮಾಡಲಾಯಿತು.
ಗ್ರೀನ್ ಪಾರ್ಕ್ ಮೈದಾನದ ಕಳಪೆ ಒಳಚರಂಡಿ ವ್ಯವಸ್ಥೆಯಿಂದಾಗಿ ಕಳೆದ ವರ್ಷ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಟೆಸ್ಟ್ ಪಂದ್ಯ ಮೊದಲ ಮೂರು ದಿನಗಳಲ್ಲಿ ಕೇವಲ 35 ಓವರ್‌ಗಳ ಆಟ ಮಾತ್ರ ಸಾಧ್ಯವಾಗಿತ್ತು. ಎರಡನೇ ಅನಧಿಕೃತ ಏಕದಿನ ಪಂದ್ಯ ಶುಕ್ರವಾರ ಇಲ್ಲೇ ನಡೆಯಲಿದೆ.
2017 ರ ನಂತರ ಈ ಸ್ಥಳದಲ್ಲಿ ನಡೆದ ಮೊದಲ ಲಿಸ್ಟ್ ಎ ಪಂದ್ಯವನ್ನು ನೋಡಲು ಬಯಸಿದ್ದ ಪ್ರೇಕ್ಷಕರಿಗೆ ಮಳೆ ನಿರಾಸೆ ಮೂಡಿಸಿತು. ಏಷ್ಯಾ ಕಪ್‌ನಿಂದ ಹಿಂತಿರುಗಿರುವ ಆಟಗಾರರಾದ ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಅರ್ಷದೀಪ್ ಸಿಂಗ್ ಮತ್ತು ಹರ್ಷಿತ್ ರಾಣಾ ಅವರಿಗೆ ಉಳಿದ ಪಂದ್ಯಗಳಿಗೆ ಸ್ಥಾನ ನೀಡಲಾಗಿದೆ.
2 ಮತ್ತು 3ನೇ ಏಕದಿನ ಪಂದ್ಯಗಳಿಗೆ ಭಾರತ ಎ ತಂಡ
ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ (ಉಪ ನಾಯಕ), ಅಭಿಷೇಕ್ ಶರ್ಮಾ, ಪ್ರಭ್‌ಸಿಮ್ರಾನ್ ಸಿಂಗ್ (ವಿಕೀ), ರಿಯಾನ್ ಪರಾಗ್, ಆಯುಷ್ ಬದೋನಿ, ಸೂರ್ಯಾಂಶ್ ಶೆಡ್ಗೆ, ವಿಪ್ರಜ್ ನಿಗಮ್, ನಿಶಾಂತ್ ಸಿಂಧು, ಗುರ್ಜಪ್‌ನೀತ್ ಸಿಂಗ್, ಯುದ್‌ವೀರ್ ಸಿಂಗ್, ರವಿ ಬಿಷ್ಣೋಯ್, ಅಭಿಷೇಕ್ ಪೋರೆಲ್, ಹರ್ಷಿತ್ ರಾಣಾ, ಆರ್ಷದೀಪ್ ಸಿಂಗ್.
ಇದನ್ನೂ ಓದಿ Asia Cup 2025 final: ಏಷ್ಯಾಕಪ್ ಗೆದ್ರೂ ಟ್ರೋಫಿ ಎತ್ತಿಹಿಡಿಯದ ಭಾರತ; ಚೆಕ್ ಬಿಸಾಡಿದ ಪಾಕ್ ನಾಯಕ!