ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

WCL 2025: ಇಂದು ಭಾರತ-ದಕ್ಷಿಣ ಆಫ್ರಿಕಾ ದಿಗ್ಗಜರ ಕ್ರಿಕೆಟ್‌ ಫೈಟ್‌

ಪಂದ್ಯಕ್ಕೆ ಮಳೆ ಭೀತಿ ಕೂಡ ಎದುರಾಗಿದೆ. ಕಳೆದ ಎರಡು ಲೀಗ್‌ ಪಂಯಗಳಿಗೂ ಮಳೆ ಅಡ್ಡಿಪಡಿಸಿತ್ತು. ಜುಲೈ 19 ರಂದು ನಡೆಯಬೇಕಿದ್ದ ಇಂಗ್ಲೆಂಡ್‌ ಮತ್ತು ಆಸ್ಟ್ರೇಲಿಯಾ ನಡುವಣ ಪಂಯ ಒಂದೂ ಎಸೆತ ಕಾಣದೆ ರದ್ದುಗೊಂಡಿತ್ತು. ಇಂದು ನಡೆಯುವ ದಿನದ ಮೊದಲ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ಮತ್ತು ಇಂಗ್ಲೆಂಡ್‌ ಮುಖಾಮುಖಿಯಾಗಲಿವೆ.

ಲಂಡನ್‌: ವಿಶ್ವ ಲೆಜೆಂಡ್ಸ್ ಚಾಂಪಿಯನ್‌ಷಿಪ್‌ (WCL 2025) ಟೂರ್ನಿಯಲ್ಲಿ ಭಾರತ(India Champions) ಇಂದು ದಕ್ಷಿಣ ಆಫ್ರಿಕಾ(South Africa Champions) ವಿರುದ್ಧ ಕಣಕ್ಕಿಳಿಯಲಿದೆ. ಭಾನುವಾರ ನಡೆಯಬೇಕಿದ್ದ ಭಾರತ– ಪಾಕಿಸ್ತಾನ ನಡುವಿನ ಪಂದ್ಯ ರದ್ದುಗೊಂಡಿತ್ತು. ಹೀಗಾಗಿ ಹಾಲಿ ಟೂರ್ನಿಯಲ್ಲಿ ಭಾರತ ಆಡುತ್ತಿರುವ ಮೊದಲ ಪಂದ್ಯ ಇದಾಗಿದೆ. ಭಾರತ ಲೆಜೆಂಡ್ಸ್​ ತಂಡದ ಕೆಲ ಆಟಗಾರರು ಪಾಕಿಸ್ತಾನದ ಜತೆಗೆ ಆಡಲು ಹಿಂದೇಟು ಹಾಕಿದ ಹಿನ್ನೆಲೆಯಲ್ಲಿ ಪಂದ್ಯವನ್ನು ರದ್ದುಗೊಳಿಸಲಾಗಿತ್ತು.

ಪಂದ್ಯ ರದ್ದಾದ ಕಾರಣ ಉಭಯ ತಂಡಗಳಿಗೂ ತಲಾ ಒಂದು ಅಂಕ ನೀಡಲಾಗಿತ್ತು. ಸದ್ಯ ಅಂಕಪಟ್ಟಿಯಲ್ಲಿ ಪಾಕಿಸ್ತಾನ ಅಗ್ರಸ್ಥಾನ ಪಡೆದಿದ್ದು 3 ಅಂಕ ಹೊಂದಿದೆ. 2 ಅಂಕ ಗಳಿಸಿರುವ ದಕ್ಷಿಣ ಆಫ್ರಿಕಾ ಎರಡನೇ ಸ್ಥಾನದಲ್ಲಿದೆ. ಭಾರತ ಒಂದು ಅಂಕ ಗಳಿಸಿ ನಾಲ್ಕನೇ ಸ್ಥಾನದಲ್ಲಿದೆ. ಇಂದಿನ ಪಂದ್ಯದಲ್ಲಿ ಗೆದ್ದರೆ ಎರಡನೇ ಸ್ಥಾನಕ್ಕೇರುವ ಅವಕಾಶವಿದೆ.

ಪಂದ್ಯಕ್ಕೆ ಮಳೆ ಭೀತಿ ಕೂಡ ಎದುರಾಗಿದೆ. ಕಳೆದ ಎರಡು ಲೀಗ್‌ ಪಂಯಗಳಿಗೂ ಮಳೆ ಅಡ್ಡಿಪಡಿಸಿತ್ತು. ಜುಲೈ 19 ರಂದು ನಡೆಯಬೇಕಿದ್ದ ಇಂಗ್ಲೆಂಡ್‌ ಮತ್ತು ಆಸ್ಟ್ರೇಲಿಯಾ ನಡುವಣ ಪಂಯ ಒಂದೂ ಎಸೆತ ಕಾಣದೆ ರದ್ದುಗೊಂಡಿತ್ತು. ಇಂದು ನಡೆಯುವ ದಿನದ ಮೊದಲ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ಮತ್ತು ಇಂಗ್ಲೆಂಡ್‌ ಮುಖಾಮುಖಿಯಾಗಲಿವೆ.

ಸಂಭಾವ್ಯ ಆಡುವ ಬಳಗ

ಭಾರತ: ಶಿಖರ್‌ ಧವನ್‌, ರಾಬಿನ್‌ ಉತ್ತಪ್ಪ, ಸುರೇಶ್‌ ರೈನಾ, ಯುವರಾಜ್‌ ಸಿಂಗ್‌ (ನಾಯಕ), ಅಂಬಾಟಿ ರಾಯುಡು, ಇರ್ಫಾನ್‌ ಪಠಾಣ್‌, ಯೂಸುಫ್‌ ಪಠಾಣ್‌, ಹರ್ಭಜನ್‌ ಸಿಂಗ್‌, ಪೀಯೂಸ್‌ ಚಾವ್ಲಾ, ವರುಣ್‌ ಆರನ್‌, ಸಿದ್ಧಾರ್ಥ್‌ ಕೌಲ್‌/ವಿನಯ್‌ ಕುಮಾರ್‌.

ದಕ್ಷಿಣ ಆಫ್ರಿಕಾ: ಎಬಿ ಡಿವಿಲಿಯರ್ಸ್ (ನಾಯಕ), ಹಾಶಿಮ್ ಆಮ್ಲಾ, ಮೊರ್ನೆ ವ್ಯಾನ್ ವೈಕ್ (ವಿ.ಕೀ.), ಜೆಜೆ ಸ್ಮಟ್ಸ್, ಸರೆಲ್ ಎರ್ವೀ, ಕ್ರಿಸ್ ಮೋರಿಸ್, ಜೀನ್-ಪಾಲ್ ಡುಮಿನಿ, ವೇಯ್ನ್ ಪಾರ್ನೆಲ್, ಹಾರ್ಡಸ್ ವಿಲ್ಜೊಯೆನ್, ಡುವಾನ್ ಒಲಿವಿಯರ್, ಆರನ್ ಫಂಗಿಸೊ.

ಪಂದ್ಯ ಆರಂಭ: ರಾತ್ರಿ 9ಗಂಟೆ.

ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ ಮತ್ತು ಪ್ಯಾನ್‌ಕೋಡ್‌(ಒಟಿಟಿ).