ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Asia Cup 2025: ಏಷ್ಯಾಕಪ್‌ ತಂಡದಿಂದ ಬುಮ್ರಾ, ಗಿಲ್ ಔಟ್; ಕೃಣಾಲ್‌ಗೆ ಅವಕಾಶ?

ತಾರಾ ವೇಗಿ ಬುಮ್ರಾ ಫಿಟ್ನೆಸ್‌ ಸಮಸ್ಯೆ ಎದುರಿಸುತ್ತಿರುವ ಕಾರಣ ಏಷ್ಯಾಕಪ್‌ನಲ್ಲಿ ಆಡುತ್ತಾರೊ ಇಲ್ಲವೊ ಎಂಬುದು ಸದ್ಯದ ಕುತೂಹಲ. ಏಷ್ಯಾಕಪ್‌ ಸೆ.9ರಿಂದ 29ರ ವರೆಗೆ ನಡೆಯಲಿದೆ. ಬಳಿಕ ಅ.2ರಿಂದ ವಿಂಡೀಸ್‌ ವಿರುದ್ಧ ತವರಿನ 2 ಟೆಸ್ಟ್‌ನಲ್ಲಿ ಭಾರತ ಆಡಬೇಕಿದೆ. ಕಾರ್ಯದೊತ್ತಡ ಕಾರಣಕ್ಕೆ ಇವೆರಡರ ಪೈಕಿ ಬುಮ್ರಾ ಒಂದರಲ್ಲಿ ಮಾತ್ರ ಆಡುವ ಸಾಧ್ಯತೆ ಹೆಚ್ಚು.

ಮುಂಬೈ: ಬಹುನಿರೀಕ್ಷಿತ ಏಷ್ಯಾಕಪ್‌(Asia Cup 2025) ಕ್ರಿಕೆಟ್‌ ಟೂರ್ನಿಯಲ್ಲಿ ಭಾರತ ತಂಡದ ಪರ ಯಾರಿಗೆಲ್ಲ ಅವಕಾಶ ಸಿಗಬಹುದು ಎಂಬ ಕುರಿತು ಚರ್ಚೆಗಳು ಆರಂಭವಾಗಿದೆ. ಮೂಲಗಳ ಪ್ರಕಾರ ಭಾರತ ಟೆಸ್ಟ್‌ ತಂಡದ ನಾಯಕ ಶುಭಮನ್‌ ಗಿಲ್‌(Shubman Gill), ಅನುಭವಿ ವೇಗಿ ಜಸ್‌ಪ್ರೀತ್‌ ಬುಮ್ರಾ(Jasprit Bumrah)ಗೆ ಈ ಟೂರ್ನಿಯಿಂದ ವಿಶ್ರಾಂತಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಇದಕ್ಕೆ ಕಾರಣ ವೆಸ್ಟ್‌ ಇಂಡೀಸ್‌ ವಿರುದ್ಧದ ಟೆಸ್ಟ್‌ ಸರಣಿ.

ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಕೆಲವು ಸಮಯದಿಂದ ಭಾರತ ಪರ ಆರಂಭಿಕರಾಗಿ ಆಡುತ್ತಿದ್ದಾರೆ. ಮತ್ತು ನಾಯಕ ಸೂರ್ಯಕುಮಾರ್ 3 ನೇ ಸ್ಥಾನದಲ್ಲಿ ಆಡುತ್ತಿದಾರೆ. ಹೀಗಾಗಿ ಯಶಸ್ವಿ ಜೈಸ್ವಾಲ್ ಮತ್ತು ಸಾಯಿ ಸುದರ್ಶನ್ ತಂಡಕ್ಕೆ ಸೇರ್ಪಡೆಯಾದರೆ ಸಂಜುಗೆ ಕಷ್ಟವಾಗಬಹುದು. ಜೈಸ್ವಾಲ್ ಇತ್ತೀಚಿನ ಕೆಲವು ಟಿ20 ಪಂದ್ಯಗಳಲ್ಲಿ ಆಡಿಲ್ಲ. ಶುಭಮನ್ ಗಿಲ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದರೂ ಕೂಡ ಅವರಿಗೆ ಬಿಸಿಸಿಐ ವಿಶ್ರಾಂತಿ ನೀಡಲು ಬಯಸಿದೆ ಎನ್ನಲಾಗಿದೆ. ಏಷ್ಯಾ ಕಪ್‌ ಮುಗಿದೊಡನೆ ವೆಸ್ಟ್ ಇಂಡೀಸ್ ವಿರುದ್ಧ ಎರಡು ಪಂದ್ಯಗಳ ಟೆಸ್ಟ್‌ ಸರಣಿ ಆರಂಭವಾಗಲಿದೆ.

ಇಂಗ್ಲೆಂಡ್‌ನಲ್ಲಿ ಕೌಂಟಿ ಕ್ರಿಕೆಟ್ ಆಡುತ್ತಿರುವ ತಿಲಕ್ ವರ್ಮಾ ಮಧ್ಯಮ ಕ್ರಮಾಂಕದ ಭಾಗವಾಗಿ ಮುಂದುವರಿಯಲಿದ್ದಾರೆ, ಇದರಲ್ಲಿ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್ ಮತ್ತು ಅಕ್ಷರ್ ಪಟೇಲ್ ಕೂಡ ಇದ್ದಾರೆ. ಕುಲದೀಪ್ ಯಾದವ್ ಇಂಗ್ಲೆಂಡ್ ಪ್ರವಾಸದಲ್ಲಿ ಬೆಂಚ್‌ ಕಾದಿದ್ದರೂ ಏಷ್ಯಾಕಪ್‌ನಲ್ಲಿ ಅವರು ಮೊಲ ಆಯ್ಕೆ ಸಿನ್ನರ್‌ ಆಗಿ ಅವಕಾಶ ಪಡೆಯಲಿದ್ದಾರೆ. ವರುಣ್ ಚಕ್ರವರ್ತಿ ಮತ್ತು ಅರ್ಷದೀಪ್ ಸಿಂಗ್ ಕೂಡ ಮೊದಲ ಆಯ್ಕೆಗಳಾಗಿದ್ದರೆ. ಹರ್ಷಿತ್ ರಾಣಾ ಕೂಡ ಆಯ್ಕೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ IND vs ENG: ಟೀಕೆಗಳಿಗೆ ಗುರಿಯಾಗಿರುವ ಜಸ್‌ಪ್ರೀತ್‌ ಬುಮ್ರಾಗೆ ಸಚಿನ್‌ ತೆಂಡೂಲ್ಕರ್‌ ವಿಶೇಷ ಸಂದೇಶ!

ಫಿಟ್ನೆಸ್‌ ಸಮಸ್ಯೆ ಎದುರಿಸುತ್ತಿರುವ ಮೊಹಮ್ಮದ್‌ ಶಮಿ ಮತ್ತು ತಾರಾ ವೇಗಿ ಬುಮ್ರಾ ಏಷ್ಯಾಕಪ್‌ನಲ್ಲಿ ಆಡುತ್ತಾರೊ ಇಲ್ಲವೊ ಎಂಬುದು ಸದ್ಯದ ಕುತೂಹಲ.ಇಂಗ್ಲೆಂಡ್‌ ಸರಣಿಯ ಎಲ್ಲ ಪಂದ್ಯಗಳನ್ನು ಆಡಿರುವ ಮೊಹಮ್ಮದ್‌ ಸಿರಾಜ್‌ಗೂ ಬಿಸಿಸಿಐ ವಿಶ್ರಾಂತಿ ನೀಡುವ ಸಾಧ್ಯತೆ ಅಧಿಕ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಚೊಚ್ಚಲ ಐಪಿಎಲ್ ಗೆಲುವಿನಲ್ಲಿ ಈ ಆಲ್‌ರೌಂಡರ್ ಪ್ರಮುಖ ಪಾತ್ರ ವಹಿಸಿದ್ದ ಕೃಣಾಲ್‌ ಪಾಂಡ್ಯಗೂ ಅವಕಾಶ ಸಿಗುವ ನಿರೀಕ್ಷೆಯಿದೆ. ಒಂದೊಮ್ಮೆ ಅವರಿಗೆ ಅವಕಾಶ ಸಿಕ್ಕರೆ 4 ವರ್ಷಗಳ ಬಳಿಕ ಟೀಮ್‌ ಇಂಡಿಯಾಗೆ ಕಮ್‌ಬ್ಯಾಕ್‌ ಮಾಡಿದಂತಾಗುತ್ತದೆ. ಕೃಣಾಲ್‌ ಕೊನೆ ಬಾರಿ ಆಡಿದ್ದು 2021 ರಲ್ಲಿ.

ಭಾರತ ಸಂಭಾವ್ಯ ತಂಡ

ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ಅರ್ಷ್‌ದೀಪ್ ಸಿಂಗ್, ಹರ್ಷಿತ್ ರಾಣಾ, ಯಶಸ್ವಿ ಜೈಸ್ವಾಲ್, ಜಿತೇಶ್ ಶರ್ಮಾ, ಪ್ರಸಿದ್ಧ್ ಕೃಷ್ಣ, ಕೃನಾಲ್ ಪಾಂಡ್ಯ.