ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಪ್ರೊ ಲೀಗ್‌ ಹಾಕಿ: ಭಾರತಕ್ಕೆ ಬೆಲ್ಜಿಯಂ ಮೊದಲ ಎದುರಾಳಿ

ಆದರೆ ಬೆಲ್ಜಿಯಂ ಮತ್ತು ಅರ್ಜೆಂಟೀನಾ ವಿರುದ್ಧದ ಭಾರತದ ತವರು ಪಂದ್ಯಗಳ ತಾಣ ಇನ್ನೂ ದೃಢೀಕರಿಸಲಾಗಿಲ್ಲ. ಭಾರತ ಮತ್ತು ಪಾಕಿಸ್ತಾನ ನಡುವಿನ ಬಹು ನಿರೀಕ್ಷಿತ ಪಂದ್ಯಗಳು ಮುಂದಿನ ಋತುವಿನ ಕೊನೆಯ ವಾರವಾದ ಜೂನ್ 23 ಮತ್ತು 26 ರಂದು ಇಂಗ್ಲೆಂಡ್‌ನಲ್ಲಿ ನಡೆಯಲಿವೆ.

ನವದೆಹಲಿ: ಎಫ್‌ಐಎಚ್ ಹಾಕಿ ಪ್ರೊ ಲೀಗ್ 2025-26(Men’s Hockey 2025-26 Pro League) ಋತುವು ಡಿಸೆಂಬರ್ 9 ರಿಂದ ಜೂನ್ 28 ರವರೆಗೆ ನಡೆಯಲಿದೆ ಎಂದು ಅಂತರರಾಷ್ಟ್ರೀಯ ಹಾಕಿ ಫೆಡರೇಶನ್ (ಎಫ್‌ಐಎಚ್) ಪ್ರಕಟಿಸಿದೆ.2025-26ರ ಎಫ್‌ಐಎಚ್ ಪ್ರೊ ಲೀಗ್ ಪ್ರಕಟಗೊಂಡಿದ್ದು, ಪಂದ್ಯಾವಳಿಗಳು ಡಿಸೆಂಬರ್ 9 ರಿಂದ ಜೂನ್ 28 ರವರೆಗೆ ನಡೆಯಲಿದೆ. ಭಾರತದ ಪುರುಷರ ಹಾಕಿ ತಂಡವು(India Men’s Hockey) ಫೆಬ್ರವರಿ 11 ರಂದು ಬೆಲ್ಜಿಯಂ ವಿರುದ್ಧ ತವರಿನಲ್ಲಿ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಕಳೆದ ಋತುವಿನಲ್ಲಿ ಭಾರತವು ಎಂಟನೇ ಸ್ಥಾನ ಪಡೆದಿತ್ತು.

ಎಫ್‌ಐಎಚ್ ಪ್ರೊ ಲೀಗ್‌ನ ಏಳನೇ ಆವೃತ್ತಿಯು ಐರ್ಲೆಂಡ್ ಮತ್ತು ಅರ್ಜೆಂಟೀನಾದಲ್ಲಿ ಏಕಕಾಲದಲ್ಲಿ ಪ್ರಾರಂಭವಾಗುತ್ತದೆ. ಏಳು ತಿಂಗಳುಗಳ ಕಾಲ 10 ದೇಶಗಳಲ್ಲಿ ಒಟ್ಟು 144 ಪಂದ್ಯಗಳು ನಡೆಯಲಿವೆ. ಜರ್ಮನಿ ಮತ್ತು ಬೆಲ್ಜಿಯಂ ಪುರುಷರು ಐರ್ಲೆಂಡ್‌ನಲ್ಲಿ ಋತುವನ್ನು ತೆರೆಯಲಿದ್ದಾರೆ, ಆದರೆ ಅರ್ಜೆಂಟೀನಾದಲ್ಲಿ, ಹಾಲಿ ಚಾಂಪಿಯನ್ ನೆದರ್ಲ್ಯಾಂಡ್ಸ್ ಚೊಚ್ಚಲ ತಂಡ ಪಾಕಿಸ್ತಾನವನ್ನು ಎದುರಿಸಲಿದೆ.

ಇಂಗ್ಲೆಂಡ್‌ನಲ್ಲಿ ಭಾರತ-ಪಾಕ್‌ ಮುಖಾಮುಖಿ

ಆದರೆ ಬೆಲ್ಜಿಯಂ ಮತ್ತು ಅರ್ಜೆಂಟೀನಾ ವಿರುದ್ಧದ ಭಾರತದ ತವರು ಪಂದ್ಯಗಳ ತಾಣ ಇನ್ನೂ ದೃಢೀಕರಿಸಲಾಗಿಲ್ಲ. ಭಾರತ ಮತ್ತು ಪಾಕಿಸ್ತಾನ ನಡುವಿನ ಬಹು ನಿರೀಕ್ಷಿತ ಪಂದ್ಯಗಳು ಮುಂದಿನ ಋತುವಿನ ಕೊನೆಯ ವಾರವಾದ ಜೂನ್ 23 ಮತ್ತು 26 ರಂದು ಇಂಗ್ಲೆಂಡ್‌ನಲ್ಲಿ ನಡೆಯಲಿವೆ.

ತಂಡಗಳು

ಅರ್ಜೆಂಟೀನಾ, ಆಸ್ಟ್ರೇಲಿಯಾ, ಬೆಲ್ಜಿಯಂ, ಇಂಗ್ಲೆಂಡ್, ಜರ್ಮನಿ, ಭಾರತ, ನೆದರ್‌ಲ್ಯಾಂಡ್ಸ್, ಪಾಕಿಸ್ತಾನ, ಸ್ಪೇನ್.

ವೇಳಾಪಟ್ಟಿ

ಫೆಬ್ರವರಿ 11: ಬೆಲ್ಜಿಯಂ vs ಭಾರತ

ಫೆಬ್ರವರಿ 12: ಅರ್ಜೆಂಟೀನಾ vs ಭಾರತ

ಫೆಬ್ರವರಿ 14: ಬೆಲ್ಜಿಯಂ vs ಭಾರತ

ಫೆಬ್ರವರಿ 15: ಅರ್ಜೆಂಟೀನಾ vs ಭಾರತ

ಫೆಬ್ರವರಿ 21: ಸ್ಪೇನ್ vs ಭಾರತ

ಫೆಬ್ರವರಿ 22: ಭಾರತ vs ಆಸ್ಟ್ರೇಲಿಯಾ

ಫೆಬ್ರವರಿ 24: ಭಾರತ vs ಸ್ಪೇನ್

ಫೆಬ್ರವರಿ 25: ಭಾರತ vs ಆಸ್ಟ್ರೇಲಿಯಾ

ಜೂನ್ 14: ಭಾರತ vs ನೆದರ್ಲ್ಯಾಂಡ್ಸ್

ಜೂನ್ 17: ಜರ್ಮನಿ vs ಭಾರತ

ಜೂನ್ 18: ಭಾರತ vs ಜರ್ಮನಿ

ಜೂನ್ 21: ಭಾರತ vs ನೆದರ್ಲ್ಯಾಂಡ್ಸ್

ಜೂನ್ 23: ಭಾರತ vs ಪಾಕಿಸ್ತಾನ

ಜೂನ್ 26: ಭಾರತ vs ಇಂಗ್ಲೆಂಡ್

ಜೂನ್ 26: ಭಾರತ vs ಪಾಕಿಸ್ತಾನ

ಜೂನ್ 28: ಭಾರತ vs ಇಂಗ್ಲೆಂಡ್