Nat Sciver-Brunt: ಡಬ್ಲ್ಯುಪಿಎಲ್‌ನಲ್ಲಿ ದಾಖಲೆ ಬರೆದ ನ್ಯಾಟ್ ಸಿವರ್ ಬ್ರಂಟ್
ಮುಂಬೈ ಪರ ಬ್ಯಾಟಿಂಗ್‌ನಲ್ಲಿ ಅಷ್ಟಾಗಿ ಕಮಾಲ್ ಮಾಡದ ನ್ಯಾಟ್ ಸ್ಕಿವರ್ ಬ್ರಂಟ್ ಬೌಲಿಂಗ್‌ನಲ್ಲಿ ಉತ್ಕೃಷ್ಟ ಮಟ್ಟದ ಪ್ರದರ್ಶನ ತೋರುವ ಮೂಲಕ 3 ವಿಕೆಟ್ ಕಿತ್ತು ಗೆಲುವಿನ ರುವಾರಿ ಎನಿಸಿಕೊಂಡರು. ಉಳಿದಂತೆ ಅಮೇಲಿಯಾ ಕೆರ್ 2 ವಿಕೆಟ್ ಪಡೆದರು. ಒಂದೇ ಆವೃತ್ತಿಯಲ್ಲಿ 500 ರನ್ ಪೂರೈಸಿದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ನ್ಯಾಟ್ ಸ್ಕಿವರ್ ಬ್ರಂಟ್ ಪಾತ್ರರಾದರು.


ಮುಂಬಯಿ: ಶನಿವಾರ ರಾತ್ರಿ ನಡೆದಿದ್ದ ಮೂರನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್(WPL 2025)ನಲ್ಲಿ ಡೆಲ್ಲಿಯನ್ನು 8 ರನ್‌ಗಳಿಂದ ಮಣಿಸಿದ ಮುಂಬೈ ಇಂಡಿಯನ್ಸ್(Mumbai Indians Women) ತಂಡ 2ನೇ ಬಾರಿಗೆ ಟ್ರೋಫಿ ಗೆದ್ದ ಸಾಧನೆ ಮಾಡಿತು. ಇದೇ ಪಂದ್ಯದಲ್ಲಿ 30 ರನ್ ಬಾರಿಸಿದ ನ್ಯಾಟ್ ಸಿವರ್ ಬ್ರಂಟ್(Nat Sciver-Brunt) ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಒಂದು ಸಾವಿರ ರನ್ ಪೂರೈಸಿ ಈ ಮೈಲುಗಲ್ಲು ನಿರ್ಮಿಸಿದ ಮೊದಲ ಆಟಗಾರ್ತಿ ಎನಿಸಿಕೊಂಡರು. ಅಲ್ಲದೆ ಈ ಆವೃತ್ತಿಯಲ್ಲಿ ಅಮೋಘ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶನ ತೋರುವ ಮೂಲಕ ಹಲವು ಪ್ರಶಸ್ತಿಗೂ ಭಾಜನರಾದರು.
ಮುಂಬೈ ಪರ ಬ್ಯಾಟಿಂಗ್‌ನಲ್ಲಿ ಅಷ್ಟಾಗಿ ಕಮಾಲ್ ಮಾಡದ ನ್ಯಾಟ್ ಸ್ಕಿವರ್ ಬ್ರಂಟ್ ಬೌಲಿಂಗ್‌ನಲ್ಲಿ ಉತ್ಕೃಷ್ಟ ಮಟ್ಟದ ಪ್ರದರ್ಶನ ತೋರುವ ಮೂಲಕ 3 ವಿಕೆಟ್ ಕಿತ್ತು ಗೆಲುವಿನ ರುವಾರಿ ಎನಿಸಿಕೊಂಡರು. ಉಳಿದಂತೆ ಅಮೇಲಿಯಾ ಕೆರ್ 2 ವಿಕೆಟ್ ಪಡೆದರು. ಒಂದೇ ಆವೃತ್ತಿಯಲ್ಲಿ 500 ರನ್ ಪೂರೈಸಿದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ನ್ಯಾಟ್ ಸ್ಕಿವರ್ ಬ್ರಂಟ್ ಪಾತ್ರರಾದರು.
ಈ ಆವೃತ್ತಿಯಲ್ಲಿ 10 ಇನಿಂಗ್ಸ್ ಆಡಿದ ನ್ಯಾಟ್ ಸಿವರ್ ಬ್ರಂಟ್ 523 ರನ್ ಬಾರಿಸಿ ಅತ್ಯಧಿಕ ರನ್ ಬಾರಿಸಿದ ಸಾಧನೆಗಾಗಿ ಆರೆಂಜ್ ಕ್ಯಾಪ್ ಮತ್ತು ಮೋಸ್ಟ್ ವ್ಯಾಲುಯೇಬಲ್ ಪ್ಲೇಯರ್ ಪ್ರಶಸ್ತಿಗೆ ಭಾಜನರಾದರು. ಅಮನ್‌ಜೋತ್ ಕೌರ್ ಎಮರ್ಜಿಂಗ್ ಪ್ಲೇಯರ್, ಅಮೆಲಿಯಾ ಕೆರ್(18 ವಿಕೆಟ್) ಪರ್ಪಲ್ ಕ್ಯಾಚ್ ಪಡೆದರು. ಚಾಂಪಿಯನ್ ಮುಂಬೈ ತಂಡ ಬಹುಮಾನ ಮೊತ್ತವಾಗಿ 6 ಕೋಟಿ ಪಡೆದರೆ, ರನ್ನರ್ ಅಪ್ ಡೆಲ್ಲಿ 3 ಕೋಟಿ ರೂ. ಬಹುಮಾನ ಪಡೆಯಿತು.
Milestone Unlocked 🔓
— Women's Premier League (WPL) (@wplt20) March 15, 2025
The first player to reach 1️⃣0️⃣0️⃣0️⃣ runs in #TATAWPL 👏
Updates ▶ https://t.co/2dFmlnwxVj #TATAWPL | #DCvMI | #Final pic.twitter.com/Jfyxk0L8Mh
ಇಲ್ಲಿನ ಬ್ರೆಬೋರ್ನ್ ಸ್ಟೇಡಿಯಂನಲ್ಲಿ ಶನಿವಾರ ನಡೆದಿದ್ದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಡೆಲ್ಲಿ ಕ್ಯಾಪಿಟಲ್ಸ್ ಉತ್ತಮ ಬೌಲಿಂಗ್ ದಾಳಿ ನಡೆಸಿ ಮುಂಬೈ ತಂಡವನ್ನು 7 ವಿಕೆಟ್‌ಗೆ 149 ರನ್‌ಗೆ ಕಟ್ಟಿ ಹಾಕಿತು. ಆದರೆ ಈ ಅಲ್ಪ ಮೊತ್ತವನ್ನು ಬೆನ್ನಟ್ಟಲು ಸಾಧ್ಯವಾಗದೆ 9 ವಿಕೆಟ್‌ಗೆ 141 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು.
ಈ ಹಿಂದಿನ ಎರಡು ಆವೃತ್ತಿಯ ಫೈನಲ್ ಪಂದ್ಯದಲ್ಲಿ ಎಡವಿದಂತೆ ಡೆಲ್ಲಿ ಈ ಬಾರಿಯೂ ಬ್ಯಾಟಿಂಗ್‌ನಲ್ಲಿ ಎಡವಿತು. ನಂಬಿಕಸ್ಥ ಆಟಗಾರ್ತಿಯರಾದ ನಾಯಕಿ ಮೆಗ್ ಲ್ಯಾನಿಂಗ್ 13 ರನ್‌ಗೆ ಆಟ ಮುಗಿಸಿದರೆ ಅವರ ಬೆನ್ನಲ್ಲೇ ಶಫಾಲಿ ಕೂಡ 4 ರನ್ ಗಳಿಸಿ ಪೆವಿಲಿಯನ್ ಸೇರಿದರು. ಬಳಿಕ ಬಂದ ಜೆಸ್ ಜೊನಾಸೆನ್(13) ವಿಕೆಟ್ ಕಳೆದುಕೊಂಡರು. 50 ರನ್ ಒಟ್ಟುಗೂಡುವ ಮುನ್ನ 4 ವಿಕೆಟ್ ಕಳೆದುಕೊಂಡಿತು. ಬಡಬಡನೇ 4 ಬೌಂಡರಿ ಬಾರಿಸಿದ ಜೆಮೀಮಾ ರಾಡ್ರಿಗಸ್ 30ರನ್ ಬಾರಿಸಿ ವಿಕೆಟ್ ಕೈ ಚೆಲ್ಲಿದರು.