ನವದೆಹಲಿ: ಭಾರತದ ಜಾವೆಲಿನ್ ತಾರೆ ನೀರಜ್ ಚೋಪ್ರಾ(Neeraj Chopra) ಆಗಸ್ಟ್ 28 ರಂದು ಜ್ಯೂರಿಚ್ ಡೈಮಂಡ್ ಲೀಗ್ ಫೈನಲ್‌ನ(Diamond League final) ಅಂತಿಮ ಹಣಾಹಣಿಗೆ ಸಜ್ಜಾಗುತ್ತಿದ್ದಾರೆ. ಅಲ್ಲಿ ಅವರು ಪ್ರತಿಷ್ಠಿತ ಪ್ರಶಸ್ತಿಯನ್ನು ಮರಳಿ ಪಡೆಯುವ ಪ್ರಯತ್ನದಲ್ಲಿ, ಆಂಡರ್ಸನ್ ಪೀಟರ್ಸ್, ಜೂಲಿಯನ್ ವೆಬರ್ ಸೇರಿ ವಿಶ್ವದ ಕೆಲವು ಅಗ್ರ ಎಸೆತಗಾರ ಸವಾಲು ಎದುರಿಸಲಿದ್ದಾರೆ.
ಎರಡು ಬಾರಿ ಒಲಿಂಪಿಕ್ ಪದಕ ವಿಜೇತ ಮತ್ತು ಹಾಲಿ ವಿಶ್ವ ಚಾಂಪಿಯನ್ ಆಗಿರುವ ಚೋಪ್ರಾ, 2022 ರಲ್ಲಿ ಒಮ್ಮೆ ಪ್ರತಿಷ್ಠಿತ ಟ್ರೋಫಿಯನ್ನು ಗೆದ್ದಿದ್ದಾರೆ. ಮತ್ತು 2023 ಮತ್ತು 2024 ರಲ್ಲಿ ಕಳೆದ ಎರಡು ಆವೃತ್ತಿಗಳಲ್ಲಿ ರನ್ನರ್-ಅಪ್ ಆಗಿದ್ದರು. ದೋಹಾ ಮತ್ತು ಪ್ಯಾರಿಸ್‌ನಲ್ಲಿ ನಡೆದ ನಾಲ್ಕು ಅರ್ಹತಾ ಹಂತಗಳಲ್ಲಿ ಎರಡರಲ್ಲಿ ಮಾತ್ರ ಆಡಿದ ನಂತರ ಚೋಪ್ರಾ ಸಿಲೇಸಿಯಾ ಮತ್ತು ಬ್ರಸೆಲ್ಸ್ ಈವೆಂಟ್‌ಗಳನ್ನು ಬಿಟ್ಟು ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ.
14 ಡೈಮಂಡ್ ಲೀಗ್ ಕೂಟಗಳಲ್ಲಿ, ಕೇವಲ ನಾಲ್ಕು ಪಂದ್ಯಗಳು ಪುರುಷರ ಜಾವೆಲಿನ್ ಥ್ರೋ ಅನ್ನು ಒಳಗೊಂಡಿದ್ದವು. ಅದರಲ್ಲಿ ದೋಹಾ, ಪ್ಯಾರಿಸ್, ಸಿಲೇಷಿಯಾ ಮತ್ತು ಬ್ರಸೆಲ್ಸ್ ಲೆಗ್‌ಗಳು ಸೇರಿವೆ. ಚೋಪ್ರಾ ಎರಡು ಪಂದ್ಯಗಳಲ್ಲಿ ಮಾತ್ರ ಭಾಗವಹಿಸಿದ್ದರೂ, ಒಟ್ಟಾರೆಯಾಗಿ ನಾಲ್ಕನೇ ಸ್ಥಾನ ಪಡೆಯುವ ಮೂಲಕ ಫೈನಲ್‌ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡರು.
27 ವರ್ಷದ ಚೋಪ್ರಾ ದೋಹಾ ಲೀಗ್‌ನಲ್ಲಿ 90.23 ಮೀಟರ್ ಎಸೆಯುವ ಮೂಲಕ ಮೊದಲ ಬಾರಿಗೆ 90 ಮೀಟರ್ ದಾಟಿದ್ದರು. ಆದಾಗ್ಯೂ, ಅವರು ಎರಡನೇ ಸ್ಥಾನ ಪಡೆದರು. ಏತನ್ಮಧ್ಯೆ, ಜೂನ್‌ನಲ್ಲಿ ನಡೆದ ಪ್ಯಾರಿಸ್ ಲೀಗ್‌ನಲ್ಲಿ 88.16 ಮೀಟರ್ ಎಸೆಯುವ ಮೂಲಕ ಅವರು ಮೊಲ ಸ್ಥಾನ ಪಡೆದಿದ್ದರು.
ಫೈನಲ್ ಸ್ಪರ್ಧಿಗಳು
ನೀರಜ್ ಚೋಪ್ರಾ (ಭಾರತ)
ಆಂಡರ್ಸನ್ ಪೀಟರ್ಸ್ (ಗ್ರೆನಡಾ)
ಜೂಲಿಯನ್ ವೆಬರ್ (ಜರ್ಮನಿ)
ಕೆಶಾರ್ನ್ ವಾಲ್ಕಾಟ್ (ಟ್ರಿನಿಡಾಡ್ ಮತ್ತು ಟೊಬಾಗೊ)
ಜೂಲಿಯಸ್ ಯೆಗೊ (ಕೀನ್ಯಾ)
ಆಂಡ್ರಿಯನ್ ಮಾರ್ಡೇರ್ (ಮೊಲ್ಡೊವಾ)
ಸೈಮನ್ ವೈಲ್ಯಾಂಡ್ (ಸ್ವಿಟ್ಜರ್ಲೆಂಡ್)