ಮ್ಯಾಂಚೆಸ್ಟರ್: ಇನ್ನಿಂಗ್ಸ್ ಸೋಲಿನ ಭೀತಿಯಲ್ಲಿದ್ದ ಭಾರತ ತಂಡ(Team India) ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯವನ್ನು(IND vs ENG 4th Test) ಡ್ರಾ ಮಾಡಿಕೊಳ್ಳುವ ಮೂಲಕ ಸರಣಿ ಜೀವಂತವಿರಿಸಿದೆ. ಆದರೂ ಕೂಡ ಭಾರತ ತಂಡ ಅನಗತ್ಯ ದಾಲೆಯೊಂದನ್ನು ತನ್ನ ಹೆಸರಿಗೆ ಸೇರಿಸಿಕೊಂಡಿದೆ. ಭಾರತವು 10 ಪಂದ್ಯಗಳನ್ನು ಆಡಿದ ನಂತರ ಒಂದೇ ಸ್ಥಳದಲ್ಲಿ ಒಂದೇ ಒಂದು ಗೆಲುವು ಸಾಧಿಸಲು ಸಾಧ್ಯವಾಗದ ವಿಶ್ವ ಮೊದಲ ತಂಡ ಎನಿಸಿಕೊಂಡಿತು.
ಭಾರತ ಮ್ಯಾಚೆಂಸ್ಟರ್‌ನಲ್ಲಿ(Manchester) ಇದುವರೆಗೆ 10 ಪಂದ್ಯಗಳನ್ನಾಡಿ ಈ ಪೈಕಿ 4ರಲ್ಲಿ ಸೋತಿದ್ದರೆ, 6 ಡ್ರಾಗೊಂಡಿದೆ. ಇಂಗ್ಲೆಂಡ್ ಮ್ಯಾಂಚೆಸ್ಟರ್‌ನಲ್ಲಿ 87 ಟೆಸ್ಟ್ ಆಡಿ 35ರಲ್ಲಿ ಗೆದ್ದಿದ್ದು, 15ರಲ್ಲಿ ಸೋತಿದೆ. 37 ಪಂದ್ಯ ಡ್ರಾಗೊಂಡಿವೆ.
ಭಾರತ ಮಾತ್ರವಲ್ಲದೆ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ಆಸ್ಟ್ರೇಲಿಯಾ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ತಂಡ ಕೂಡ ಇದುವರೆಗೂ ಟೆಸ್ಟ್ ಪಂದ್ಯ ಆಡಿಲ್ಲ. ಈ ಮೂರು ತಂಡಗಳು ಇಲ್ಲಿ ತಲಾ 9 ಟೆಸ್ಟ್ ಪಂದ್ಯಗಳನ್ನು ಆಡಿದೆ.
ಮ್ಯಾಂಚೆಸ್ಟರ್ ಹೊರತುಪಡಿಸಿ, ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ನಲ್ಲಿರುವ ಕೆನ್ಸಿಂಗ್ಟನ್ ಓವಲ್‌ನಲ್ಲಿಯೂ ಭಾರತ ಒಂದೇ ಒಂದು ಟೆಸ್ಟ್ ಗೆಲ್ಲಲು ಸಾಧ್ಯವಾಗಿಲ್ಲ. ವಿಶ್ವದಾದ್ಯಂತ ಒಟ್ಟು ಆರು ಕ್ರೀಡಾಂಗಣಗಳಲ್ಲಿ ಭಾರತ ಐದು ಅಥವಾ ಅದಕ್ಕಿಂತ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿದ್ದರೂ ಗೆಲುವು ಸಾಧಿಸಿಲ್ಲ. ಲಾಹೋರ್, ಗಯಾನಾ, ಕರಾಚಿ ಮತ್ತು ಫೈಸಲಾಬಾದ್ ಭಾರತ ಐತಿಹಾಸಿಕವಾಗಿ ಸೋತ ಸ್ಥಳಗಳಾಗಿವೆ. ಗಮನಾರ್ಹವಾಗಿ, ಪಾಕಿಸ್ತಾನದ ಮೂರು ಸ್ಥಳಗಳಲ್ಲಿ ಭಾರತದ ದಾಖಲೆ ಬದಲಾಗುವ ಸಾಧ್ಯತೆಯಿಲ್ಲ ಏಕೆಂದರೆ ಸಾಂಪ್ರದಾಯಿಕ ಎದುರಾಳಿಗಳ ನಡುವೆ ದ್ವಿಪಕ್ಷೀಯ ಸರಣಿ ನಡೆಯುತ್ತಿಲ್ಲ.