ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025 Points Table: ದ್ವಿತೀಯ ಸ್ಥಾನದಲ್ಲೇ ಮುಂದುವರಿದ ಡೆಲ್ಲಿ ಕ್ಯಾಪಿಟಲ್ಸ್‌

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಮೂರನೇ ಸ್ಥಾನದಲ್ಲಿದ್ದರೆ, ಪಂಜಾಬ್‌ ಕಿಂಗ್ಸ್‌ ತಂಡ ನಾಲ್ಕನೇ ಸ್ಥಾನದಲ್ಲಿದೆ. ಉಳಿದಂತೆ ಹಾಲಿ ಚಾಂಪಿಯನ್‌ ಕೋಲ್ಕತಾ ನೈಟ್‌ ರೈಡರ್ಸ್‌ 7, ರಾಜಸ್ಥಾನ್‌ ರಾಯಲ್ಸ್‌ 8 ನೇ ಸ್ಥಾನದಲ್ಲಿದೆ. ಆರೆಂಜ್‌ ಕ್ಯಾಪ್‌ ಮತ್ತು ಪರ್ಪಲ್‌ ಕ್ಯಾಪ್‌ ವಿಭಾಗದಲ್ಲಿ ಯಾವುದೇ ಬದಲಾವಣೆ ಸಂಭವಿಸಿಲ್ಲ.

ಲಕ್ನೋ: ಮಂಗಳವಾರ ನಡೆದಿದ್ದ ಐಪಿಎಲ್‌ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಆತಿಥೇಯ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವನ್ನು 8 ವಿಕೆಟ್‌ಗಳಿಂದ ಮಣಿಸುವಲ್ಲಿ ಯಶಸ್ವಿಯಾಯಿತು. ಗೆಲುವು ಸಾಧಿಸಿದರೂ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವಲ್ಲಿ ವಿಫಲವಾಯಿತು. ರನ್‌ರೇಟ್‌ ಹಿನ್ನಡೆಯಲ್ಲಿ ಈ ಹಿಂದಿನಂತೆ ದ್ವಿತೀಯ ಸ್ಥಾನದಲ್ಲೇ ಮುಂದುವರಿಯಿತು. ಉತ್ತಮ ರನ್‌ರೇಟ್‌ ಹೊಂದಿರುವ ಗುಜರಾತ್‌ ಅಗ್ರಸ್ಥಾನದಲ್ಲೇ ಉಳಿಯಿತು. ಸೋಲು ಕಂಡ ಲಕ್ನೋ ತಂಡ ಕೂಡ ಈ ಹಿಂದಿನಂತೆ 5ನೇ ಸ್ಥಾನದಲ್ಲೇ ಮುಂದುವರಿಯಿತು. ಇಂದು ನಡೆಯುವ ಪಂದ್ಯದಲ್ಲಿ 9ನೇ ಸ್ಥಾನಿ ಸನ್‌ರೈಸರ್ಸ್‌ ಹೈದರಾಬಾದ್‌ ಮತ್ತು 6ನೇ ಸ್ಥಾನಿ ಮುಂಬೈ ಇಂಡಿಯನ್ಸ್‌ ಕಾದಾಟ ನಡೆಸಲಿವೆ.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಮೂರನೇ ಸ್ಥಾನದಲ್ಲಿದ್ದರೆ, ಪಂಜಾಬ್‌ ಕಿಂಗ್ಸ್‌ ತಂಡ ನಾಲ್ಕನೇ ಸ್ಥಾನದಲ್ಲಿದೆ. ಉಳಿದಂತೆ ಹಾಲಿ ಚಾಂಪಿಯನ್‌ ಕೋಲ್ಕತಾ ನೈಟ್‌ ರೈಡರ್ಸ್‌ 7, ರಾಜಸ್ಥಾನ್‌ ರಾಯಲ್ಸ್‌ 8 ನೇ ಸ್ಥಾನದಲ್ಲಿದೆ. ಆರೆಂಜ್‌ ಕ್ಯಾಪ್‌ ಮತ್ತು ಪರ್ಪಲ್‌ ಕ್ಯಾಪ್‌ ವಿಭಾಗದಲ್ಲಿ ಯಾವುದೇ ಬದಲಾವಣೆ ಸಂಭವಿಸಿಲ್ಲ. ಸಾಯಿ ಸುದರ್ಶನ್‌ ಆರೆಂಜ್‌ ಕ್ಯಾಪ್‌ ಪಡೆದಿದ್ದರೆ, ಪ್ರಸಿದ್ಧ್‌ ಕೃಷ್ಣ ಪರ್ಪಲ್‌ ಕ್ಯಾಪ್‌ ಹೊಂದಿದ್ದಾರೆ.

ಅಂಕಪಟ್ಟಿ ಹೀಗಿದೆ



ಏಕಾನ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಮಂಗಳವಾರ ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಲಕ್ನೋ ತಂಡ ಐಡೆನ್‌ ಮಾರ್ಕ್ರಮ್‌ ಅವರ ಅರ್ಧಶತಕದ ನೆರವಿನಿಂದ 160 ರನ್‌ ಬಾರಿಸಿತು. ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ, ಅಭಿಷೇಕ್‌ ಪೊರೆಲ್‌ ಹಾಗೂ ಕೆಎಲ್‌ ರಾಹುಲ್‌ ಅರ್ಧಶತಕಗಳ ಬಲದಿಂದ 17.5 ಓವರ್‌ಗಳಿಗೆ 2 ವಿಕೆಟ್‌ಗಳಿಂದ 161 ರನ್‌ಗಳನ್ನು ಗಳಿಸಿ 8 ವಿಕೆಟ್‌ಗಳ ಗೆಲುವು ಪಡೆಯಿತು. ಚೇಸಿಂಗ್‌ ವೇಳೆ ರಾಹುಲ್‌ 42 ಎಸೆತಗಳಲ್ಲಿ 3 ಸಿಕ್ಸರ್‌ ಹಾಗೂ 3 ಬೌಂಡರಿಗಳೊಂದಿಗೆ ಅಜೇಯ 57 ರನ್‌ ಸಿಡಿಸಿ ಡೆಲ್ಲಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.