ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

India selection panel: ಭಾರತ ಆಯ್ಕೆ ಸಮಿತಿಗೆ ಆರ್‌ಪಿ ಸಿಂಗ್, ಪ್ರಗ್ಯಾನ್ ಓಜಾ ಆಯ್ಕೆ ಸಾಧ್ಯತೆ

ಈ ಡಿಸೆಂಬರ್‌ನಲ್ಲಿ 40 ವರ್ಷ ತುಂಬಲಿರುವ ಆರ್‌ಪಿ ಸಿಂಗ್, ಭಾರತ ಪರ 14 ಟೆಸ್ಟ್, 58 ಏಕದಿನ ಮತ್ತು 10 ಟಿ20 ಪಂದ್ಯಗಳನ್ನು ಆಡಿದ್ದು, ಎಲ್ಲಾ ಮಾದರಿ ಸೇರಿ 124 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಎಂಎಸ್ ಧೋನಿ ನೇತೃತ್ವದಲ್ಲಿ ಅವರು ಚೊಚ್ಚಲ ಟಿ20 ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದರು. ಮತ್ತು 2016-17 ರ ರಣಜಿ ಟ್ರೋಫಿಯನ್ನು ಎತ್ತಿ ಹಿಡಿದ ಗುಜರಾತ್ ತಂಡದ ಭಾಗವೂ ಆಗಿದ್ದರು.

ನವದೆಹಲಿ: ಅಜಿತ್ ಅಗರ್ಕರ್ ನೇತೃತ್ವದ ಸಮಿತಿಯಿಂದ ಎಸ್. ಶರತ್ ಮತ್ತು ಸುಬ್ರೋಟೊ ಬ್ಯಾನರ್ಜಿ ನಿರ್ಗಮಿಸಿದ ನಂತರ, ಭಾರತದ ಮಾಜಿ ವೇಗಿ ರುದ್ರ ಪ್ರತಾಪ್ ಸಿಂಗ್(RP Singh) ಮತ್ತು ಸ್ಪಿನ್ನರ್ ಪ್ರಗ್ಯಾನ್ ಓಜಾ(Pragyan Ojha) ಹಿರಿಯರ ರಾಷ್ಟ್ರೀಯ ಆಯ್ಕೆ ಸಮಿತಿ(India selection panel)ಗೆ ಸೇರಲಿದ್ದಾರೆ ಎಂದು ವರದಿಯಾಗಿದೆ.

ಅಶೋಕ್ ಮಲ್ಹೋತ್ರಾ, ಜತಿನ್ ಪರಾಂಜಪೆ ಮತ್ತು ಸುಲಕ್ಷಣ ನಾಯಕ್ ಅವರನ್ನೊಳಗೊಂಡ ಕ್ರಿಕೆಟ್ ಸಲಹಾ ಸಮಿತಿಯು ಇಬ್ಬರು ಮಾಜಿ ಕ್ರಿಕೆಟಿಗರನ್ನು ಅರ್ಜಿ ಸಲ್ಲಿಸಲು ಆಹ್ವಾನಿಸಿದೆ ಎಂದು ಬಿಸಿಸಿಐ ಮೂಲವೊಂದು ಪಿಟಿಐಗೆ ದೃಢಪಡಿಸಿದೆ. ಬಿಸಿಸಿಐಗೆ ನೇಮಕಾತಿಗಳನ್ನು ಶಿಫಾರಸು ಮಾಡುವ ಮೊದಲು ಸಿಎಸಿ ಸಂದರ್ಶನಗಳನ್ನು ನಡೆಸುತ್ತದೆ ಮತ್ತು ಹೊಸ ಆಯ್ಕೆದಾರರು ಮುಂದಿನ ತಿಂಗಳು ತಮ್ಮ ಪಾತ್ರಗಳನ್ನು ವಹಿಸಿಕೊಳ್ಳುವ ನಿರೀಕ್ಷೆಯಿದೆ.

ಈ ಡಿಸೆಂಬರ್‌ನಲ್ಲಿ 40 ವರ್ಷ ತುಂಬಲಿರುವ ಆರ್‌ಪಿ ಸಿಂಗ್, ಭಾರತ ಪರ 14 ಟೆಸ್ಟ್, 58 ಏಕದಿನ ಮತ್ತು 10 ಟಿ20 ಪಂದ್ಯಗಳನ್ನು ಆಡಿದ್ದು, ಎಲ್ಲಾ ಮಾದರಿ ಸೇರಿ 124 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಎಂಎಸ್ ಧೋನಿ ನೇತೃತ್ವದಲ್ಲಿ ಅವರು ಚೊಚ್ಚಲ ಟಿ20 ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದರು. ಮತ್ತು 2016-17 ರ ರಣಜಿ ಟ್ರೋಫಿಯನ್ನು ಎತ್ತಿ ಹಿಡಿದ ಗುಜರಾತ್ ತಂಡದ ಭಾಗವೂ ಆಗಿದ್ದರು.

ಟೆಸ್ಟ್‌ ಕ್ರಿಕೆಟ್‌ನಲ್ಲಿ ಅಮೋಘ ಸಾಧನೆ ತೋರಿರುವ ಓಜಾ, ತಮ್ಮ 144 ಅಂತರರಾಷ್ಟ್ರೀಯ ವಿಕೆಟ್‌ಗಳಲ್ಲಿ 113 ಟೆಸ್ಟ್‌ ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಅವರ ವಿದಾಯ ಪಂದ್ಯದಲ್ಲಿ ಸ್ಮರಣೀಯ 10 ವಿಕೆಟ್‌ ಪಡೆದದ್ದು ಅವರ ಮಹತ್ವದ ಸಾಧನೆ. ದೇಶೀಯ ಕ್ರಿಕೆಟ್‌ನಲ್ಲಿ ಅವರು ಹೈದರಾಬಾದ್, ಬಂಗಾಳ ಮತ್ತು ಬಿಹಾರ ಪರ ಆಡಿದ್ದರು.

ಇದನ್ನೂ ಓದಿ BCCI AGM: ಬಿಸಿಸಿಐ ವಾರ್ಷಿಕ ಮಹಾಸಭೆಯಲ್ಲಿ ಹರ್ಭಜನ್, ಗಂಗೂಲಿ ಭಾಗಿ; ಕುತೂಹಲ ಕೆರಳಿಸಿದ ಸಭೆ