ಲಂಡನ್: ಆರ್‌ಸಿಬಿ ತಂಡದ ಕಾರ್ಯನಿರ್ವಹಣೆ ಮುಖ್ಯಸ್ಥ ಮೊ ಬೊಬಾಟ್(Mo Bobat) ಅವರನ್ನು ಲಂಡನ್ ಸ್ಪಿರಿಟ್(London Spirit) ಕ್ರಿಕೆಟ್ ನಿರ್ದೇಶಕರನ್ನಾಗಿ(Director of Cricket) ನೇಮಿಸಲಾಗಿದೆ. ಮತ್ತು ಅಕ್ಟೋಬರ್ 1, 2025 ರಿಂದ ಈ ಹುದ್ದೆಯನ್ನು ವಹಿಸಿಕೊಳ್ಳಲಿದ್ದಾರೆ. ಈ ಹಿಂದೆ ಇಂಗ್ಲೆಂಡ್ ಪುರುಷರ ತಂಡದ ನಿರ್ದೇಶಕರಾಗಿ ಕಾರ್ಯ ನಿರ್ಹಿಸಿದ್ದರು.
ಏತನ್ಮಧ್ಯೆ, ಲಂಡನ್ ಸ್ಪಿರಿಟ್ ಹೊಸ ರಚನೆಯ ಅಡಿಯಲ್ಲಿ ತನ್ನ ಹೆಸರನ್ನು ಉಳಿಸಿಕೊಕೊಂಡಿದೆ. 2026 ರ ಆರಂಭದಲ್ಲಿ ಮರುಬ್ರಾಂಡ್ ಮಾಡಲು ಯೋಜಿಸಲಾಗಿದೆ. ತಮ್ಮ ಹೊಸ ಪಾತ್ರದ ಕುರಿತು ಮಾತನಾಡಿದ ಬೊಬಾಟ್, "ಇಂತಹ ರೋಮಾಂಚಕಾರಿ ಸಮಯದಲ್ಲಿ ಲಂಡನ್ ಸ್ಪಿರಿಟ್‌ಗೆ ಸೇರುವುದು ಗೌರವದ ಸಂಗತಿ. ಎಂಸಿಸಿ ಮತ್ತು ನಮ್ಮ ಹೊಸ ಪಾಲುದಾರರಾದ ಟೆಕ್ ಟೈಟಾನ್ಸ್‌ನೊಂದಿಗೆ ಕೆಲಸ ಮಾಡುವ ಮೂಲಕ ಈ ಫ್ರಾಂಚೈಸಿಯ ಕ್ರಿಕೆಟ್ ಭವಿಷ್ಯವನ್ನು ರೂಪಿಸುವ ಅವಕಾಶವು ನಂಬಲಾಗದಷ್ಟು ರೋಮಾಂಚನಕಾರಿಯಾಗಿದೆ. ಮೈದಾನದಲ್ಲಿ ಮತ್ತು ಹೊರಗೆ ವಿಶೇಷವಾದದ್ದನ್ನು ನಿರ್ಮಿಸಲು ನಾನು ಎದುರು ನೋಡುತ್ತಿದ್ದೇನೆ" ಎಂದು ಹೇಳಿದರು.
"ಇಂದು ಲಂಡನ್ ಸ್ಪಿರಿಟ್‌ಗೆ ಮಹತ್ವದ ಕ್ಷಣವಾಗಿದೆ. ಮೊ ಬೊಬಾಟ್ ಕ್ರಿಕೆಟ್ ನಿರ್ದೇಶಕರ ಪಾತ್ರಕ್ಕೆ ಸಾಟಿಯಿಲ್ಲದ ಪರಿಣತಿ ಮತ್ತು ದೃಷ್ಟಿಕೋನವನ್ನು ತರುತ್ತಾರೆ. ಮತ್ತು ಅವರನ್ನು ಸ್ವಾಗತಿಸಲು ನಾವು ರೋಮಾಂಚನಗೊಂಡಿದ್ದೇವೆ. ಅದೇ ಸಮಯದಲ್ಲಿ, ಲಂಡನ್ ಸ್ಪಿರಿಟ್ ಹೆಸರನ್ನು ಉಳಿಸಿಕೊಳ್ಳುವುದು ನಿರ್ಮಿಸಲಾದ ಗುರುತಿನಲ್ಲಿ ನಮ್ಮ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ. ನಮ್ಮ ಅಭಿಮಾನಿಗಳು ಮತ್ತು ನಮ್ಮ ಮೌಲ್ಯಗಳೊಂದಿಗೆ ಪ್ರತಿಧ್ವನಿಸುತ್ತದೆ. ನಾವು ಈಗ ಹೊಸ ಯುಗವನ್ನು ತಾಜಾ ಶಕ್ತಿ ಮತ್ತು ಸ್ಪಷ್ಟ ಉದ್ದೇಶದಿಂದ ಎದುರು ನೋಡುತ್ತಿದ್ದೇವೆ" ಎಂದು ಲಂಡನ್ ಸ್ಪಿರಿಟ್‌ನ ಅಧ್ಯಕ್ಷ ಜೂಲಿಯನ್ ಮೆಥೆರೆಲ್ ಹೇಳಿದರು.
ಇದನ್ನೂ ಓದಿ The Hundred: ದಿ ಹಂಡ್ರೆಡ್ ಕ್ರಿಕೆಟ್ ಲೀಗ್‌ಗೂ ಕಾಲಿಟ್ಟ ಐಪಿಎಲ್ ಫ್ರಾಂಚೈಸಿ
MCC ತಂಡದಲ್ಲಿ 51% ಪಾಲನ್ನು ಹೊಂದಿದೆ ಮತ್ತು US ಮೂಲದ ಟೆಕ್ ಹೂಡಿಕೆ ಗುಂಪು ಟೆಕ್ ಟೈಟಾನ್ಸ್ ಉಳಿದ 49% ಪಾಲನ್ನು ಹೊಂದಿದೆ. ECB ಇತ್ತೀಚೆಗೆ ಎಲ್ಲಾ ಎಂಟು ತಂಡಗಳು ಖಾಸಗಿ ಮಾಲೀಕತ್ವಕ್ಕೆ ಪರಿವರ್ತನೆಗೊಳ್ಳುತ್ತವೆ ಎಂದು ದೃಢಪಡಿಸಿತ್ತು.