ಹೈದರಾಬಾದ್: ಟೀಮ್ ಇಂಡಿಯಾದ ಯುವ ಆಲ್‌ರೌಂಡರ್ ನಿತೀಶ್ ರೆಡ್ಡಿ(Nitish Reddy) ಅವರಿಗೆ ಕಾನುನು ಸಂಕಷ್ಟ ಎದುರಾಗಿದೆ(Nitish Reddy legal trouble). ಮಾಜಿ ಏಜೆಂಟ್ ರೆಡ್ಡಿ ವಿರುದ್ಧ 5 ಕೋಟಿ ರೂ. ಬಾಕಿ ಪಾವತಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ವರದಿಗಳ ಪ್ರಕಾರ 2024-25ರ ಬಾರ್ಡರ್-ಗವಾಸ್ಕರ್ ಟ್ರೋಫಿಯ ಸಮಯದಲ್ಲಿ ನಿತೀಶ್ ರೆಡ್ಡಿ ಮತ್ತು ಅವರ ಮಾಜಿ ಆಟಗಾರ ಸಂಸ್ಥೆ ಸ್ಕ್ವೇರ್ ದಿ ಒನ್ ನಡುವಿನ ಸಂಬಂಧ ಮುರಿದುಬಿದ್ದಿತ್ತು. ಅಲ್ಲದೆ ನಿತೀಶ್ ಕುಮಾರ್ ಹೊಸ ಮ್ಯಾನೇಜರ್ ಅವರನ್ನು ಆಯ್ಕೆ ಮಾಡಿಕೊಂಡರು. ಆದರೆ ಬಾಕಿ ಹಣವನ್ನು ನಿತೀಶ್ ಪಾವತಿಸದ ಕಾರಣ ಸಂಸ್ಥೆ ಈಗ ಅವರ ಕಾನೂನು ಮೊರೆ ಹೋಗಿದೆ.
ಆಟಗಾರರ ನಿರ್ವಹಣಾ ಸಂಸ್ಥೆ ಸ್ಕ್ವೇರ್ ದಿ ಒನ್ ಪ್ರೈವೇಟ್ ಲಿಮಿಟೆಡ್, ನಿರ್ವಹಣಾ ಒಪ್ಪಂದದ ಉಲ್ಲಂಘನೆ ಮತ್ತು ಬಾಕಿ ಪಾವತಿಸದ ಆರೋಪದ ಮೇಲೆ ಮಧ್ಯಸ್ಥಿಕೆ ಮತ್ತು ಸಂಧಾನ ಕಾಯ್ದೆಯ ಸೆಕ್ಷನ್ 11(6) ರ ಅಡಿಯಲ್ಲಿ ಅರ್ಜಿ ಸಲ್ಲಿಸಿದೆ. ಈ ಪ್ರಕರಣವು ಜುಲೈ 28 ರಂದು ದೆಹಲಿ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಸುವ ಸಾಧ್ಯತೆಯಿದೆ.
ಆಟಗಾರನು ಒಪ್ಪಂದದ ಬಾಕಿಗಳನ್ನು ಪಾವತಿಸದಿರುವ ಮತ್ತು ಕಾನೂನುಬಾಹಿರ ಒಪ್ಪಂದದ ಉಲ್ಲಂಘನೆಗೆ ಸಂಬಂಧಿಸಿದ ಹಕ್ಕುಗಳನ್ನು ನಿರ್ಣಯಿಸಲು ಸ್ವತಂತ್ರ ಮಧ್ಯಸ್ಥಗಾರರನ್ನು ನೇಮಿಸಬೇಕೆಂದು ಅರ್ಜಿಯು ಕೋರಿದೆ.
ಸಂಸ್ಥೆಯು 2021 ರಿಂದ ರೆಡ್ಡಿ ಅವರ ಮ್ಯಾನೇಜ್ ಮೆಂಟ್ ಮಾಡುತ್ತಿದೆ, ನಾಲ್ಕು ವರ್ಷಗಳ ಸಹಯೋಗದ ಅವಧಿಯಲ್ಲಿ ಅವರಿಗೆ ಅನೇಕ ಜಾಹೀರಾತುಗಳು ಮತ್ತು ಬ್ರಾಂಡ್ ಅನುಮೋದನೆಗಳನ್ನು ಸಹ ಏರ್ಪಡಿಸಿದೆ ಎಂದು ಹೇಳಲಾಗಿದೆ. ಇಂಗ್ಲೆಂಡ್ ಟೆಸ್ಟ್ ಸರಣಿಯ ಭಾಗವಾಗಿದ್ದ ನಿತೀಶ್ ಕುಮಾರ್ ಗಾಯಗೊಂಡು ಸರಣಿಯಿಂದ ಹೊರಬಿದ್ದು ತವರಿಗೆ ಮರಳಿದ್ದಾರೆ.