ದುಬೈ: ಪ್ರತಿ ಭಾರೀ ಪಾಕಿಸ್ತಾನ ವಿರುದ್ಧದ ಪಂದ್ಯ ಎಂದರೆ ಭಾರತ(IND vs PAK) ತಂಡಕ್ಕೆ ಇಡೀ ದೇಶವೇ ಒಂದಾಗಿ ಬೆಂಬಲ ಸೂಚಿಸುತ್ತಿತ್ತು. ಪಂದ್ಯ ಆರಂಭಕ್ಕೂ ಮುನ್ನ ದೇಶದ ವಿವಿಧ ಭಾಗಗಳಲ್ಲಿ ಅಭಿಮಾನಿಗಳು ತಂಡದ ಗೆಲುವುವಿಗೆ ವಿಶೇಷ ಪೂಜೆ, ಹವನ ಮಾಡುತ್ತಿದ್ದರು. ಆದರೆ ಈ ಬಾರಿಯ ಏಷ್ಯಾಕಪ್(Asia Cup 2025) ಪಂದ್ಯಕ್ಕೆ ಸ್ವತಃ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಕಾರಣ ಪಹಲ್ಗಾಂ ಉಗ್ರರ ದಾಳಿ. ಆದರೂ ಪಂದ್ಯದ ಬಗ್ಗೆ ಕುತೂಹಲ ಕಡಿಮೆಯಾಗಿಲ್ಲ. 2 ತಂಡಗಳಲ್ಲೂ ವಿಶ್ವ ಶ್ರೇಷ್ಠ ಆಟಗಾರರಿದ್ದು, ಭಾರೀ ಪೈಪೋಟಿ ನಿರೀಕ್ಷಿಸಲಾಗಿದೆ.
ಭಾರತವೇ ಬಲಿಷ್ಠ
ಪಾಕಿಸ್ತಾನಕ್ಕೆ ಹೋಲಿಸಿದರೆ, ಭಾರತವೇ ಬಲಿಷ್ಠ. ಇದರಲ್ಲಿ ಎರಡು ಮಾತಿಲ್ಲ. ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಭಾರತವೇ ಸಮರ್ಥವಾಗಿದೆ. ಶುಭ್‌ಮನ್ ಗಿಲ್, ಅಭಿಷೇಕ್ ಶರ್ಮಾ, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ತಿಲಕ್ ವರ್ಮಾ, ಪಾಂಡ್ಯ, ಸಂಜು ಬ್ಯಾಟಿಂಗ್ ಬಲವಾದರೆ, ಬೌಲಿಂಗ್‌ನಲ್ಲಿ ಕುಲ್‌ದೀಪ್ ಬುಮ್ರಾ, ಅಕ್ಷರ್ ಎದುರಾಳಿಗಳನ್ನು ಕಟ್ಟಿಹಾಕುವಲ್ಲಿ ಸಮರ್ಥರಿದ್ದಾರೆ. ಪಾಕ್ ತಂಡ ಸೈಮ್ ಅಯೂಬ್, ಹಸನ್ ನವಾಜ್, ಫಖರ್ ಜಮಾನ್, ಮೊಹಮ್ಮದ್ ಹಾರಿಸ್‌ರನ್ನು ಹೆಚ್ಚಾಗಿ ಅವಲಂಬಿಸಿದೆ.
ಭಾರತ-ಪಾಕಿಸ್ತಾನ ಏಷ್ಯಾಕಪ್(ಏಕದಿನ, ಟಿ20 ಸೇರಿ)ನಲ್ಲಿ 19 ಬಾರಿ ಮುಖಾಮುಖಿಯಾಗಿವೆ. 10ರಲ್ಲಿ ಭಾರತ, 6ರಲ್ಲಿ ಪಾಕಿಸ್ತಾನ ಗೆದ್ದಿದೆ. 3 ಪಂದ್ಯ ರದ್ದುಗೊಂಡಿವೆ. ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದ ತಾಜಾ ಪಿಚ್ ತಂಡಗಳನ್ನು ಸ್ವಾಗತಿಸಿದೆ. ಇಲ್ಲಿ ಪಾಕಿಸ್ತಾನ, ಭಾರತ ವಿರುದ್ಧ ಆಡಿದ ಕೊನೆಯ ಮೂರು ಟಿ20 ಪಂದ್ಯಗಳಲ್ಲಿ ಎರಡರಲ್ಲಿ ಜಯಿಸಿದೆ.
ಇದನ್ನೂ ಓದಿ IND vs PAK: ಇಂದಿನ ಭಾರತ-ಪಾಕ್ ಪಂದ್ಯಕ್ಕೆ ಸಾಮಾಜಿಕ ತಾಣದಲ್ಲಿ ಬಾಯ್ಕಾಟ್ ಅಭಿಯಾನ